ರಶ್ಮಿಕಾ ಮಂದಣ್ಣ ಬಗ್ಗೆ ನಟಿ ಮಾಲಾಶ್ರೀ ಮೆಚ್ಚುಗೆ
Recommended Video
ನಟಿ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಬಗ್ಗೆ ನಟಿ ಮಾಲಾಶ್ರೀ ಮೆಚ್ಚುಗೆ ಸೂಚಿಸಿದ್ದಾರೆ.
ರಶ್ಮಿಕಾ ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾ ಟ್ರೇಲರ್ ವೀಕ್ಷಿಸಿರುವ ಮಾಲಾಶ್ರೀ ಅದರ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ''ಈಗ ತಾನೇ ಸರಿಲೇರು ನೀಕೆವ್ವರು ಟ್ರೇಲರ್ ನೋಡಿದೆ. ತುಂಬ ಇಷ್ಟಪಟ್ಟೆ. ರಶ್ಮಿಕಾ ತುಂಬ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಈ ರೀತಿ ವಿಭಿನ್ನವಾಗಿರುವ ಬಬ್ಲಿ ಪಾತ್ರ ನೋಡಿ ನಿಜಕ್ಕೂ ಖುಷಿಪಟ್ಟೆ'' ಎಂದಿದ್ದಾರೆ.
ಟ್ರೇಲರ್ ನೋಡಿ ಇಷ್ಟಪಟ್ಟಿರುವ ಮಾಲಾಶ್ರೀ ಸಿನಿಮಾ ನೋಡಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ. ಮಾಲಾಶ್ರೀ ಟ್ವೀಟ್ ನೋಡಿ ರಶ್ಮಿಕಾ ತುಂಬ ಖುಷಿಯಾಗಿದ್ದಾರೆ. ''ಇದು ನಿಜವಾಗಿಯೂ ಸತ್ಯವೇ? ಧನ್ಯವಾದ ಮೇಡಮ್. ಲವ್ ಯೂ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

'ಸರಿಲೇರು ನೀಕೆವ್ವರು' ಸಿನಿಮಾದ ಮೂಲಕ ಮೊದಲ ಬಾರಿಗೆ ಮಹೇಶ್ ಬಾಬು ರೊಂದಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾ ಟ್ರೇಲರ್ ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ ನಲ್ಲಿ 14 ಮಿಲಿಯನ್ ಗೂ ಹೆಚ್ಚು ಹಿಟ್ಸ್ ಸಿಕ್ಕಿದೆ.
ಅಂದಹಾಗೆ, ರಶ್ಮಿಕಾ ಮಂದಣ್ಣ ನಟನೆಯ ಈ ಹೊಸ ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 11 ರಂದು ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆಗೂ ಮುಂಚೆ ಲೇಡಿ ಸೂಪರ್ ಸ್ಟಾರ್ ಕಡೆಯಿಂದ ರಶ್ಮಿಕಾಗೆ ಮೆಚ್ಚುಗೆ ಸಿಕ್ಕಿದೆ.


Click it and Unblock the Notifications











