For Quick Alerts
  ALLOW NOTIFICATIONS  
  For Daily Alerts

  ಸಿಎಂ ಭೇಟಿ ಮಾಡಿದ ಲೀಲಾವತಿ ಮತ್ತು ವಿನೋದ್ ರಾಜ್

  |
  ಸಿ ಎಂ ಎಚ್ ಡಿ ಕುಮಾರಸ್ವಾಮಿಯನ್ನ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ | Oneindia Kannada

  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಹಿರಿಯ ನಟಿ ಲೀಲಾವತಿ ಭೇಟಿ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನ ನಿನ್ನೆ ಭೇಟಿ ಮಾಡಿದ ಲೀಲಾವತಿ ಅವರು ಸೋಲದೇವನಹಳ್ಳಿ ಗ್ರಾಮವನ್ನ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

  ಸೋಲದೇವನಹಳ್ಳಿ ಗ್ರಾಮ ಸುತ್ತಾಮುತ್ತ ಸುಮಾರು 900 ಎಕರೆ ಪ್ರದೇಶ ಅರಣ್ಯವೆಂದು ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಈ ಘೋಷಣೆಯಿಂದ 650ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಅಲ್ಲಿನ ಕುಟುಂಬಗಳ ರಕ್ಷಣೆ ಮಾಡಬೇಕು ಎಂದು ಅವರ ಪರವಾಗಿ ಲೀಲಾವತಿ ಭೇಟಿ ನೀಡಿ ಮನವಿ ಮಾಡಿದ್ದಾರೆ.

  ಕಷ್ಟದಲ್ಲಿದ್ದ ನಟಿ ಲೀಲಾವತಿಗೆ ಕರುಣಾನಿಧಿ 'ಮಹಾನ್' ವ್ಯಕ್ತಿಯಾಗಿದ್ದೇಕೆ.?ಕಷ್ಟದಲ್ಲಿದ್ದ ನಟಿ ಲೀಲಾವತಿಗೆ ಕರುಣಾನಿಧಿ 'ಮಹಾನ್' ವ್ಯಕ್ತಿಯಾಗಿದ್ದೇಕೆ.?

  ಸುಮಾರು 80 ವರ್ಷಗಳಿಂದ ಅಲ್ಲಿನ ಜನ ಜೀವನ ಮಾಡ್ತಿದ್ದಾರೆ. ಎಲ್ಲರ ಮನೆಗೂ ಪಾಣಿ ಮಾಡಿಸಿದ್ದಾರೆ. ಜೊತೆಗೆ ದಿನನಿತ್ಯ ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

  'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ

  ಲೀಲಾವತಿ ಅವರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಈ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರಂತೆ. ಈ ವೇಳೆ ಲೀಲಾವತಿ ಅವರ ಮಗ ನಟ ವಿನೋದ್ ​ರಾಜ್​ ಕೂಡ ಸಾಥ್ ನೀಡಿದರು.

  English summary
  Senior actress leelavathi meet chief minister hd kumaraswamy at krishna house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X