twitter
    For Quick Alerts
    ALLOW NOTIFICATIONS  
    For Daily Alerts

    ಜೆಡಿಎಸ್ ನೂತನ ಕಾರ್ಯದರ್ಶಿಯಾಗಿ ನಟಿ ಮಾಳವಿಕಾ

    |

    Malavika
    ನಟಿ ಮಾಳವಿಕಾ ಅವಿನಾಶ್ ಅವರು ಜಾತ್ಯಾತೀತ ಜನತಾ ದಳದ (ಜೆಡಿಎಸ್) ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಮಾರ್ಚ್ 02, 2012 ರಂದು ಮಾಳವಿಕಾ ಜೆಡಿಎಸ್ ಪಕ್ಷ ಸೇರಿಕೊಂಡು ಅದರ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರು.

    "ಸಮಾಜವಾದಿ ತತ್ತ್ವದಿಂದ ಬೆಳೆದು ಬಂದಿರುವ ಜೆಡಿಎಸ್ ಪಕ್ಷಕ್ಕೆ ನಾನು ಸೇರುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ರಾಜಕೀಯದ ಬಗ್ಗೆ ಆಸಕ್ತಿಯಿತ್ತು. ಕಾನೂನು ಶಿಕ್ಷಣ ಪಡೆಯುವಾಗ ಈ ಆಸಕ್ತಿ ಇನ್ನಷ್ಟು ಬೆಳೆಯಿತು. ರಾಜಕೀಯವನ್ನು ವೃತ್ತಿಯಾಗಿ ಸ್ವೀಕರಿಸುತ್ತಿದ್ದೇನೆ" ಎಂದು ಆ ವೇಳೆ ಮಾಳವಿಕಾ ಹೇಳಿದ್ದರು.

    ಅಷ್ಟೇ ಅಲ್ಲ, ಮುಂದುವರಿದ ಮಾಳವಿಕಾ "ಅಭಿನಯ ಕ್ಷೇತ್ರದಲ್ಲಿ ನನ್ನ ಗುರು ಟಿ.ಎನ್ ಸೀತಾರಾಂ ಅವರಿಂದ ಸಮಾಜವಾದದ ಪಾಠ ಕಲಿತಿದ್ದೇನೆ. ಅವರ ಅನುಮತಿ ಪಡೆದೇ ರಾಜಕೀಯಕ್ಕೆ ಇಳಿಯುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಸಿನಿಮಾ ನಟ, ನಟಿಯರು ರಾಜಕೀಯ ಪಕ್ಷ ಸೇರುವುದು ಕಾಮನ್. ಆದರೆ ನಾನು ಇದನ್ನು ವೃತ್ತಿಯಾಗಿ ಸ್ವೀಕರಿಸಿ ಇನ್ಮುಂದೆ ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿದ್ದೇನೆ"

    "ಕಳೆದ ಚುನಾವಣೆ ವೇಳೆಯಲ್ಲೇ ನಾನು ರಾಜಕೀಯ ಪ್ರವೇಶ ಬಯಸಿದ್ದೆ. ಆದರೆ, ನನ್ನ ಮಗ ಇನ್ನೂ ಚಿಕ್ಕವನಿದ್ದ. ಈಗ ನನ್ನ ಮಗನಿಗೆ ನಾಲ್ಕು ವರ್ಷ. ನನ್ನ ಪತಿ ಅವಿನಾಶ್ ಕೂಡಾ ನನ್ನ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ನನ್ನ ಆತ್ಮೀಯರೊಡನೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಮಾಳವಿಕಾ ಮಾರ್ಮಿಕವಾಗಿ ನುಡಿದಿದ್ದರು. ಈಗ ಜೆಡಿಎಸ್ ಪಕ್ಷದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಾಳವಿಕಾ ಪ್ರತಿಕ್ರಿಯೆ ಇನ್ನಷ್ಟೇ ತಿಳಯಬೇಕಿದೆ.

    ಮಾಳವಿಕಾ ನಂತರ ಜೆಡಿಎಸ್ ಪಕ್ಷಕ್ಕೆ ನಟಿ ಪೂಜಾ ಗಾಂಧಿ ಸೇರಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕೀಯದಲ್ಲಿ ಈಗಾಗಲೇ ಕನ್ನಡದ ನಟಿಯರಾದ ತಾರಾ, ಉಮಾಶ್ರೀ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನಂತರ ರಾಜಕೀಯಕ್ಕೆ, ಅದರಲ್ಲೂ ಜೆಡಿಎಸ್ ಸೇರಿಕೊಂಡಿರುವ ಮೂಳವಿಕಾ ಇದೀಗ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ. ಮಾಳವಿಕಾ ಪ್ರತಿಕ್ರಿಯೆ ಹಾಗೂ ಮುಂದಿನ ನಡೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. (ಒನ್ ಇಂಡಿಯಾ ಕನ್ನಡ)

    English summary
    Actress Malavika Avinash appointed as new Secretary for JDS. HD Kumaraswamy ordered this today, on 26th October 2012. She joined JDS officially in 02 March 2012. That time, she told that JDS has socialistic values and she is taking politics as her profession. Her reaction to come for this new Responsibility.
    Friday, October 26, 2012, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X