twitter
    For Quick Alerts
    ALLOW NOTIFICATIONS  
    For Daily Alerts

    ಬಾಡಿ ಶೇಮಿಂಗ್ ಇದೆ, ಒತ್ತಡ ಬೇಡ: ನಟಿ ಮಯೂರಿ

    |

    ಸದ್ಯ ಸಿನಿಮಾರಂಗದಲ್ಲಿ ನಡೆಯುವ ಬಾಡಿ ಶೇಮಿಂಗ್ ಮತ್ತು ಲಿಂಗ ತಾರತಮ್ಯದ ಬಗ್ಗೆ ನಟಿ ಮಣಿಯರು ಧ್ವನಿ ಎತ್ತಿದ್ದಾರೆ. ನಟಿಯರಿಗೆ ಹೀಗೆ ಇರಬೇಕು ಎನ್ನುವ ಮಾನದಂಡ ಬೇಡ ಎನ್ನುವ ಬಗ್ಗೆ ನಟಿ ರಮ್ಯಾ ಮೂಲಕ ಕೂಗು ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ಗಳನ್ನು ನಟಿಯರು ಹಂಚಿಕೊಂಳ್ಳುತ್ತಿದ್ದಾರೆ. ಈ ಬಗ್ಗೆ ನಟಿ ಮಯೂರಿ ಫಿಲ್ಮಿ ಬೀಟ್‌ ಜೊತೆಗೆ ಮಾತನಾಡಿದ್ದಾರೆ.

    ಸಿನಿಮಾರಂಗದಲ್ಲಿ ಬಹುತೇಕ ಎಲ್ಲಾ ನಟಿಯರು ಈ ಸವಾಲು ಎದುರಾಗಿರುತ್ತದೆ. ಆದರೆ ನಮ್ಮನ್ನು ನಾವು ಪ್ರೀತಿಸುವುದು ಮುಖ್ಯ. ನಾವು ಹೇಗಿದ್ದೇವಿ ಎನ್ನುವುದನ್ನು ನಾವು ಒಪ್ಪಿಕೊಂಡರೆ ಸಾಕು ಎನ್ನುತ್ತಾರೆ ನಟಿ ಮಯೂರಿ. "ನಟಿಯರು ಮಾತ್ರ ಅಲ್ಲ. ಎಲ್ಲರೂ, ಬಾಹ್ಯ ಸೌಂದರ್ಯದ ಬಗ್ಗೆ ತುಂಬಾ ತಲೆ ಕೆಡೆಸಿಕೊಳ್ಳುತ್ತಾರೆ. ಈಗಿನ ಜನರೇಷನ್ ಮಕ್ಕಳಲ್ಲಿ ಸಣ್ಣಗೆ ಇದ್ದರೆ ಮಾತ್ರ ಸೌಂದರ್ಯ ಎನ್ನುವ ಆಲೋಚನೆ ಬಂದು ಬಿಟ್ಟಿದೆ. ಆದರೆ ನೀವೂ ಹೇಗೆ ಇದ್ದರೂ ಜನ ಮಾತಾಡುತ್ತಾರೆ. ಈ ರೀತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು." ಎಂದಿದ್ದಾರೆ.

    ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ: ಕರಾಳ ಮುಖ ಬಿಚ್ಚಿಟ್ಟ ನಟಿ ರಮ್ಯಾ!ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ: ಕರಾಳ ಮುಖ ಬಿಚ್ಚಿಟ್ಟ ನಟಿ ರಮ್ಯಾ!

    ಜೊತೆಗೆ ಸಿನಿಮಾರಂಗಕ್ಕೆ ಬಂದಾಗ ಮಯೂರಿಗೂ ನಟಿ ಎಂದರೆ ಹೇಗೆ ಇರಬೇಕು ಎನ್ನುವುದನ್ನು ಹಲವರು ಹೇಳಿದ್ದರಂತೆ. ಅದರಲ್ಲಿ ಒಬ್ಬರು ನಿರ್ದೇಶಕರು, ನೀನು ನಟಿಯಾಗಿ ಹೀರೊಯಿನ್ ರೀತಿ ಇರುವುದನ್ನು ಕಲಿ ಎಂದಿದ್ದರಂತೆ.

    Actress Mayuri On Body Shaming In Kannada Film Industry

    ನಟಿ ಮಯೂರಿ ಕೂಡ ಈಗ ತಮ್ಮ ಫಿಟ್ನೆಸ್ ಕಡೆಗೆ ಗಮನ ಕೊಡುತ್ತಿದ್ದಾರೆ. ಮದುವೆ ಆಗಿ, ಮಗು ಆದ ಬಳಿಕ ನಟಿ ಮಯೂರಿ ಈಗ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಹಾಗಾಗಿ ಅವರೂ ಕೂಡ ಸಣ್ಣ ಆಗಲು ಪ್ರಯತ್ನ ಮಾಡುತ್ತಿದ್ದಾರಂತೆ.

    ಸ್ಯಾಂಡಲ್‌ವುಡ್‌ನಲ್ಲಿ ಅಸಮಾನತೆ ಭೂತ: ಧ್ವನಿ ಎತ್ತಿದ ರಮ್ಯಾ, ಆಶಿಕಾ, ಮಾನ್ವಿತಾ, ಅಮೃತಾ!ಸ್ಯಾಂಡಲ್‌ವುಡ್‌ನಲ್ಲಿ ಅಸಮಾನತೆ ಭೂತ: ಧ್ವನಿ ಎತ್ತಿದ ರಮ್ಯಾ, ಆಶಿಕಾ, ಮಾನ್ವಿತಾ, ಅಮೃತಾ!

    ಕಿರುತೆಗೆ ನಟಿ ಚೇತನಾ ರಾಜ್ ಸಾವಿನ ಬಳಿಕ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿರುವ ಲಿಂಗ ಬೇಧ, ನಟಿಯರನ್ನು ಅಳೆಯುವ ಮಾನದಂಡಗಳ ವಿರುದ್ಧ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿ ಮೊದಲು ಧ್ವನಿ ಎತ್ತಿರುವುದು ನಟಿ ರಮ್ಯಾ. ರಮ್ಯಾ ಮಾತನ್ನು ಎತ್ತಿಹಿಡಿದ ಹಲವು ನಟಿಯರು, ಇದು ಸತ್ಯ ಎನ್ನುತ್ತಿದ್ದಾರೆ.

    ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. "ಪುರುಷನಾದನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ." ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು ನಟಿ ರಮ್ಯಾ.

    English summary
    Actress Mayuri On Body Shaming In Kannada Film Industry, Know More,
    Friday, May 20, 2022, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X