For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಲ್ಲಿ ನೆಲೆಸಿದ್ದರೂ ಕನ್ನಡಿಗರ ನೆರವಿಗೆನಿಂತ 'ಶಾಸ್ತ್ರಿ' ನಟಿ ಮಾನ್ಯಾ

  |

  ಕೊರೊನಾ ಸಂಕಷ್ಟದಲ್ಲಿ ಅನೇಕ ಸೆಲೆಬ್ರಿಟಿಗಳು ಕಷ್ಟದಲ್ಲಿರೊರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು, ಕಲಾವಿದ, ತಂತ್ರಜ್ಞರಿಗೆ ನಟ-ನಿರ್ದೇಶಕ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದಾರೆ.

  ಉಪೇಂದ್ರ ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಉಪ್ಪಿ ಜೊತೆ ಮತ್ತಷ್ಟು ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಇದೀಗ ದರ್ಶನ್ ಜೊತೆ ಶಾಸ್ತ್ರಿ ಸಿನಿಮಾದಲ್ಲಿ ಮಿಂಚಿದ್ದ ನಟಿ ಮಾನ್ಯಾ ಕೂಡ ಕೈಜೋಡಿಸುವ ಮೂಲಕ ಕನ್ನಡಿಗರ ನೆರವಿಗೆ ನಿಂತಿದ್ದಾರೆ. ಈಗಾಗಲೇ ಉಪೇಂದ್ರಗೆ ಹಿರಿಯ ನಟಿ ಸರೋಜದೇವಿ, ನಟ ಸಾಧು ಕೋಕಿಲಾ, ಶೋಭರಾಜ್, ಪವನ್ ಒಡೆಯರ್ ಸೇರಿದಂತೆ ಅನೇಕರು ಕೈಜೋಡಿಸಿದ್ದಾರೆ. ಮುಂದೆ ಓದಿ...

  ಸಿನಿ ಬಂಧುಗಳಿಗಾಗಿ ಉಪೇಂದ್ರ ಜೊತೆ ಕೈ ಜೋಡಿಸಿದ ತಾರೆಯರುಸಿನಿ ಬಂಧುಗಳಿಗಾಗಿ ಉಪೇಂದ್ರ ಜೊತೆ ಕೈ ಜೋಡಿಸಿದ ತಾರೆಯರು

  1 ಲಕ್ಷ ರೂ. ದೇಣಿಗೆ ನೀಡಿರುವ ಮಾನ್ಯಾ

  1 ಲಕ್ಷ ರೂ. ದೇಣಿಗೆ ನೀಡಿರುವ ಮಾನ್ಯಾ

  ಬಣ್ಣದ ಲೋಕದಿಂದ ದೂರ ಸರಿದಿರುವ ನಟಿ ಮಾನ್ಯಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ದೂರದಲ್ಲಿದ್ದರೂ ಕನ್ನಡಿಗರ ನೆರವಿಗೆ ಧಾವಿಸುವ ಮೂಲಕ ಮಾದರಿಯಾಗಿದ್ದಾರೆ. ಕನ್ನಡಿಗರಿಗಾಗಿ ಅವರ ಮನ ಮಿಡಿದಿದ್ದು 1 ಲಕ್ಷ ರೂ. ನೆರವು ನೀಡಿದ್ದಾರೆ. ಮಾನ್ಯಾ ಮಾನವೀಯ ಕೆಲಸಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಉಪೇಂದ್ರ ಟ್ವೀಟ್

  ಉಪೇಂದ್ರ ಟ್ವೀಟ್

  'ನಟಿ ಮಾನ್ಯಾ 1 ಲಕ್ಷ ರೂ. ನೀಡಿರುವ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಶಾಸ್ತ್ರಿ ಸಿನಿಮಾ ಖ್ಯಾತಿಯ ನಟಿ ಮಾನ್ಯಾ ನಾಯ್ಡು, ಅಗತ್ಯವಿರುವ ಕುಟುಂಬ ಮತ್ತು ಮಕ್ಕಳ ಸಹಾಯಕ್ಕೆಂದು 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆಹಾರ ಕಿಟ್ ವಿತರಿಸಲಾಗುವುದು' ಎಂದು ಹೇಳಿದ್ದಾರೆ.

  ದರ್ಶನ್ 'ಶಾಸ್ತ್ರಿ' ಸಿನಿಮಾದ ನಾಯಕಿ ಮಾನ್ಯಾಗೆ ಪಾರ್ಶ್ವವಾಯುದರ್ಶನ್ 'ಶಾಸ್ತ್ರಿ' ಸಿನಿಮಾದ ನಾಯಕಿ ಮಾನ್ಯಾಗೆ ಪಾರ್ಶ್ವವಾಯು

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಮಾನ್ಯಾ

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಮಾನ್ಯಾ

  ಸಿನಿಮಾರಂಗದಿಂದ ದೂರ ಸರಿದಿರುವ ನಟಿ ಮಾನ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸ್ಯಾಂಡಲ್ ವುಡ್ ನ ಕೆಲವು ನಟರ ಜೊತೆ ಮಾನ್ಯಾ ಇಂದಿಗೂ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಅಮೆರಿಕದಲ್ಲಿ ಸೆಟಲ್ ಆದ ಬಳಿಕ ನಟ ಶ್ರೀಮುರಳಿ ಮತ್ತು ದರ್ಶನ್ ಸೇರಿದಂತೆ ಕೆಲವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಡಿರುವ ಮಾನ್ಯಾ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಮಾನ್ಯಾ ಅನಾರೋಗ್ಯಕ್ಕೆ ತುತ್ತಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸದ್ಯ ಚೇತರಿಸಕೊಂಡಿದ್ದಾರೆ.

  ಮೀಡಿಯಾದವರೂ ಹೇಳ್ತಿದ್ದಾರೆ ಸೋನು ಸೂದ್ ಪ್ರಧಾನಿ ಆಗಬೇಕಂತೆ! | Filmibeat Kannada
  ಮಾನ್ಯಾ ಸಿನಿಮಾ ಬದುಕು

  ಮಾನ್ಯಾ ಸಿನಿಮಾ ಬದುಕು

  ಮಲಯಾಳಂ ಚಿತ್ರರಂಗದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಮಾನ್ಯಾ ಬಳಿಕ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲಿ ಮಿಂಚಿದ್ದಾರೆ. 2005ರಲ್ಲಿ ವರ್ಷ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಮಾನ್ಯಾ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ದರ್ಶನ್, ಶ್ರೀಮುರಳಿ ಜೊತೆ ತೆರೆಹಂಚಿಕೊಂಡಿದ್ದ ಮಾನ್ಯಾ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು. 2010ರ ಬಳಿಕ ಮಾನ್ಯಾ ಸಿನಿಮಾರಂಗದ ಕಡೆ ಮುಖ ಮಾಡಿಲ್ಲ. 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ಯಾಗೆ ಒಬ್ಬಳು ಮುದ್ದಾದ ಹೆಣ್ಣು ಮಗಳಿದ್ದಾಳೆ.

  English summary
  Darshan Shastri fame Actress Manya Naidu donates 1 Lakh to help families and children in need.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X