'ಅಂಬಿ' ಬಗ್ಗೆ ಥ್ರಿಲ್ ಆದ ನಟಿ ಮಾಲಾಶ್ರೀ ಮಾಡಿದ ಟ್ವೀಟ್ ಏನು.?

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಲವು ವರ್ಷದ ನಂತರ ಅಂಬರೀಶ್ ಅವರು ನಾಯಕನಾಗಿ ಕಮ್ ಬ್ಯಾಕ್ ಮಾಡ್ತಿರುವ ಸಿನಿಮಾ ಇದಾಗಿದ್ದು, ಇಡೀ ಸ್ಯಾಂಡಲ್ ವುಡ್ ಅಭಿಮಾನಿಗಳು ಮತ್ತು ಸಿನಿತಾರೆಯರು ಕೂಡ ಖುಷ್ ಆಗಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಅವರು ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಹಾಡನ್ನ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಅಂಬಿ ಚಿತ್ರದ 'ಹೇ ಜಲೀಲಾ....'ವಿಡಿಯೋ ಹಾಡು ಬಿಡುಗಡೆಯಾಗಿತ್ತು. ಈ ಹಾಡನ್ನ ಮಾಲಾಶ್ರೀ ನೋಡಿ ಥ್ರಿಲ್ ಆಗಿದ್ದಾರೆ.

actress malashree liked ambi ning vayassaytho song

''ನಾನು ಈಗ ತಾನೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಹಾಡು ನೋಡಿದೆ. ತುಂಬಾ ವಿಶೇಷವಾಗಿ ಮೂಡಿಬಂದಿದೆ. ಮತ್ತು ಹಾಡಿನ ಸಾಹಿತ್ಯ ಕೂಡ ತುಂಬಾ ಕ್ಯೂಟ್ ಆಗಿದೆ. ತುಂಬಾ ಖುಷಿಯಾಯ್ತು. ಅಂಬರೀಶ್ ಅವರ ಬಗ್ಗೆ ಹೇಳುವುದಕ್ಕೆ ಪದವೇ ಇಲ್ಲ. ಈ ಸಿನಿಮಾ ಬಹುದೊಡ್ಡ ಯಶಸ್ಸು ಕಾಣಲಿ ಎಂದು ಶುಭಹಾರೈಸುತ್ತೇನೆ'' ಎಂದು ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ.

ಈ ಹಾಡಿಗೆ ನಿರ್ದೇಶಕ ಪ್ರೇಮ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದಾರೆ. ಗಾಯಕ ವಿಜಯ ಪ್ರಕಾಶ್ ಹಾಡಿದ್ದಾರೆ.

ಇನ್ನುಳಿದಂತೆ ಯುವ ನಿರ್ದೇಶಕ ಗುರುದತ್ತ ಗಾಣಿಗ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅಂಬರೀಶ್, ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ತಾರಬಳಗದಲ್ಲಿ ಇದ್ದಾರೆ. ಅರ್ಜುನ ಜನ್ಯ ಸಂಗೀತ ಒಳಗೊಂಡಿದೆ.

More from Filmibeat

English summary
Kannada actress malashree liked ambi ning vayassaytho song. the movie will releasing on septmber 27th and features ambareesh and sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X