'ಝಾನ್ಸಿ'ಯಾಗಿ ಕನ್ನಡಕ್ಕೆ ವಾಪಸ್ ಬಂದ ಲಕ್ಷ್ಮಿ ರೈ

By Naveen

ನಟಿ ಲಕ್ಷ್ಮಿ ರೈ ಕನ್ನಡ ಸಿನಿಮಾ ಮಾಡಿ ಬಹಳ ವರ್ಷಗಳೆ ಆಗಿತ್ತು. ಜೊತೆಗೆ ಬಾಲಿವುಡ್ ಬಾಗಿಲು ತಟ್ಟಿದ್ದ ಲಕ್ಷ್ಮಿ ಮತ್ತೆ ಕನ್ನಡ ಸಿನಿಮಾ ಮಾಡುತ್ತಾರ ಇಲ್ವಾ ಎನ್ನುವ ಕುತೂಹಲ ಕೂಡ ಇತ್ತು. ಆದರೆ, ಈಗ ಮತ್ತೆ ಸ್ಯಾಂಡಲ್ ವುಡ್ ಕಡೆ ಲಕ್ಷ್ಮಿ ರೈ ಮುಖ ಮಾಡಿದ್ದಾರೆ.

ಝಾನ್ಸಿ ರಾಣಿಯಾಗಿ ನಟಿ ಲಕ್ಷ್ಮಿ ರೈ ಕಾಣಿಸಿಕೊಳ್ಳುತ್ತಿದ್ದಾರೆ. 'ಝಾನ್ಸಿ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಹೊಸ ಸಿನಿಮಾ ಬರುತ್ತಿದ್ದು, ಈ ಚಿತ್ರದ ನಾಯಕಿ ಪಾತ್ರದಲ್ಲಿ ಲಕ್ಷ್ಮಿ ರೈ ನಟಿಸಲಿದ್ದಾರೆ. ಚಿತ್ರದ ಕಥೆ ಇಷ್ಟ ಆಗಿರುವ ಕಾರಣ ಸಿನಿಮಾ ಮಾಡಲು ಅವರು ಒಪ್ಪಿಕೊಂಡಿದ್ದಾರಂತೆ.

actress lakshmi rai came back to sandalwood

'ಝಾನ್ಸಿ' ಹೆಸರು ಕೇಳಿತ್ತಿದ್ದ ಹಾಗೆ ಇದು ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜೀವನ ಚರಿತ್ರೆಯ ಸಿನಿಮಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಈ ಪ್ರಶ್ನೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕೋಮಲ್ ನಟನೆಯ 'ಮರ್ಯಾದ ರಾಮಣ್ಣ' ಚಿತ್ರವನ್ನು ಮಾಡಿದ್ದರು.

ನಟಿ ಲಕ್ಷ್ಮಿ ರೈ ಈ ಹಿಂದೆ ಕನ್ನಡದಲ್ಲಿ 'ಸ್ನೇಹನಾ.. ಪ್ರೀತಿನಾ..', 'ಕಲ್ಪನಾ', 'ಮಿಂಚಿನ ಓಟ' ಸೇರಿದಂತೆ ಕೆಲ ಸಿನಿಮಾ ಮಾಡಿದ್ದಾರೆ. ಸದ್ಯ ಮಲೆಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ಬಿಜಿ ಇದ್ದಾರೆ.

More from Filmibeat

English summary
Actress Lakshmi Rai came back to sandalwood. She is playing lead role in 'Jhansi' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X