»   » ಕೊಳೆತ ಶವವಾಗಿ ಪತ್ತೆಯಾದ ಬಾಲಿವುಡ್ ನಟಿ

ಕೊಳೆತ ಶವವಾಗಿ ಪತ್ತೆಯಾದ ಬಾಲಿವುಡ್ ನಟಿ

Posted By:
Subscribe to Filmibeat Kannada

ಬಾಲಿವುಡ್ ಬಣ್ಣದ ಲೋಕದಲ್ಲಿ ಮಿಂಚಿ ಖ್ಯಾತಿ ಗಳಿಸಬೇಕು ಎಂದಿದ್ದ ಚಿತ್ರನಟಿ ಹಾಗೂ ಕಿರುತೆರೆ ನಟಿ ಕೃತಿಕಾ ಚೌಧರಿ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಿಪ್ಪಿದ್ದಾರೆ. ಕೊಳೆತ ಶವವಾಗಿ ಪತ್ತೆಯಾದ ದೇಹವನ್ನ ಪೊಲೀಸರು ಮಾಡಲ್ ಕಮ್ ನಟಿ ಕೃತಿಕಾ ಚೌಧರಿ ಎಂದು ಗುರುತಿಸಿದ್ದಾರೆ.

ಸೋಮವಾರ ಬೆಳಗ್ಗೆ 3.45ರ ಸುಮಾರಿಗೆ ಅಕ್ಕ ಪಕ್ಕದ ಮನೆಯವರು ಮನೆಯಿಂದ ಹೊರ ಬರುತ್ತಿದ್ದ ಶವ ವಾಸನೆ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಮುರಿದು ಒಳ ಹೋಗಿದ್ದಾರೆ. ಈ ವೇಳೆ ಕೃತಿಕಾ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, 3-4 ದಿನಗಳ ಹಿಂದೆ ಕೃತಿಕಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Actress Kritika Choudhary Found Dead In Mumbai House

ಇನ್ನು ಆರಂಭದಲ್ಲಿ ಅಂಬೋಲಿ ಪೊಲೀಸರು ಕೃತಿಕಾ ಚೌಧರಿಯ ಅವರದ್ದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ನಂತರ ತನಿಖೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿರುವುದರಿಂದ ಇದೊಂದು ಹತ್ಯೆ ಇರಬಹುದು ಎಂದು ಭಾವಿಸಿ ತನಿಖೆ ಮುಂದುವರೆಸಿದ್ದಾರೆ.

ಹರಿದ್ವಾರ ಮೂಲದ ಕೃತಿಕಾ ಚೌಧರಿ ನಟಿ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಬಾಲಾಜಿ ಪ್ರೊಡಕ್ಷನ್ ನ ಕೆಲ ಹಿಂದಿ ಧಾರವಾಹಿಗಳಲ್ಲಿ ನಟಿಸಿದ್ದರು. ಇನ್ನು ಕಂಗನಾ ರನೌತ್ ಅಭಿನಯದ 'ರಾಜ್ಜೋ' ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್ ಬೆಳ್ಳಿತೆರೆಯಲ್ಲೂ ಗಮನ ಸೆಳೆದಿದ್ದರು.

English summary
Actress Kritika Choudhary, 30, was found dead under mysterious circumstances at her residence in suburban Andheri on Monday, police said. Police suspect it to be a case of murder, an investigating official said.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada