'ಪುನರ್ಜನ್ಮ ಸಿಕ್ಕಂತೆ ಭಾಸ': ಆರು ತಿಂಗಳ ವಿರಾಮದ ನಂತರ ಬೇಟೆ ಶುರು

ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಶೂಟಿಂಗ್‌ಗೆ ಮರು ಚಾಲನೆ ನೀಡಿದೆ. ಕೊರೊನಾ ವೈರಸ್‌ನಿಂದ ಸುಮಾರು ಐದರಿಂದ ಆರು ತಿಂಗಳು ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಕೆಜಿಎಫ್ ಇಂದಿನಿಂದ ಮತ್ತೆ ಬೇಟೆ ಶುರು ಮಾಡುತ್ತಿದೆ.

Recommended Video

Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

ಈ ಸಂತಸವನ್ನು ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಆರು ತಿಂಗಳ ಬಳಿಕ....ಕೊರೊನಾ ವಿರಾಮ ಅಂತ್ಯವಾಗಿದೆ. ಇಂದಿನಿಂದ ಚಿತ್ರೀಕರಣ. ಪುನರ್ಜನ್ಮ ಸಿಕ್ಕಂತೆ ಭಾಸವಾಗುತ್ತಿದೆ. ಯಾವ ಸಿನಿಮಾ ಊಹಿಸಿ?'' ಎಂದು ಖುಷಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಆಗಸ್ಟ್ 26ರಿಂದ ಕೆಜಿಎಫ್ ಶೂಟಿಂಗ್

ಆಗಸ್ಟ್ 26ರಿಂದ ಕೆಜಿಎಫ್ ಶೂಟಿಂಗ್

ಈ ಹಿಂದೆಯೇ ತಿಳಿಸಿದಂತೆ ಆಗಸ್ಟ್ 26 ಅಂದ್ರೆ ಇಂದಿನಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ನಟ ಯಶ್, ಮಾಳವಿಕಾ ಸೇರಿದಂತೆ ಹಲವರು ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಮುಖ ಪಾತ್ರದಲ್ಲಿ ಮಾಳವಿಕಾ

ಪ್ರಮುಖ ಪಾತ್ರದಲ್ಲಿ ಮಾಳವಿಕಾ

ಕೆಜಿಎಫ್ ಚಾಪ್ಟರ್ 1ರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಮಾಳವಿಕಾ ಅವಿನಾಶ್ ಚಾಪ್ಟರ್ 2ನಲ್ಲೂ ಮುಂದುವರಿಯುತ್ತಿದ್ದಾರೆ. ಸಣ್ಣ ಪಾತ್ರವಾದರೂ ಮಾಳವಿಕಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಅನಂತ್ ನಾಗ್ ಮತ್ತು ಮಾಳವಿಕಾ ಕಾಂಬಿನೇಷನ್ ದೃಶ್ಯಗಳು ಇಂಪ್ರೆಸ್ ಮಾಡಿತ್ತು. ಬಹುಶಃ ಅದೇ ದೃಶ್ಯಗಳನ್ನು ಚಾಪ್ಟರ್ 2ನಲ್ಲೂ ಇರಲಿದೆ.

ಸಂಜಯ್ ದತ್‌ಗಾಗಿ ಕಾಯಬೇಕಿದೆ

ಸಂಜಯ್ ದತ್‌ಗಾಗಿ ಕಾಯಬೇಕಿದೆ

ಇನ್ನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಬಾಲಿವುಡ್ ನಟ ಸಂಜಯ್ ದತ್ ಆಗಮನಕ್ಕಾಗಿ ಕೆಜಿಎಫ್ ಚಿತ್ರತಂಡ ಕಾಯಬೇಕಿದೆ. ದತ್ ಅವರ ಕೆಲವೊಂದು ಭಾಗ ಮಾತ್ರ ಚಿತ್ರೀಕರಣವಾಗಿದ್ದು, ಇನ್ನು ಕೆಲವು ದೃಶ್ಯಗಳು ಬಾಕಿಯಿದೆ. ಚಿಕಿತ್ಸೆ ಪೂರ್ಣಗೊಳಿಸಿದ ನಂತರ ದತ್ ಕೆಜಿಎಫ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ರಿಲೀಸ್ ಬಗ್ಗೆ ಸ್ಪಷ್ಟನೆಗೆ ಬಾರದ ಚಿತ್ರತಂಡ

ರಿಲೀಸ್ ಬಗ್ಗೆ ಸ್ಪಷ್ಟನೆಗೆ ಬಾರದ ಚಿತ್ರತಂಡ

ಕೊರೊನಾ ವೈರಸ್ ಕಾಟ, ಸಂಜಯ್ ದತ್ ಅನಾರೋಗ್ಯ ಕೆಜಿಎಫ್ ಚಿತ್ರತಂಡಕ್ಕೆ ತಲೆಬಿಸಿ ಮಾಡಿದೆ. ಈ ಹಿಂದೆ ನಿರ್ಧರಿಸಿದಂತೆ ಈ ವರ್ಷದ ಅಂತ್ಯಕ್ಕೆ ಸಿನಿಮಾ ರಿಲೀಸ್ ಮಾಡುವುದು ಸವಾಲಿನ ಕೆಲಸ. ಹಾಗಾಗಿ, ಬಿಡುಗಡೆ ಕುರಿತು ಅಂತಿಮ ನಿರ್ಧಾರಕ್ಕೆ ಚಿತ್ರತಂಡ ಬಂದಿಲ್ಲ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಮಾಹಿತಿ ನೀಡುವವರೆಗೂ ಯಾವುದೂ ಪಕ್ಕಾ ಇಲ್ಲ.

More from Filmibeat

English summary
Actress turned politician Malavika is all excited to return to film shooting after a gap of six months due to coronavirus. She will join the KGF Chapter 2 team today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X