For Quick Alerts
  ALLOW NOTIFICATIONS  
  For Daily Alerts

  ನಟಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ

  By Naveen
  |
  ಮಾಜಿ ಮುಖ್ಯಮಂತ್ರಿಗಳ ಮಗಳಂತೆ ಮಯೂರಿ | Filmibeat Kannada

  ನಟಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ. ಹೌದು, ಮಯೂರಿ ಸಿಎಂ ಪುತ್ರಿ ಆಗಿರುವುದು ನಿಜ. ಆದರೆ ಅದು ರಿಯಲ್ ಲೈಫ್ ನಲ್ಲಿ ಅಲ್ಲ ಸಿನಿಮಾದಲ್ಲಿ ಮಾತ್ರ. ನಟಿ ಮಯೂರಿ ಈಗ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

  ಒಂದು ಕಡೆ ಸ್ಟಾರ್ ಸಿನಿಮಾಗಳಲ್ಲಿ ನಟಿಸುವ ಮಯೂರಿ ಅದೇ ರೀತಿ ಹೊಸಬರ ಸಿನಿಮಾ ಕೂಡ ಮಾಡುತ್ತಿದ್ದಾರೆ. ಹೊಸ ಹೊಸ ರೀತಿಯ ಪಾತ್ರಗಳನ್ನು ಮಯೂರಿ ಆಯ್ಕೆ ಮಾಡುತ್ತಿದ್ದಾರೆ. ಇದೀಗ 'ಸಿಗ್ನೇಚರ್' ಎಂಬ ಹೊಸ ಸಿನಿಮಾದಲ್ಲಿ ಮಯೂರಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸಬರ ತಂಡವೊಂದು ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ರಂಜಿತ್ ಕುಳಾಯಿ ಎಂಬ ಹೊಸ ಹುಡುಗನ ಜೊತೆಗೆ ಮಯೂರಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಈ ಸಿನಿಮಾದ ಚಿತ್ರೀಕರಣ ಇದೀಗ ಶುರು ಆಗಿದೆ.

  ಇನ್ನು ಕಿರುತೆರೆಯ ಮೂಲಕ ಸಿನಿಮಾ ರಂಗಕ್ಕೆ ಬಂದ ಮಯೂರಿ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದಾರೆ. 'ಕೃಷ್ಣಲೀಲಾ' ಚಿತ್ರದ ದೊಡ್ಡ ಯಶಸ್ಸಿನ ನಂತರ ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಇತ್ತೀಚಿಗಷ್ಟೆ ಬಂದ ದುನಿಯಾ ವಿಜಯ್ ಅವರ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದ ಸಣ್ಣ ಪಾತ್ರದಲ್ಲಿ ಅವರು ನಟಿಸಿದ್ದರು. 'ಸಿಗ್ನೇಚರ್' ಚಿತ್ರದ ಜೊತೆಗೆ 'ಆಟಕ್ಕುಂಟು ಲೆಕ್ಕಕಿಲ್ಲ' ಸಿನಿಮಾದಲ್ಲಿ ಮಯೂರಿ ಸದ್ಯ ಬಿಜಿ ಇದ್ದಾರೆ. ಇವುಗಳ ಜೊತೆಗೆ ಜಗ್ಗೇಶ್ ಅವರ '8MM' ಸಿನಿಮಾದಲ್ಲಿ ಪತ್ರಕರ್ತೆಯ ರೋಲ್ ಅನ್ನು ಮಯೂರಿ ಪ್ಲೇ ಮಾಡಿದ್ದಾರೆ.

   ಮೊದಲ ಬಾರಿಗೆ ಕನ್ನಡದ ಬಿಗ್ ಸ್ಟಾರ್ ಜೊತೆ ಮಯೂರಿ ನಟನೆ ಮೊದಲ ಬಾರಿಗೆ ಕನ್ನಡದ ಬಿಗ್ ಸ್ಟಾರ್ ಜೊತೆ ಮಯೂರಿ ನಟನೆ

  English summary
  Kannada Actress Mayuri playing a journalist role in a chief minister daughter role in 'Signature' kannada movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X