ಮೊದಲ ಬಾರಿಗೆ ಲಂಡನ್ ನಲ್ಲಿ ರೈಲು ಪ್ರಯಾಣ ಮಾಡಿದ ಮಾನ್ವಿತಾ
ನಟಿ ಮಾನ್ವಿತಾ ಹರೀಶ್ ಅವರಿಗೆ 'ಟಗರು' ಸಿನಿಮಾದ ಬಳಿಕ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಸಿನಿಮಾಗಳ ಕೆಲಸಗಳ ನಡುವೆ ಮಾನ್ವಿತಾ ಈಗ ಕೊಂಚ ರೆಸ್ಟ್ ತೆಗೆದುಕೊಂಡಿದ್ದಾರೆ. ಮಾನ್ವಿತಾ ಸದ್ಯ ತಮ್ಮ ತಾಯಿಯ ಜೊತೆಗೆ ಲಂಡನ್ ಗೆ ತೆರಳಿದ್ದಾರೆ.
ಲಂಡನ್ ನ Waterloo ನಗರದಿಂದ Basingstoke ನಗರಕ್ಕೆ ರೈಲಿನಲ್ಲಿ ಮಾನ್ವಿತಾ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅವರ ತಾಯಿ ಕೂಡ ಜೊತೆಗೆ ಇದ್ದಾರೆ. ತಾಯಿಯ ಭುಜದ ಮೇಲೆ ಮಾನ್ವಿತಾ ಸಣ್ಣ ಹುಡುಗಿಯ ರೀತಿಯ ಮಲಗಿಕೊಂಡಿದ್ದಾರೆ. ತಮ್ಮ ಈ ಸಂತಸದ ಕ್ಷಣವನ್ನು ಮಾನ್ವಿತಾ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಯಿಯ ಜೊತೆ ಸೇರಿ ಲಂಡನ್ ನಲ್ಲಿರುವ ಸುಂದರ ತಾಣಗಳನ್ನು ಮಾನ್ವಿತಾ ನೋಡುತ್ತಿದ್ದಾರೆ. ಸಿನಿಮಾಗಳ ಕೆಲಸಗಳ ನಡುವೆ ಈ ಪ್ರವಾಸ ಅವರಿಗೆ ತುಂಬ ಖುಷಿ ನೀಡಿದೆಯಂತೆ.
ಸದ್ಯ, ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಸಿಷ್ಟ ಸಿಂಹ ಸಹ ಅಭಿನಯಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.
More from Filmibeat
English summary
Kannada actress Manvitha Harish flys to London.


Click it and Unblock the Notifications











