'ಜೊತೆ ಜೊತೆಯಲಿ' ಧಾರಾವಾಹಿಗೆ ಅಂತ್ಯ ಹಾಡಲು ಮುಂದಾಯ್ತಾ ಟೀಮ್: ಮತ್ತೇನಾಯ್ತು?
ಜೀ ಕನ್ನಡ ಪ್ರಸಾರ ಆಗುತ್ತಿದ್ದ ಧಾರಾವಾಹಿ ಜನಪ್ರಿಯ 'ಜೊತೆ ಜೊತೆಯಲಿ'. ಈ ಧಾರಾವಾಹಿ ನಟ ಅನಿರುದ್ಧ್‌ಗೆ ಹೊಸ ಇಮೇಜ್ ಕೊಟ್ಟಿತ್ತು. ಹಾಗೇ ಮೇಘಾ ಶೆಟ್ಟಿಗೆ ಅನುಸಿರಿಮನೆ ಅನ್ನೋ ಸುಂದರ ಹೆಸರು ಕೊಟ್ಟಿದ್ದು ಕೂಡ ಇದೇ ಸೀರಿಯಲ್.
ಹಲವು ತಿಂಗಳುಗಳಿಂದ 'ಜೊತೆ ಜೊತೆಯಲಿ' ಸೀರಿಯಲ್ ಜೀ ಕನ್ನಡದಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಕಿರುತೆರೆ ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡಿತ್ತು. ಮಿಸ್ ಮಾಡದೇನೆ ಈ ಧಾರಾವಾಹಿಯನ್ನು ನೋಡುತ್ತಿದ್ದರು.

ಸತತ ನಾಲ್ಕು ವರ್ಷಗಳ ಕಾಲ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರ ಕಂಡಿದೆ. ಯಶಸ್ಸಿನ ಮಧ್ಯೆನೇ ವಿವಾದಗಳಲ್ಲೂ ಸಿಕ್ಕಿಕೊಂಡಿದೆ. ಇದಾದ ಕೆಲವೇ ತಿಂಗಳುಗಳ ಅಂತರದಲ್ಲಿ ಈ ಧಾರಾವಾಹಿಯನ್ನು ನಿಲ್ಲಿಸುವುದಕ್ಕೆ ಮುಂದಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಕಾರಣವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕಾರಣ ನಂ 1
'ಜೊತೆ ಜೊತೆಯಲಿ' ಅಂದರೆ ಅನಿರುದ್ಧ್.. ಅನಿರುದ್ಧ್ ಅಂದರೆ ' ಜೊತೆ ಜೊತೆಯಲಿ' ಅನ್ನುವಷ್ಟು ಕ್ರೇಜ್ ಇತ್ತು. ಹಾಗೇ ಮೇಘಾ ಶೆಟ್ಟಿಯನ್ನು ಇದೇ ಧಾರಾವಾಹಿಯಿಂದಲೇ ಗುರುತಿಸುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಅನಿರುದ್ಧ್ ಹಾಗೂ ತಂಡದ ಜೊತೆ ವಿವಾದ ಎದ್ದಿತ್ತು.

ಅನಿರುದ್ಧ್ ವಿರುದ್ಧ ಸೀರಿಯಲ್ ತಂಡ ಗಂಭೀರ ಆರೋಪ ಮಾಡಿದ್ದರು. ತಂಡದ ಜೊತೆ ಮುನಿಸಿಕೊಂಡು ಅನಿರುದ್ಧ್ ಸೆಟ್ಟಿನಿಂದ ಹೊರಬಂದಿದ್ದರು. ಹೀಗಾಗಿ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ದಾಖಲಾಗಿತ್ತು. ಅಲ್ಲಿ ಅನಿರುದ್ಧ್‌ರನ್ನು ಧಾರಾವಾಹಿಯಿಂದಲೇ ಬ್ಯಾನ್ ಮಾಡಲು ಮುಂದಾಗಿದ್ದರು. ಬಳಿಕ ಧಾರಾವಾಹಿಯಿಂದ ಹೊರಬಂದರೂ, ಬ್ಯಾನ್ ಅನ್ನು ತೆರವುಗೊಳಿಸಲಾಯ್ತು.
ಕಾರಣ ನಂ 2
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಹೊರಬಂದ ಬಳಿಕ ಆ ಸ್ಥಾನಕ್ಕೆ ಹರೀಶ್ ರಾಜ್ ಎಂಟ್ರಿಕೊಟ್ಟಿದ್ದರು. ಇವರು ಬರುವುದಕ್ಕೂ ಮುನ್ನವೇ ಟಿಆರ್‌ಪಿಯಲ್ಲಿ ಹಿನ್ನೆಡೆ ಕಂಡಿತ್ತು. ಹರೀಶ್ ರಾಜ್ ಎಂಟ್ರಿ ಬಳಿಕ ಏರಿಕೆ ಕಾಣಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
ಕಾರಣ ನಂ 3
ಕಿರುತೆರೆಯಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಪ್ರಮುಖ ಪಾತ್ರಧಾರಿಗಳು ಡೇಟ್ ಕೊಡುತ್ತಿಲ್ಲ. ಸಿನಿಮಾದಲ್ಲೂ ಬ್ಯುಸಿಯಾಗಿರುವುದರಿಂದ ಡೇಟ್ ಕೊಡಲು ಕಿರಿಕ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಬೇಸತ್ತಿರೋ ತಂಡ ಧಾರಾವಾಹಿಯನ್ನು ನಿಲ್ಲುತ್ತಿದೆ ಅನ್ನೋ ಸುದ್ದಿ ವರದಿಯಾಗಿದೆ.
ಮೇಘಾ ಶೆಟ್ಟಿ ಭಾವುಕ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋ ಮೇಘಾ ಶೆಟ್ಟಿ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೇಘಾ ಶೆಟ್ಟಿ ನಟಿಸಿದ 'ತ್ರಿಬಲ್ ರೈಡಿಂಗ್' ಸಿನಿಮಾ ರಿಲೀಸ್ ಆಗಿದೆ. ಇನ್ನೂ ಎರಡು ಸಿನಿಮಾಗಳು ಕೈಯಲ್ಲಿವೆ. ಹೀಗಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಧಾರಾವಾಹಿಗೆ ಡೇಟ್ ಕೊಡುವುದಕ್ಕೆ ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುತ್ತಿರುವುದಕ್ಕೆ ಭಾವುಕರಾಗಿದ್ದಾರೆ ಎನ್ನಲಾಗಿದೆ. ನಾಲ್ಕು ವರ್ಷಗಳ ಬದುಕು ಕೊಟ್ಟ ಧಾರಾವಾಹಿ ಇದು. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಮೇ ತಿಂಗಳೇ ಅತ್ಯಂತದವರೆಗೂ ಜೊತೆ ಜೊತೆಯಲಿ ಪ್ರಸಾರ ಆಗಬಹುದು. ಆಮೇಲೆ ನಿಲ್ಲಿಸಲಾಗುತ್ತೆ ಎನ್ನಲಾಗಿದೆ.


Click it and Unblock the Notifications











