ಮೊದಲ ಬಾರಿಗೆ ಕನ್ನಡದ ಬಿಗ್ ಸ್ಟಾರ್ ಜೊತೆ ಮಯೂರಿ ನಟನೆ
ಸ್ಯಾಂಡಲ್ ವುಡ್ ಪ್ರತಿಭಾವಂತ ನಟಿಯರಲ್ಲಿ ಮಯೂರಿ ಕೂಡ ಒಬ್ಬರು. ಕಡಿಮೆ ಸಿನಿಮಾ ಮಾಡಿದರು ಒಳ್ಳೆಯ ಸಿನಿಮಾ ಒಳ್ಳೆಯ ಪಾತ್ರ ಮಾಡಬೇಕು ಎನ್ನುವ ಮಯೂರಿ ಒಂದು ಸಿನಿಮಾ ಮಾಡಬೇಕು ಅಂದರೆ ಯೋಚನೆ ಮಾಡಿ ಒಪ್ಪಿಕೊಳ್ಳುತ್ತಾರೆ. ಇದೀಗ ಮಯೂರಿ ಹೊಸ ಸಿನಿಮಾ ಮಾಡುತ್ತಿದ್ದಾರೆ.
ಮಯೂರಿ ಒಳ್ಳೆಯ ನಟಿ ಅಂತ ಈಗಾಗಲೇ ಸಾಬೀತು ಮಾಡಿದ್ದಾರೆ. ಆದರೆ ಈಗ ಅವರು ಮೊದಲ ಬಾರಿಗೆ ಕನ್ನಡದ ದೊಡ್ಡ ನಟನ ಜೊತೆಗೆ ನಟಿಸುವ ಅವಕಾಶ ಪಡೆದಿದ್ದಾರೆ. ಅಜಯ್ ರಾವ್, ಶರಣ್, ವಿಜಯ್ ಸೂರ್ಯ ಜೊತೆ ತೆರೆ ಹಂಚಿಕೊಂಡಿದ್ದ ಮಯೂರಿಗೆ ಈಗ ಅದೃಷ್ಟ ಖುಲಾಯಿಸಿದೆ. ತಮ್ಮ ಹೊಸ ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ಮಯೂರಿ ನಟಿಸುತ್ತಿದ್ದು, ದೊಡ್ಡ ನಟನ ಜೊತೆ ಅಭಿನಯಿಸುತ್ತಿದ್ದಾರೆ. ಮುಂದೆ ಓದಿ...

ಜಗ್ಗೇಶ್ ಜೊತೆ ಮಯೂರಿ
ನಟಿ ಮಯೂರಿ ಈಗ ತಮ್ಮ ಹೊಸ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಅಭಿನಯಿಸುತ್ತಿದ್ದಾರೆ.

'8MM' ತಂಡ ಸೇರಿದ ಮಯೂರಿ
ಜಗ್ಗೇಶ್ ಅಭಿನಯದ '8MM' ಸಿನಿಮಾ ತಂಡಕ್ಕೆ ಮಯೂರಿ ಎಂಟ್ರಿ ಆಗಿದೆ. ಚಿತ್ರದಲ್ಲಿ ಅವರು ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಜಗ್ಗೇಶ್ ಸಲಹೆ
ಚಿತ್ರದ ಈ ಒಂದು ಪಾತ್ರಕ್ಕೆ ಸೂಕ್ತ ನಾಯಕಿಯನ್ನು ಚಿತ್ರತಂಡ ಹುಡುಕುತಿತ್ತು. ಆ ವೇಳೆ ಜಗ್ಗೇಶ್ ಮಯೂರಿ ಈ ಪಾತ್ರಕ್ಕೆ ತುಂಬ ಚೆನ್ನಾಗಿ ಸೂಟ್ ಆಗುತ್ತಾರೆ ಅಂತ ಹೇಳಿದರಂತೆ.

ಚಿತ್ರದ ಬಗ್ಗೆ
'8MM' ಒಂದು ಕ್ರೈಂ ಸುತ್ತ ಹೆಣೆದಿರುವ ಕಥೆಯ ಸಿನಿಮಾ. '8MM' ಎನ್ನುವುದು ಬುಲೆಟ್ ಸೈಜ್ ಆಗಿದ್ದು, ಜಗ್ಗೇಶ್ ಇಲ್ಲಿ ಗನ್ ಹಿಡಿದು ಖದರ್ ಆಗಿ ಕಾಣಿಸಿಕೊಂಡಿದ್ದಾರೆ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ವಸಿಷ್ಟ ಸಿಂಹ ಕೂಡ ನಟಿಸಿದ್ದಾರೆ.

ಮಯೂರಿ ಸಿನಿಮಾಗಳು
ಸದ್ಯ 'ಕರಿಯ 2' ಬಳಿಕ ಇಂಗ್ಲೀಷ್ ಆಲ್ಬಂ ಹಾಡಿನಲ್ಲಿ ಕಾಣಸಿಕೊಂಡಿದ್ದ ಮಯೂರಿ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications