»   » ಹಾಲಿವುಡ್ ನಟನ ಜೊತೆ ಕನ್ನಡ ನಟಿ ಮಾನ್ವಿತಾ ಹರೀಶ್.!

ಹಾಲಿವುಡ್ ನಟನ ಜೊತೆ ಕನ್ನಡ ನಟಿ ಮಾನ್ವಿತಾ ಹರೀಶ್.!

Posted By:
Subscribe to Filmibeat Kannada

ಹಾಲಿವುಡ್ ನಟ ಡ್ಯಾನಿ ಸಪಾನಿ ಅವರು ಜೊತೆ ಕನ್ನಡ ನಟಿ ಮಾನ್ವಿತಾ ಹರೀಶ್ ಅಭಿನಯಿಸುತ್ತಿದ್ದಾರೆ. ಇದೇನಪ್ಪಾ ಮಾನ್ವಿತಾ ಹಾಲಿವುಡ್ ಗೆ ಏನಾದರೂ ಹಾರಿ ಹೋದರ ಅಂತ ಶಾಕ್ ಆಗ್ಬೇಡಿ. ಮಾನ್ವಿತಾ, ಡ್ಯಾನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ನಿಜಾ. ಆದ್ರೆ, ಇದು ಹಾಲಿವುಡ್ ಚಿತ್ರವಲ್ಲ, ಕನ್ನಡ ಸಿನಿಮಾ.

ಹೌದು, 'ರಥಾವರ್' ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪಾ ನಿರ್ದೇಶನ ಮಾಡುತ್ತಿರುವ 'ತಾರಕಾಸುರ' ಚಿತ್ರದಲ್ಲಿ ಹಾಲಿವುಡ್ ನಟ ಡ್ಯಾನಿ ಸಪಾನಿ ಅಭಿನಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ, ಇದೇ ಮೊದಲ ಭಾರಿಗೆ ಹಾಲಿವುಡ್ ನಟನ ಜೊತೆ ಮಾನ್ವಿತಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ 'ತಾರಕಾಸುರ' ಚಿತ್ರದಲ್ಲಿ ಹಾಲಿವುಡ್ ನಟ ಡ್ಯಾನಿ ಅಭಿನಯ

Actress Manvitha Harish With Hollywood Actor Danny Sapani

ಈ ಫೋಟೋವನ್ನ ಈಗ ನಟಿ ಮಾನ್ವಿತಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಫುಲ್ ಖುಷಿ ಆಗಿದ್ದಾರೆ. ಈಗಾಗಲೇ ಮೈಸೂರು, ತಲಕಾಡಿನನಲ್ಲಿ ಡ್ಯಾನಿ ಪಾತ್ರದ ಚಿತ್ರೀಕರಣ ನಡೆದಿದೆ. ಅಂದ್ಹಾಗೆ, ಡ್ಯಾನಿಗೆ ಇದು ಎರಡನೇ ಭಾರತೀಯ ಸಿನಿಮಾ. ಇದಕ್ಕೂ ಮುಂಚೆ ತಮಿಳಿನಲ್ಲಿ 'ಸಿಂಗಂ-2' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.

'ತಾರಕಾಸುರ'ನಿಗೆ ಜೋಡಿಯಾದ 'ಕೆಂಡಸಂಪಿಗೆ' ಮಾನ್ವಿತ

ಇನ್ನು ಕರ್ನಾಟಕ ಚಲನಚಿತ್ರ ಮಂಡಳಿಯ ಕಾರ್ಯದರ್ಶಿ ನರಸಿಂಹಲು ಅವರ ಪುತ್ರ ವೈಭವ್ 'ತಾರಕಸುರ' ಚಿತ್ರದ ನಾಯಕನಾಗಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಈ ಚಿತ್ರವನ್ನ ನರಸಿಂಹಲು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದು, ಕುಮಾರ್ ಗೌಡ ಅವರ ಛಾಯಾಗ್ರಹಣ ಇದೆ.

'ರಥಾವರ' ನಿರ್ದೇಶಕನ 'ತಾರಕಾಸುರ' ಟೀಸರ್ ನೋಡಿ

English summary
Sandalwood actress Manvitha Harish is sharing screen space with Hollywood actor Danny Sapani, in the upcoming Kannada movie Tarakasura. Directed by Chandrashekar Bandiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada