For Quick Alerts
  ALLOW NOTIFICATIONS  
  For Daily Alerts

  ಮೈವಾ ಸ್ಟೋರ್ ಉದ್ಘಾಟಿಸಿ ಮುದ್ದಾಗಿ ಕನ್ನಡ ಮಾತಾಡಿದ 'ಗೂಗ್ಲಿ' ನಟಿ ಕೃತಿ

  By ಫಿಲ್ಮಿಬೀಟ್ ಡೆಸ್ಕ್
  |

  ಮೂರು ವರ್ಷಗಳ ಬಳಿಕ ಕನ್ನಡಕ್ಕೆ ಮರಳಿ ಬಂದಿದ್ದಾರೆ 'ಗೂಗ್ಲಿ' ಚೆಲುವೆ ಕೃತಿ ಕರಬಂಧ. ಆದರೆ ಸಿನಿಮಾಕ್ಕಾಗಿ ಅಲ್ಲ ಬದಲಿಗೆ ಮಳಿಗೆಯೊಂದರ ಉದ್ಘಾಟನೆಗೆ.

  ಬೆಂಗಳೂರಿನ ಇಂದಿರಾನಗರದಲ್ಲಿ ಮೊದಲ ಮೈವಾ ಮಳಿಗೆಯ ಉದ್ಘಾಟನೆ ಸಮಾರಂಭದಲ್ಲಿ ನಟಿ ಕೃತಿ ಕರಬಂಧ ಪಾಲ್ಗೊಂಡಿದ್ದರು. ಪಂಜಾಬಿ ಮೂಲದವರಾದ ಕೃತಿ ಕರಬಂಧ ಕಾರ್ಯಕ್ರಮದಲ್ಲಿ ಮುದ್ದಾಗಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು.

  ''ನನಗೆ ಮೈವಾದ ಉತ್ಪನ್ನಗಳು ಬಹಳ ಇಷ್ಟವಾಗುತ್ತವೆ. ನಾನು ಈ ಮೊದಲು ಮೈವಾದ ಆನ್‌ಲೈನ್ ಸ್ಟೋರ್‌ನಲ್ಲಿ ಅವರ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವರ ಉತ್ಪನ್ನಗಳು ನಿನ್ನ ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಉತ್ತಮವಾದ 'ಡಿವೈನ್' ಸುವಾಸನೆ ತುಂಬುತ್ತವೆ'' ಎಂದಿದ್ದಾರೆ.

  ''ಕೊರೊನಾ ಸಮಯದಲ್ಲಿ ನನಗೆ ಮನೆಯ ಮಹತ್ವ ಹೆಚ್ಚು ಅರಿವಾಯ್ತು. ಮನೆಯನ್ನು ನಾವು ಸದಾ ಸುಂದರವಾಗಿಟ್ಟುಕೊಳ್ಳಬೇಕು. ಮರಳಿ-ಮರಳಿ ಮನೆಗೆ ಬರಬೇಕು ಎಂದೆನಿಸುವಂತೆ ನಮ್ಮ ಮನೆಯನ್ನು ನಾವು ಇರಿಸಿಕೊಳ್ಳಬೇಕು'' ಎಂದಿದ್ದಾರೆ ಕೃತಿ ಕರಬಂಧ.

   Actress Kriti Kharbanda Launches Mavea Store In Bengaluru

  ''ನಾನು ಮೊದಲ ಬಾರಿಗೆ ಮೈವಾದ ವೆನ್ನಿಲ್ಲಾ ಪಾಮ್‌ ಕೇಕ್ ಕ್ಯಾಂಡನ್ ಖರೀದಿಸಿದ್ದೆ. ಆ ಕ್ಯಾಂಡಲ್‌ನಿಂದ ನಮ್ಮ ಮನೆಯೆಲ್ಲ ವೆನ್ನಿಲ್ಲಾದಂತೆ ಸುವಾಸನೆ ಬೀರುತ್ತಿತ್ತು. ನನಗೆ ಅದು ಬಹಳ ಇಷ್ಟವಾಯಿತು. ಆಗಿನಿಂದಲೂ ನಾನು ಮೈವಾದ ವಸ್ತುಗಳನ್ನು ಕೊಳ್ಳುತ್ತಿದ್ದೇನೆ'' ಎಂದರು ಕೃತಿ ಕರಬಂಧ.

  ''ಈ ಸ್ಟೋರ್ ಉದ್ಘಾಟನೆಗೆ ಬಂದಾಗಲೇ ನನಗೆ ಗೊತ್ತಾಗಿತ್ತು. ಮೈವಾದಲ್ಲಿ ಇನ್ನೂ ಎಷ್ಟೋಂದು ಅದ್ಭುತವಾದ ವಸ್ತುಗಳು ಸಿಗುತ್ತವೆ ಎಂಬುದು. ಮೈವಾದ ವಸ್ತುಗಳೆಲ್ಲವೂ ಕೈಯಿಂದಲೇ ಮಾಡಿರುವವು. ಮೈವಾ ತನ್ನ ಉದ್ಯಮದ ಮೂಲಕ ಸಬಲೀಕರಣ ಸಹ ಮಾಡುತ್ತಿದೆ. ಜೊತೆಗೆ ಪುನರ್ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಮೈವಾದಲ್ಲಿ ಶಾಪಿಂಗ್ ಮಾಡುವುದು ಮಹಿಳಾ ಸಮಬಲೀಕರಣಕ್ಕೆ ಸಹಾಯ ಮಾಡಿದಂತಾಗುತ್ತದೆ. ಮೈವಾದ ಎಲ್ಲರಿಗೂ ಶುಭಾಶಯಗಳು'' ಎಂದರು ಕೃತಿ ಕರಬಂಧ.

  English summary
  Actress Kriti Kharbanda launches Mavea's first physical store in Bengaluru's Indiranagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X