ಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನಟಿ ಮಯೂರಿ
'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಲಾಕ್ ಡೌನ್ ಸಮಯದಲ್ಲಿ ಬಹುಕಾಲದ ಗೆಳೆಯ ಅರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮಯೂರಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಹೊಸ ವ್ಯಕ್ತಿಯನ್ನು ಸ್ವಾಗತಿಸಲು ಮಯೂರಿ ದಂಪತಿ ಸಜ್ಜಾಗಿದ್ದಾರೆ. ತುಂಬಾ ಗರ್ಭಿಣಿ ಮಯೂರಿ ಅವರಿಗೆ ಇತ್ತೀಚಿಗಷ್ಟೆ ಸೀಮಂತ ಸಂಭ್ರಮ ಮಾಡಲಾಗಿದೆ.
ನಟಿ ಮಯೂರಿ ಗರ್ಭಿಣಿ ಆಗಿರುವ ಸಂತಸದ ವಿಚಾರವನ್ನು ಫೋಟೋಶೂಟ್ ಮೂಲಕ ಬಹಿರಂಗ ಪಡಿಸಿದ್ದರು. ದೀಪಾವಳಿಯ ಹಬ್ಬದ ಸಮಯದಲ್ಲಿ ಮಯೂರಿ ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಇದೀಗ ಸರಳವಾಗಿ ಸೀಮಂತ ಸಂಭ್ರಮ ಕಾರ್ಯಕ್ರಮ ಮಾಡಲಾಗಿದೆ. ಸೀಮಂತದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೀಮಂತ ಸಂಭ್ರಮದಲ್ಲಿ ಮಯೂರಿ ತಾಯಿ ಮತ್ತು ಪತಿಯ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ.

ಅಂದಹಾಗೆ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ಜೂನ್ ನಲ್ಲಿ ಹಸೆಮಣೆ ಏರಿದ್ದರು. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ಸರಳವಾಗಿ ಮದುವೆಯಾಗಿದ್ದರು. ನಟ ಜೆಕೆ ತಂದೆ-ತಾಯಿ ಮಯೂರಿಯನ್ನು ಧಾರೆ ಎರೆದು ಕೊಟ್ಟಿದ್ದರು.

ಮಯೂರಿ ಮತ್ತು ಅರುಣ್ ಇಬ್ಬರು ಸುಮಾರು ವರ್ಷದ ಸ್ನೇಹಿತರು. ಹತ್ತು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ್ದರು. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಪುಟ್ಟ ಕಂದಮ್ಮನನ್ನು ಸ್ವಾಗತಿಸಲು ಮಯೂರಿ ಕುಟುಂಬ ಸಜ್ಜಾಗಿದೆ.


Click it and Unblock the Notifications











