ಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿ
ಟಗರು ಸಿನಿಮಾದಿಂದ ಖ್ಯಾತರಾದ ಮಾನ್ವಿತಾ ಉರುಫ್ ಮಾಣ್ವಿತಾ ಪುಟ್ಟಿ, ಇದ್ದಕ್ಕಿದ್ದಂತೆ ಪೊಲೀಸರ ವರ್ತನೆ ಬಗ್ಗೆ ಸಿಟ್ಟಾಗಿದ್ದಾರೆ.
Recommended Video
ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುವ ಮಾನ್ವಿತಾ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಮಾನ್ವಿತಾ ಅವರು ಇಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪೊಲೀಸರು ಬಡ ವ್ಯಾಪಾರಿಯ ಮೇಲೆ ದೋರಿದ ದರ್ಪ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏಕೆ ಇಂಥಹಾ ವರ್ತನೆ ಎಂದು ಪ್ರಶ್ನೆ ಸಹ ಮಾಡಿದ್ದಾರೆ.

ಬಾಳೆಹಣ್ಣು ಬುಟ್ಟಿ ಹೊತ್ತೊಯ್ಯುತ್ತಾರೆ
ಮಾನ್ವಿತಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಸೈಕಲ್ ಮೇಲೆ ಬಾಳೆ ಹಣ್ಣು ಮಾರುತ್ತಿದ್ದ ವಯಸ್ಸಾದ ವ್ಯಕ್ತಿಯನ್ನು ಅಡ್ಡ ಹಾಕಿದ ನಾಲ್ವರು ಪೊಲೀಸರು ಆತನ ಬಾಳೆಹಣ್ಣಿನ ಬುಟ್ಟಿಯನ್ನು ಹೊತ್ತೊಯ್ದಿದ್ದಾರೆ.

ಅಳುತ್ತಾ ಹೋಗುವ ವೃದ್ಧ
ಯಾರೋ ವ್ಯಕ್ತಿ ಅದನ್ನು ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ಕಾಣುವಂತೆ ಪೊಲೀಸರು ಬಾಳೆಹಣ್ಣು ಬುಟ್ಟಿ ಹೊತ್ತೊಯ್ಯುತ್ತಿದ್ದಂತೆ ಆ ವೃದ್ಧ ವ್ಯಕ್ತಿ ಅಸಹಾಯಕನಾಗಿ ಅಳುತ್ತಾ ಸೈಕಲ್ ತಳ್ಳಿಕೊಂಡು ವಾಪಸ್ ಹೋಗುತ್ತಾನೆ. ಇದು ಮಾನ್ವಿತಾ ಅವರ ಮನಸ್ಸು ಕರಗಿಸಿದೆ.

ಬಾಳೆಹಣ್ಣು ವಾಪಸ್ ಕೊಟ್ಟರೇ ಪೊಲೀಸರು?
ಮಾನ್ವಿತಾ ಅವರ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಬಾಳೆಹಳ್ಳಿನ ಬುಟ್ಟಿಯನ್ನು ಪೊಲೀಸರು ಆ ವ್ಯಕ್ತಿಗೆ ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು, ಪೊಲೀಸರು ಬಾಳೆಹಣ್ಣು ವಾಪಸ್ ಕೊಟ್ಟಿರುವುದು ನಿಜವೇ ಎಂಬುದು ಗೊತ್ತಾಗಿಲ್ಲ.

ಟಗರು ಸಿನಿಮಾ ಮೂಲಕ ಖ್ಯಾತರಾದ ಮಾನ್ವಿತಾ
ಕೆಂಡಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾನ್ವಿತಾ, ಟಗರು ಸಿನಿಮಾ ಮೂಲಕ ದೊಡ್ಡ ಹೆಸರು ಗಳಿಸಿದರು. ಪ್ರಸ್ತುತ ಶಿವ 143, ರಾಜಸ್ಥಾನ್ ಡೈರೀಸ್, ರೈನ್‌ಬೋ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











