ಸಿಎಂ ಭೇಟಿ ಮಾಡಿದ ಲೀಲಾವತಿ ಮತ್ತು ವಿನೋದ್ ರಾಜ್

Recommended Video

ಸಿ ಎಂ ಎಚ್ ಡಿ ಕುಮಾರಸ್ವಾಮಿಯನ್ನ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ | Oneindia Kannada

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಹಿರಿಯ ನಟಿ ಲೀಲಾವತಿ ಭೇಟಿ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನ ನಿನ್ನೆ ಭೇಟಿ ಮಾಡಿದ ಲೀಲಾವತಿ ಅವರು ಸೋಲದೇವನಹಳ್ಳಿ ಗ್ರಾಮವನ್ನ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ಸೋಲದೇವನಹಳ್ಳಿ ಗ್ರಾಮ ಸುತ್ತಾಮುತ್ತ ಸುಮಾರು 900 ಎಕರೆ ಪ್ರದೇಶ ಅರಣ್ಯವೆಂದು ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಈ ಘೋಷಣೆಯಿಂದ 650ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಅಲ್ಲಿನ ಕುಟುಂಬಗಳ ರಕ್ಷಣೆ ಮಾಡಬೇಕು ಎಂದು ಅವರ ಪರವಾಗಿ ಲೀಲಾವತಿ ಭೇಟಿ ನೀಡಿ ಮನವಿ ಮಾಡಿದ್ದಾರೆ.

actress leelavathi met chief minister hd kumaraswamy

ಸುಮಾರು 80 ವರ್ಷಗಳಿಂದ ಅಲ್ಲಿನ ಜನ ಜೀವನ ಮಾಡ್ತಿದ್ದಾರೆ. ಎಲ್ಲರ ಮನೆಗೂ ಪಾಣಿ ಮಾಡಿಸಿದ್ದಾರೆ. ಜೊತೆಗೆ ದಿನನಿತ್ಯ ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಲೀಲಾವತಿ ಅವರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಈ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರಂತೆ. ಈ ವೇಳೆ ಲೀಲಾವತಿ ಅವರ ಮಗ ನಟ ವಿನೋದ್ ​ರಾಜ್​ ಕೂಡ ಸಾಥ್ ನೀಡಿದರು.

More from Filmibeat

English summary
Senior actress leelavathi meet chief minister hd kumaraswamy at krishna house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X