ಅಮೆರಿಕದಲ್ಲಿದ್ದರೂ ಕನ್ನಡ ಮರೆಯದ ತೆಲುಗು ನಟಿ ಮಾನ್ಯಾ ನಾಯ್ಡು

ನಟಿ ಮಾನ್ಯಾ ನಾಯ್ಡು ಎಂದರೆ ಸುಲಭಕ್ಕೆ ಗೊತ್ತಾಗುವುದಿಲ್ಲ. ಶಾಸ್ತ್ರಿ ಸಿನಿಮಾದ ನಾಯಕಿ ಎಂದರೆ ಥಟ್ಟನೆ ಮುಖ ನೆನಪಿಗೆ ಬರುತ್ತದೆ.

Recommended Video

Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

ಹೌದು, ಶಾಸ್ತ್ರಿ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾನ್ಯಾ ನಾಯ್ಡು ಪ್ರಸ್ತುತ ಸಿನಿಮಾರಂಗದಿಂದ ದೂರವಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ.

ಕನ್ನಡ ಸಿನಿಮಾರಂಗದಿಂದ ದೂರವಾಗಿದ್ದರೂ ಸಹ ಮಾನ್ಯಾ ಕನ್ನಡದಿಂದ ದೂರವಾಗಿಲ್ಲ. ಕನ್ನಡದ ಹಾಡುಗಳನ್ನು ಹಾಡಿ, ಕನ್ನಡ ಸಿನಿಮಾಗಳಿಗೆ ಶುಭಾಶಯಗಳನ್ನು ಕನ್ನಡಲ್ಲೇ ಕೋರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಮಾನ್ಯಾ.

ವಿಷ್ಣುವರ್ಧನ್ ಸಿನಿಮಾದ ಹಾಡು

ವಿಷ್ಣುವರ್ಧನ್ ಸಿನಿಮಾದ ಹಾಡು

ಇತ್ತೀಚೆಗಷ್ಟೆ ಕನ್ನಡದಲ್ಲಿ ತಾವು ಮೊದಲ ನಟಿಸಿದ ವಿಷ್ಣುವರ್ಧನ್ ನಾಯಕರಾಗಿದ್ದ ವರ್ಷ ಸಿನಿಮಾದ ಹಾಡನ್ನು ಸುಶ್ರಾವ್ಯವಾಗಿ ಹಾಡಿ, ಮಗಳಿಗೆ ಕನ್ನಡದ ಪರಿಚಯ ಮಾಡಿಕೊಟ್ಟಿದ್ದ ಮಾನ್ಯಾ ನಾಯ್ಡು. ಈಗ ಶಾಸ್ತ್ರಿ ಸಿನಿಮಾದ ಹಾಡು ಹಾಡಿದ್ದಾರೆ.

ಶಾಸ್ತ್ರಿ ಸಿನಿಮಾ ಬಿಡುಗಡೆ ಆಗಿ 15 ವರ್ಷ

ಶಾಸ್ತ್ರಿ ಸಿನಿಮಾ ಬಿಡುಗಡೆ ಆಗಿ 15 ವರ್ಷ

ಶಾಸ್ತ್ರಿ ಸಿನಿಮಾ ಬಿಡುಗಡೆ ಆಗಿ ಹದಿನೈದು ವರ್ಷವಾದ ಸಂದರ್ಭದಲ್ಲಿ ಮಾನ್ಯಾ ನಾಯ್ಡು ಅವರು, ಅದೇ ಸಿನಿಮಾದ 'ಓ ಹೃದಯ ಓ ಹೃದಯ ಇದು ಮಾಯಾನಾ..' ಹಾಡು ಹಾಡಿದ್ದಾರೆ. ನಟ ದರ್ಶನ್, ಮಾನ್ಯಾ ನಾಯ್ಡು ಅಭಿನಯದ ಶಾಸ್ತ್ರಿ ಸಿನಿಮಾ 2005 ರಲ್ಲಿ ಬಿಡುಗಡೆ ಆಗಿ ಭಾರಿ ಹಿಟ್ ಎನಿಸಿಕೊಂಡಿತ್ತು.

ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

ವಿಷ್ಣುವರ್ಧನ್, ರಮೇಶ್ ಅರವಿಂದ್ ಅಭಿನಯದ ವರ್ಷಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಶಾಸ್ತ್ರಿ, ಶಂಭು, ಬೆಳ್ಳಿ ಬೆಟ್ಟ, ಅಂಬಿ, ಈ ಪ್ರೀತಿ ಒಂಥರಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ತೆಲುಗು, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿಯೂ ಮಾನ್ಯಾ ನಟಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ

ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ

ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ ಮೂಲತಃ ಆಂಧ್ರಪ್ರದೇಶದವರು. ಪ್ರಸ್ತುತ ಅವರು ಅಮೆರಿಕದಲ್ಲಿ ಪತಿ ಮತ್ತು ಮಗಳೊಂದಿಗೆ ನೆಲೆಸಿದ್ದಾರೆ. ಅಲ್ಲಿನ ನಾಗರೀಕತ್ವವನ್ನೂ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಮಾನ್ಯಾ ಕನ್ನಡದಲ್ಲಿ ಹಲವಾರು ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.

More from Filmibeat

English summary
15 years completed for movie Shastri. Movie heroine Manya Naidu sung a song from the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X