»   » ಕನ್ನಡಕ್ಕೆ ತಾಯಿಯಾಗಿ ಬರಲಿದ್ದಾರೆ ಮಂಜು ಭಾರ್ಗವಿ

ಕನ್ನಡಕ್ಕೆ ತಾಯಿಯಾಗಿ ಬರಲಿದ್ದಾರೆ ಮಂಜು ಭಾರ್ಗವಿ

Subscribe to Filmibeat Kannada

ಖ್ಯಾತ ನೃತ್ಯಗಾರ್ತಿ,ತೆಲುಗು ತಾರೆ ಮಂಜು ಭಾರ್ಗವಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ತಮ್ಮ ಮನೋಜ್ಞ ಅಭಿನಯದ ಮೂಲಕ ತೆಲುಗಿನ 'ಶಂಕರಾಭರಣಂ'ಚಿತ್ರದಲ್ಲಿ ಚಿತ್ರ ರಸಿಕರ ಗಮನ ಸೆಳೆದಿದ್ದರು.

ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ನಿರ್ದೇಶಕ ಪಿ.ಎನ್.ಸತ್ಯ ಅವರ 'ಹೊಡಿ ಮಗ' ಚಿತ್ರದಲ್ಲಿ ಮಂಜು ಭಾರ್ಗವಿ ತಾಯಿ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ನಿರ್ದೇಶಕ ಸತ್ಯ ಈ ಬಗ್ಗೆ ಮಾತನಾಡುತ್ತಾ, ಆ ಪಾತ್ರ ತುಂಬ ಮಹತ್ವಪೂರ್ಣವಾದುದು. ತಾಯಿ ಪಾತ್ರ ಅವರಿಗೆ ಸರಿಯಾಗಿ ಒಪ್ಪುತ್ತದೆ ಎಂದರು.

ಜಿ.ವಿ.ಅಯ್ಯರ್ ಅವರ ಚಿತ್ರದಲ್ಲಿ ಅಭಿನಯಿಸುವ ಮೂಲಕ ಈಗಾಗಲೇ ಮಂಜು ಭಾರ್ಗವಿ ಕನ್ನಡಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಜಿ.ವಿ.ಅಯ್ಯರ್ ಚಿತ್ರ 'ನಾಟ್ಯರಾಣಿ ಶಾಂತಲಾ' ಸೆಟ್ಟೇರಲಿಲ್ಲ.ಹಾಗಾಗಿ ಭಾರ್ಗವಿ ಆಂಧ್ರದಲ್ಲೇ ಉಳಿಯಬೇಕಾಯಿತು. ಅಂದಹಾಗೆ 'ಹೊಡಿ ಮಗ' ಚಿತ್ರೀಕರಣ ಆ.21ರಿಂದ ಆರಂಭವಾಗಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada