ಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿ
ಸ್ಯಾಂಡಲ್ ವುಡ್ ನಟಿ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನಲೆ ಮಯೂರಿ ಸರಳವಾಗಿ ಹಸೆಮಣೆ ಏರಿದ್ದಾರೆ. ನಟಿ ಮಯೂರಿ, ಮದುವೆಯ ಸುದ್ದಿಯನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇತ್ತೀಚಿಗೆ ನಟಿ ಮಯೂರಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
Recommended Video
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಮದುವೆ ಬಗ್ಗೆ ಸುಳಿವು ನೀಡಿದ್ದರು. ಇಂದು ಬೆಳಗ್ಗೆ ಮಯೂರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 12ರಂದು ರಾತ್ರಿ 3 ರಿಂದ 4 ಗಂಟೆ ಮುಹೂರ್ತದಲ್ಲಿ ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಓದಿ..

ದೇವಸ್ಥಾನದಲ್ಲಿ ನಡೆದ ಸರಳ ಮದುವೆ
ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮಯೂರಿ ಮತ್ತು ಅರುಣ್ ಮದುವೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ತೀರ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಕೊರೊನಾ ಹಾವಳಿಯ ಪರಿಣಾಮ ಅದ್ದೂರಿ ಮದುವೆಗೆ ಬ್ರೇಕ್ ಹಾಕಿ ಸರಳವಾಗಿ ಹಸೆಮಣೆ ಏರಿದ್ದಾರೆ.

ಮಯೂರಿ ಹುಡುಗ ಯಾರು?
ನಟಿ ಮಯೂರಿ ಮತ್ತು ಅರುಣ್ ಅವರದ್ದು 10 ವರ್ಷದ ಪ್ರೀತಿ. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮಯೂರಿ ಮತ್ತು ಅರುಣ್ ಮನೆಯವರ ಒಪ್ಪಿಗೆ ಪಡೆದು, ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ದವಾಗಿ ಹಸೆಮಣೆ ಏರಿದ್ದಾರೆ. ಮಯೂರಿ ಪತಿ ಅರುಣ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮದುವೆ ಬಗ್ಗೆ ಸುಳಿವು ನೀಡಿತ್ತು ಮಯೂರಿ ಮಾಡಿದ್ದ ಪೋಸ್ಟ್
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಬಳೆ ತೊಟ್ಟು ಚಂದ ಫೊಸು ಕೊಟ್ಟಿದ್ದರು. ಪಕ್ಕಾ ಮದುಮಗಳಾಗಿ ಕಾಣಿಸಿಕೊಂಡಿರುವ ಮಯೂರಿ ನೋಡಿ ಅಭಿಮಾನಿಗಳಿಗೆ ಅನುಮಾನ ಬಂದಿತ್ತು. ಅಲ್ಲದೆ ಕ್ಯಾಪ್ಷನ್ ಕೂಡ ಹಾಕಿದ್ದರು. ಮದುವೆ ಬಗ್ಗೆಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲವಾದರು ಮಯೂರಿ ಮದುವೆ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಯೂರಿ ಸಿನಿಮಾಗಳು
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಯೂರಿ, ನಂತರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಅಶ್ವಿನಿ ಎಂದೆ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಧಾರಾವಾಹಿ ಮುಗಿಯುತ್ತಿದ್ದಂತೆ ದೊಡ್ಡ ಪರದೆ ಮೇಲು ಮಿಂಚಿ ಸೈ ಎನಿಸಿಕೊಂಡಿದ್ದಾರೆ. ಕೃಷ್ಣಲೀಲಾ, ಇಷ್ಟಕಾಮ್ಯ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದರು. ಧ್ರುವ ಸರ್ಜಾ ಅವರ 'ಪೊಗರು' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮಯೂರಿ.


Click it and Unblock the Notifications











