For Quick Alerts
  ALLOW NOTIFICATIONS  
  For Daily Alerts

  ಜಗತ್ತಿನ ಸುಂದರ ಮಹಿಳೆ ಎಂದು ಫೀಲ್ ಮಾಡಿಸಿದ ಪತಿಗೆ ಧನ್ಯವಾದ ತಿಳಿಸಿದ ಮಯೂರಿ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಮಯೂರಿ ಇತ್ತೀಚಿಗೆ ಬಹುಕಾಲದ ಗೆಳೆಯ ಅರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್ ಡೌನ್ ನಲ್ಲಿ ಮಯೂರಿ ಸರಳವಾಗಿ ಬೆಂಗಳೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಮದುವೆಗೆ ಆಗಮಿಸಿ ಶುಭಹಾರೈಸಿದ್ದಾರೆ.

  ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

  ಮದುವೆ ನಂತರ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿಯ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಮಯೂರಿ ಇತ್ತೀಚಿಗೆ ಪತಿ ಅರುಣ್ ಗೆ ಧನ್ಯವಾದ ತಿಳಿಸಿ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.

  ಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿ

  "ಫೋಟೋ ಜೊತೆಗೆ ವಿಶ್ವದ ಸುಂದರ ಮಹಿಳೆ ಎಂದು ಫೀಲ್ ಮಾಡಿಸಿದ್ದಕ್ಕೆ ಧನ್ಯವಾದಗಳು" ಎಂದು ಕ್ಯಾಪ್ಷನ್ ಹಾಕಿದ್ದಾರೆ. ಮದುವೆ ನಂತರ ಮೊದಲ ಬಾರಿಗೆ ವಿಡಿಯೋ ಶೇರ್ ಮಾಡ ಪತಿಯನ್ನು ಪರಿಚಯಿಸಿಕೊಟ್ಟಿದ್ದರು. ಜೊತೆ ಮದುವೆ ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದರು.

  ಇನ್ನೂ ಮತ್ತೊಂದು ವಿಡಿಯೋ ಶೇರ್ ಮಾಡಿ ನೀವು ಪ್ರೀತಿತ್ತಿರುವ ಮತ್ತು ನಿಮ್ಮನ್ನು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಮದುವೆಯಾಗುವುದು ಪ್ರಪಂಚದ ಅತ್ಯಂತ ಸುಂದರ. ಇಬ್ಬರ ನಡುವೆ ಪ್ರೀತಿ ಸದಾ ಇರುತ್ತೆ ಎಂದು ಹೇಳಿದ್ದಾರೆ. ಮದುವೆ ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಮಯೂರಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ನಟಿ ಮಯೂರಿ ಮತ್ತು ಅರುಣ್ ಅವರದ್ದು 10 ವರ್ಷದ ಪ್ರೀತಿ. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮಯೂರಿ ಮತ್ತು ಅರುಣ್ ಮನೆಯವರ ಒಪ್ಪಿಗೆ ಪಡೆದು, ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ದವಾಗಿ ಹಸೆಮಣೆ ಏರಿದ್ದಾರೆ. ಮಯೂರಿ ಪತಿ ಅರುಣ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

  English summary
  Actress Mayuri Says Thank you for always making me feel like the most beautiful woman in the world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X