'ರಣಧೀರ' ರಾಣಿ ಖುಷ್ಬೂ ಪುತ್ರಿ ಹೇಗಿದ್ದಾರೆ ನೋಡಿ
ನಟಿ ಖುಷ್ಬೂ ದಕ್ಷಿಣ ಭಾರತದ ಜನಪ್ರಿಯ ನಟಿ. ಒಂದು ಕಾಲದಲ್ಲಿ 'ರಣಧೀರ'ನ ರಾಣಿಯಾಗಿದ್ದ ಈ ಚೆಲುವೆ ಈಗ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅಂದಹಾಗೆ, ಸದ್ಯ ನಡೆಯುತ್ತಿರುವ ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಖುಷ್ಬೂ ಭಾಗಿಯಾಗಿದ್ದಾರೆ.
ನಿನ್ನೆ ಮತ್ತು ಇಂದು ದುಬೈನಲ್ಲಿ 2018ನೇ ಸಾಲಿನ ಸೈಮಾ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ನಟಿ ಖುಷ್ಬೂ ಕೂಡ ಹಾಜರಾಗಿದ್ದಾರೆ. ಖುಷ್ಬೂ ಅವರಿಗೆ ಅವರ ಪುತ್ರಿ ಸಾಥ್ ನೀಡಿದ್ದಾರೆ.
ಅಂದಹಾಗೆ, ಸೈಮಾದಲ್ಲಿ ಭಾಗಿಯಾಗಿರುವ ವೇಳೆ ಮಗಳ ಜೊತೆಗೆ ಖುಷ್ಬೂ ಒಂದು ಫೋಟೋ ತೆಗೆದುಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯೆ ಮೂಲಕ ಅದನ್ನು ಹಂಚಿಕೊಂಡಿದ್ದಾರೆ. ಕುಶ್ಬು ಮಗಳು ಹೇಗಿದ್ದಾರೆ ಎಂದು ನೋಡಿರದ ಅಭಿಮಾನಿಗಳ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.

ಅಂದಹಾಗೆ ಖುಷ್ಬೂ ಹಾಗೂ ಸುಂದರ್ ಸಿ ದಂಪತಿಗೆ ಅನಂದಿತಾ ಹಾಗೂ ಅವಂತಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
English summary
Actress Kushboo took selfie with her daughters in SIIMA 2018.


Click it and Unblock the Notifications