ಪುಲ್ವಾಮಾ ಹುತಾತ್ಮರಿಗೆ ಗೌರವ ಸಲ್ಲಿಸಲು ಮಾನ್ವಿತಾ ಸ್ಪೆಷಲ್ ಸಾಂಗ್
Recommended Video
ನಟಿ ಮಾನ್ವಿತಾ ಕಾಮತ್ ಈಗ ಏನ್ಮಡ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಾಕಂದ್ರೆ 'ಟಗರು' ನಂತರ ಮಾನ್ವಿತಾ ಅಷ್ಟಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿಲ್ಲ. ಆದ್ರೆ ಸಾಕಷ್ಟು ಚಿತ್ರಗಳಲ್ಲಿ ಮಾನ್ವಿತಾ ಬ್ಯುಸಿಯಾಗಿದ್ದಾರೆ.
ಇದರ ನಡುವೆ ಟಗರು ಪುಟ್ಟಿ ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ಮಾನ್ವಿತಾ ಸದ್ದಿಲ್ಲದೆ ಬಾಲಿವುಡ್ ಗೆ ಹಾರಿದ್ದಾರೆ. ಹಾಗಂದ ಮಾತ್ರಕ್ಕೆ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಅಂದ್ಕೋಬೇಡಿ. ಯಾಕಂದ್ರೆ ಮಾನ್ವಿತಾ ಹಿಂದಿಯ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾನ್ವಿತಾ ಬಾಲಿವುಡ್ ಗಾಳಿ ಸೇವಿಸಿ ಬಂದಿದ್ದಾರೆ. ಅಂದ್ಹಾಗೆ ಕನ್ನಡ ಮಾರಾಠಿ ಸಿನಿಮಾಗಳಲ್ಲಿ ಬ್ಯುಸಿ ಇರುವ ಟಗರು ಪುಟ್ಟಿ ಈ ಗ್ಯಾಪಲ್ಲಿ ಆಲ್ಬಂ ಸಾಂಗ್ ಯಾವಾಗ ಮಾಡಿದ್ರು? ಏನಿದರ ವಿಶೇಷ ಅಂತೀರಾ? ಮುಂದೆ ಓದಿ..

ಹಿಂದಿ ಆಲ್ಬಂ ಸಾಂಗ್ ನಲ್ಲಿ ಮಾನ್ವಿತಾ
ಮಾನ್ವಿತಾ ಮೊದಲ ಬಾರಿಗೆ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಾನ್ವಿತಾ ಜೊತೆ ನಾಯಕನಾಗಿ ಬಾಲಿವುಡ್ ನಟ ಕೃಷ್ಣ ಅಭಿಷೇಕ್ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರಂತೆ. ಗಣೇಶ್ ಆಚಾರ್ಯ ಮಾನ್ವಿತಾ ಅವರ ನೆಚ್ಚಿನ ಡ್ಯಾನ್ಸರ್ ಅಂತೆ. ಹಾಗಾಗಿ ಅವರೇ ನೃತ್ಯ ನಿರ್ದೇಶನ ಮಾಡಿರುವುದು ಮಾನ್ವಿತಾ ಅವರಿಗೆ ಸಂತಸ ತಂದಿದೆಯಂತೆ.

ಯೋಧರಿಗೆ ಹಾಡನ್ನು ಅರ್ಪಿಸಿದ ಮಾನ್ವಿತಾ
ಈ ಹಾಡು ಯೋಧರ ಬಗ್ಗೆ ಇರು ಹಾಡಾಗಿದೆಯಂತೆ. ಇಲ್ಲಿ ಮಾನ್ವಿತಾ ಯೋಧನ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಪತಿಯ ಪಾತ್ರದಲ್ಲಿ ಕೃಷ್ಣ ಅಭಿಷೇಕ್ ಮಿಂಚಿದ್ದಾರೆ. ಯುದ್ಧಕ್ಕೆ ಹೋದ ಪತಿ ಮರಳಿ ಬರುವುದನ್ನೆ ಕಾಯುತ್ತಿರುವುದನ್ನು ಈ ಹಾಡಿನ ಮೂಲಕ ಕಟ್ಟಿಕೊಡಲಾಗಿದೆಯಂತೆ. ಈ ಹಾಡನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಮಾಡಲಾಗಿದೆ.

ಸಧ್ಯದಲ್ಲೇ ರಿಲೀಸ್ ಆಗಲಿದೆ ಹಾಡು
ಮೊದಲ ಬಾರಿಗೆ ಹಿಂದಿಯ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಮಾನ್ವಿತಾ ಅವರನ್ನ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಬಾಲಿವುಡ್ ಘಟಾನುಘಟಿ ನಾಯಕರಿಗೆ ನೃತ್ಯ ನಿರ್ದೇಶನ ಮಾಡಿರುವ ಗಣೇಶ ಅಚಾರ್ಯ ಅವರ ನೃತ್ಯ ನಿರ್ದೇಶನ ಈ ಹಾಡಿಗೆ ಇದೆ ಅಂದ್ಮೇಲೆ ಹಾಡಿನ ಮೇಲೆ ಕುತೂಹಲ ಕೊಂಚ ಹೆಚ್ಚಾಗಿದೆ. ಸದ್ಯ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿರುವ ಮಾನ್ವಿತಾ ಸಧ್ಯದಲ್ಲೇ ಹಾಡಿನ ಮೂಲಕ ಎಂಟ್ರಿ ಕೊಡಲಿದ್ದಾರೆ.

ಮಾನ್ವಿತಾ ಬಳಿ ಇವೆ ಕೈತುಂಬ ಸಿನಿಮಾಗಳು
ಮಾನ್ವಿತಾ ಸದ್ಯ ಕನ್ನಡದಲ್ಲಿ ದಾರಿ ತಪ್ಪಿದ ಮಗ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ಜೊತೆಗೆ ಮರಾಠಿ ಚಿತ್ರರಂಗಕ್ಕೂ ಕಾಲಿಟಿದ್ದಾರೆ. ಈ ಹಾಡಿನ ಮೂಲಕ ಈಗ ಬಾಲಿವುಡ್ ಗೆ ಕಾಲಿಡುವ ಸೂಚನೆ ಕೂಡ ನೀಡಿದ್ದಾರೆ. ಇದರ ಜೊತೆಗೆ ಚಿತ್ರಕಥೆ ಕೂಡ ಬರೆಯುತ್ತಿದ್ದಾರೆ. ಒಟ್ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಮಾನ್ವಿತಾ ಈಗ ಆಲ್ಬಂ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ.


Click it and Unblock the Notifications











