For Quick Alerts
  ALLOW NOTIFICATIONS  
  For Daily Alerts

  'ಕೃಷ್ಣಲೀಲಾ' ನಟಿ ಮಯೂರಿಗೆ ಕಂಕಣ ಭಾಗ್ಯ: ಹುಡುಗ ಯಾರು?

  |

  ನಟಿ ಮಯೂರಿಗೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ದಿಢೀರನೆ ಮಯೂರಿ ಅವರ ಮದುವೆ ಸುದ್ದಿ ಹೊರಬಿದ್ದಿದೆ. ಮಯೂರಿ ಅವರ ಮದುವೆ ಅವರ ಬಹುಕಾಲದ ಗೆಳೆಯ ಅರುಣ್ ಜೊತೆ ನಾಳೆ (ಜೂನ್ 12) ನಗರದ ದೇವಾಲಯವೊಂದರಲ್ಲಿ ನಡೆಯಲಿದೆ

  ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹವಾದ ನಟಿ ಮಯೂರಿ | Mayuri | FILMIBEAT KANNADA

  ನಟಿ ಮಯೂರಿ ಧಾರಾವಾಹಿ ಮೂಲಕ ಕನ್ನಡ ಕನ್ನಡ ಪ್ರೇಕ್ಷಕರ ಮುಂದೆ ಬಂದಿದದ್ರು. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಮಯೂರಿ ನಂತರ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಮಯೂರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮುಂದೆ ಓದಿ...

  ಮಯೂರಿ ಮದುವೆಯಾಗುತ್ತಿರುವ ಹುಡುಗ ಯಾರು?

  ಮಯೂರಿ ಮದುವೆಯಾಗುತ್ತಿರುವ ಹುಡುಗ ಯಾರು?

  ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರುತ್ತಿದ್ದಾರೆ. ಅರುಣ್ ಮತ್ತು ಮಯೂರಿ ಅವರದ್ದು ಸುಮಾರು ಹತ್ತು ವರ್ಷಗಳ ಗೆಳೆತನ. ಇಬ್ಬರು ೧೦ ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಪೋಷಕರು ಅಸ್ತು ಎಂದಿದ್ದು, ನಾಳೆಯೇವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.

  ದೇವಸ್ಥಾನದಲ್ಲಿ ಮದುವೆ

  ದೇವಸ್ಥಾನದಲ್ಲಿ ಮದುವೆ

  ಇಬ್ಬರ ಮದುವೆ ನಾಳೆ ಸರಳವಾಗಿ ನಡೆಯಲಿದೆ. ಮಯೂರಿ ಮತ್ತು ಅರುಣ್ ದೇವಸ್ಥಾನದಲ್ಲಿ ಮದುವೆಯಾಗಲಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಲಾಗಲಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಅದ್ದೂರಿ ಮದುವೆ ಬ್ರೇಕ್ ಹಾಕಿ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ.

  ಫೋಟೋ ಪೋಸ್ಟ್ ಮಾಡಿರುವ ನಟಿ

  ಫೋಟೋ ಪೋಸ್ಟ್ ಮಾಡಿರುವ ನಟಿ

  ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಬಳೆ ತೊಟ್ಟು ಚಂದ ಫೊಸು ಕೊಟ್ಟಿದ್ದರು. ಪಕ್ಕಾ ಮದುಮಗಳಾಗಿ ಕಾಣಿಸಿಕೊಂಡಿರುವ ಮಯೂರಿ ನೋಡಿ ಅಭಿಮಾನಿಗಳಿಗೆ ಅನುಮಾನ ಬಂದಿತ್ತು. ಅಲ್ಲದೆ ಕ್ಯಾಪ್ಷನ್ ಕೂಡ ಹಾಕಿದ್ದರು. ಅದೀಗ ನಿಜವಾಗಿದ್ದು, ನಾಳೆಯೇ ಮಯೂರಿ ಹಸೆಮಣೆ ಏರಲಿದ್ದಾರೆ.

  ಮಯೂರಿ ಸಿನಿಮಾಗಳು

  ಮಯೂರಿ ಸಿನಿಮಾಗಳು

  ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಖ್ಯಾತರಾಗಿದ್ದ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಯೂ ಮುಂಚಿದ್ದಾರೆ. ಕೃಷ್ಣಲೀಲಾ, ಇಷ್ಟಕಾಮ್ಯ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದರು. ಧ್ರುವ ಸರ್ಜಾ ಅವರ 'ಪೊಗರು' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮಯೂರಿ.

  English summary
  Actress Mayuri marrying Arun on June 12 in a temple. She acted in Krishnaleela, Ishtakamya, Pogaru movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X