For Quick Alerts
  ALLOW NOTIFICATIONS  
  For Daily Alerts

  ಇನ್ನೊಮ್ಮೆ ಅಮ್ಮನಾದ 'ಸ್ವಾತಿಮುತ್ತು' ಮೀನಾ

  By Rajendra
  |

  ಸದ್ಯಕ್ಕೆ ಹೆಣ್ಣು ಮಗುವಿನ ತಾಯಿಯಾಗಿ ಗಂಡನೊಂದಿಗೆ ಸುಖಿ ಕುಟುಂಬ ನಡೆಸುತ್ತಿರುವ ಮೀನಾ ಈಗ ಇನ್ನೊಮ್ಮೆ ಅಮ್ಮನಾಗಿದ್ದಾರೆ. ಅಂದರೆ ಅವರು ಮತ್ತೊಂದು ಮಗುವಿಗೆ ಜನ್ಮ ನೀಡಿದರಾ ಎಂದು ಭಾವಿಸಬೇಡಿ. ಈ ಬಾರಿ ಅವರು ಅಮ್ಮನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

  ಮಲಯಾಳಂ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ನಟರಾದ ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ಜೊತೆ ಅಭಿನಯಿಸುತ್ತಿದ್ದಾರೆ. ಮೀನಾ ಅವರು ಈಗಾಗಲೆ ಅತ್ತೆಯಾಗಿ ಪೋಷಕ ಪಾತ್ರಗಳಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿಯಾಗಿದೆ. ಈಗ ಇನ್ನೊಂದು ಇನ್ನಿಂಗ್ಸ್ ಮೂಲಕ ಅಮ್ಮನಾಗಿ ಬೆಳ್ಳಿತೆರೆಗೆ ಬರುತ್ತಿದ್ದಾರೆ.

  ಮಮ್ಮುಟ್ಟಿ ಜೊತೆಗಿನ ಚಿತ್ರದಲ್ಲಿ ಮೀನಾ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಅವರು ಅಮ್ಮನಾಗುತ್ತಿರುವುದು ಮಮ್ಮುಟ್ಟಿ ಅವರಿಗೆ. 'ಬಾಲ್ಯಕಲಾಸಖಿ' ಎಂಬ ಚಿತ್ರದಲ್ಲಿ ಮಮ್ಮುಟ್ಟಿ ಅವರದು ದ್ವಿಪಾತ್ರಾಭಿನಯ. ಈ ಚಿತ್ರದಲ್ಲಿ ಮೀನಾ ತಾಯಿ ಪಾತ್ರ ಪೋಷಿಸುತ್ತಿದ್ದಾರೆ.

  ಈ ಪಾತ್ರಕ್ಕಾಗಿ ಸಾಕಷ್ಟು ಕಲಾವಿದರನ್ನು ಮಾತನಾಡಿಸಿ ಕೊನೆಯದಾಗಿ ಮೀನಾ ಅವರಿಗೆ ಪಾತ್ರ ನೀಡಲಾಗಿದೆ. ಇದೇ ಮೊದಲ ಬಾರಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

  ಅಂದಹಾಗೆ ಮೀನಾ ಅವರು ಕನ್ನಡದ ಮೈ ಆಟೋಗ್ರಾಫ್, ಮಹಾಸಾಧ್ವಿ ಮಲ್ಲಮ್ಮ, ಗೌಡ್ರು, ಸ್ವಾತಿ ಮುತ್ತು, ಸಿಂಹಾದ್ರಿಯ ಸಿಂಹ, ಶ್ರೀಮಂಜುನಾಥ, ಪುಟ್ನಂಜ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಹೆಂಡ್ತೀರ್ ದರ್ಬಾರ್' ಚಿತ್ರ ಮೀನಾ ಅಭಿನಯದ ಕೊನೆಯ ಕನ್ನಡ ಚಿತ್ರ. (ಏಜೆನ್ಸೀಸ್)

  English summary
  South Indian actress Meena will be essaying the role of Mammootty's mother in the upcoming movie Balyakalasakhi. Directed by Pramod Payyannur, the movie is based on the novel Balyakalasakhi written by late Vaikom Muhammed Basheer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X