ದರ್ಶನ್, ಪವಿತ್ರಾ ಗೌಡ ಜೈಲಿನಲ್ಲಿರುವಾಗ ಮೇಘಾ ಶೆಟ್ಟಿ ಟ್ರೋಲ್ ಆಗುತ್ತಿರೋದ್ಯಾಕೆ?

By ಫಿಲ್ಮಿಬೀಟ್ ಡೆಸ್ಕ್

ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 17 ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರ ತನಿಖೆ ಮುಂದುವರೆದಿದೆ.

ನಟ ದರ್ಶನ್ ಪರ ಈಗಾಗಲೇ ಕೆಲವರು ದನಿ ಎತ್ತಿದ್ದಾರೆ. ಅವರು ತಪ್ಪು ಮಾಡಿಲ್ಲ, ಒಂದು ವೇಳೆ ತಪ್ಪು ಮಾಡಿದ್ದರು ಅವರನ್ನು ಬಿಟ್ಟುಕೊಡುವ ಮಾತೇಯಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ತಪ್ಪಿತ್ಥಸರಿಗೆ ಶಿಕ್ಷೆ ಆಗಲಿ ಎಂದು ಸಾಕಷ್ಟು ಜನ ಹೇಳುತ್ತಾ ಬರುತ್ತಿದ್ದಾರೆ. ಇನ್ನು ಕೆಲವರು ಈ ಪ್ರಕರಣದ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾರೆ. ಕಿರುತೆರೆ ನಟಿ ಮೇಘಾ ಶೆಟ್ಟಿ ಕೂಡ ದರ್ಶನ್ ಹಾಗೂ ಪವಿತ್ರಾ ಗೌಡಗೆ ಬಹಳ ಆಪ್ತರಾಗಿದ್ದರು.

Actress Megha shetty gets trolled for her latest instagram posts

ಮೇಘಾ ಶೆಟ್ಟಿ, ಸೋನಲ್ ಮಂಥೆರೋ ಸೇರಿದಂತೆ ಕೆಲ ನಟಿಯರು ಪವಿತ್ರಾ ಗೌಡ ಒಡೆತನದ ರೆಡ್ ಕಾರ್ಪೆಟ್ 777 ಸ್ಟುಡಿಯೋದ ಬ್ರ್ಯಾಂಡ್ ಅಂಬಾಸಿಡರ್‌ ಎನ್ನುವಂತಿದ್ದರು. ಅಲ್ಲಿನ ಕಾಸ್ಟ್ಯೂಮ್‌ಗಳನ್ನು ಧರಿಸಿ ಬಗೆ ಬಗೆಯ ಫೋಟೊಶೂಟ್‌ಗಳಲ್ಲಿ ಭಾಗಿ ಆಗುತ್ತಿದ್ದರು. ಈ ಹಿಂದೆ ಪವಿತ್ರಾ ಗೌಡ ಜೊತೆ ಸೇರಿ ಮೇಘಾ ಶೆಟ್ಟಿ ಮತ್ತು ಸ್ನೇಹಿತೆಯರು ದರ್ಶನ್ ಹುಟ್ಟುಹಬ್ಬ ಆಚರಿಸಿದ್ದು ಭಾರೀ ಸುದ್ದಿಯಾಗಿತ್ತು.

ದರ್ಶನ್ ಬರ್ತ್‌ಡೇ ಸೆಲೆಬ್ರೇಷನ್ ವೀಡಿಯೋವನ್ನು ಮೇಘಾಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಚಕಾರ ಎತ್ತಿದ್ದರು. "ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್‌ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ" ಎಂದು ವಿಜಯಲಕ್ಷ್ಮೀ ಪೋಸ್ಟ್ ಮಾಡಿದ್ದರು.

Actress Megha shetty gets trolled for her latest instagram posts

ವಿಜಯಲಕ್ಷ್ಮಿ ಬೆನ್ನಲ್ಲೇ ಪೋಸ್ಟ್ ಬೆನ್ನಲ್ಲೇ ಮೇಘಾಶೆಟ್ಟಿ ತಮ್ಮ ಪೋಸ್ಟ್ ಡಿಲೀಟ್ ಮಾಡಿ ಸೈಲೆಂಟ್ ಆಗಿದ್ದರು. ಅಲ್ಲಿಗೆ ಆ ಕಿರಿಕ್ ತಣ್ಣಗಾಗಿತ್ತು. ಸದ್ಯ ಮೇಘಾ ಶೆಟ್ಟಿ ಡ್ಯಾನ್ಸ್ ಕ್ಲಾಸ್‌ನಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. "ನಿಮ್ಮ ಫ್ರೆಂಡ್ ಜೈಲಿನಲ್ಲಿರುವಾಗ ಇದೆಲ್ಲಾ ಬೇಕಿತ್ತಾ ಮೇಡಂ?" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಜೈಲಿಗೆ ಹೋಗಿ ನಮ್ ಬಾಸ್‌ನ ಭೇಟಿ ಆಗಿ ಬನ್ನಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಸೂಪರ್ ಹಿಟ್ 'ಆಸಾ ಕೂಡ' ಆಲ್ಬಮ್ ಸಾಂಗ್‌ಗೆ ಮೇಘಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ರಿಫ್ಲೆಕ್ಷನ್ ಡ್ಯಾನ್ಸ್ & ಫಿಟ್‌ನೆಸ್‌ ಸ್ಟುಡಿಯೋದಲ್ಲಿ ಆಕೆ ತಾಲೀಮು ನಡೆಸುತ್ತಿರುವುದು ನೋಡಬಹುದು. ಎರಡು ದಿನಗಳ ಹಿಂದೆ ಸೀರೆ ಉಟ್ಟು ವೀಡಿಯೋ ಶೇರ್ ಮಾಡಿದ್ದರು. ಅದಕ್ಕೂ ಇದೇ ರೀತಿಯ ಕಾಮೆಂಟ್ಸ್ ಬಂದಿತ್ತು. 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಸಿರಿಮನೆ ಪಾತ್ರದಿಂದ ಮೇಘಾ ಮನೆ ಮಾತಾಗಿದ್ದರು. ಬಳಿಕ ಸಿನಿಮಾಗಳಲ್ಲಿ ಸಹ ನಟಿಸಲು ಆರಂಭಿಸಿದರು. 'ತ್ರಿಬಲ್ ರೈಡಿಂಗ್' ಹಾಗೂ 'ಕೈವ' ಸಿನಿಮಾ ಆಕೆ ಮಿಂಚಿದ್ದಾರೆ.

More from Filmibeat

English summary
Why Is jothe jotheyali actress megha shetty Getting Trolled?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X