Gramayana: ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ ಮೇಘಾ ಶೆಟ್ಟಿ!
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನಪ್ರಿಯರಾದ ನಟಿ ಮೇಘಾ ಶೆಟ್ಟಿ ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಒಂದಾದ ಮೇಲೆ ಒಂದು ಸಿನಿಮಾಗಳಿಗೆ ಸಹಿ ಹಾಕುತ್ತಿರುವ ಅವರು ಈಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ಘೋಷಿಸಿ ಆರಂಭಿಸಲಾಗಿದ್ದ ನಟ ವಿನಯ್ ರಾಜ್‌ಕುಮಾರ್ ಅವರ ಗ್ರಾಮಾಯಣ ಚಿತ್ರ, ಹೊಸ ನಿರ್ಮಾಣ ತಂಡದೊಂದಿಗೆ ಮತ್ತೆ ಪ್ರಾರಂಭಗೊಂಡಿದೆ. ಅಕ್ಟೋಬರ್ 4 ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರಿನ ಕಡೂರಿನಲ್ಲಿ ಮೊದಲ ಶೆಡ್ಯೂಲ್ ನಡೆಯಲಿದೆ.

ಲಹರಿ ಫಿಲಂಸ್‌ನ ಜಿ ಮನೋಹರನ್ ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆಪಿ ಶ್ರೀಕಾಂತ್ ಬೆಂಬಲಿಸುತ್ತಿರುವ ಈ ಸಿನಿಮಾಕ್ಕೆ ನಿರ್ದೇಶಕ ದೇವನೂರು ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರೆ ದೇವನೂರು ಚಂದ್ರ ಅವರಿಗೆ ಇದು ಚೊಚ್ಚಲ ಸಿನಿಮಾ. ಮತ್ತೆ ಪ್ರಾರಂಭಗೊಂಡಿರುವ ಸಿನಿಮಾದಲ್ಲಿ ನಟಿ ಮೇಘಾ ಶೆಟ್ಟಿ ವಿನಯ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿದ್ದಾರೆ.
ಲಂಗ - ದಾವಣಿಯಲ್ಲಿ ಮಿಂಚುತ್ತಿದ್ದ ನಟಿ
ನಟಿ ಮೇಘಾ ಶೆಟ್ಟಿ ಗ್ರಾಮಾಯಣದಲ್ಲಿ ನಾಯಕಿಯಾಗಲಿದ್ದಾರೆ ಎಂಬ ಗುಸು ಗುಸು ಕಳೆದೊಂದು ವಾರದಿಂದ ಕೇಳಿಬರುತ್ತಿತ್ತು. ಆರಂಭದಲ್ಲಿ ಸಿನಿಮಾಕ್ಕೆ ವಿನಯ್ ರಾಜ್‌ಕುಮಾರ್ ಅವರನ್ನು ಮಾತ್ರ ನಾಯಕನಾಗಿ ಘೋಷಿಸಿ, ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಈಗ ಇದನ್ನು ಚಿತ್ರತಂಡ ಮತ್ತು ಮೇಘಾ ಶೆಟ್ಟಿ ದೃಢಪಡಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಾಮಾಯಣದ ಭಾಗವಾಗಿರುವ ಪೋಸ್ಟರ್ ಅನ್ನು ಮೇಘಾ ಹಂಚಿಕೊಂಡಿದ್ದಾರೆ. ಗ್ರಾಮಾಯಣದ ಪೋಸ್ಟರ್ ಹಂಚಿಕೊಂಡಿರುವ ಅವರು ಅದರಲ್ಲಿ ಲಂಗ ದಾವಣಿ ಧರಿಸಿರುವ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗೆ ಒಂದು ರೆಡ್ ಹಾರ್ಟ್ ಸಿಂಬಲ್ ಹಾಕಿ ಹಂಚಿಕೊಂಡಿದ್ದಾರೆ. ಮೇಘಾ ಫೋಟೋಗೆ ಅಭಿಮಾನಿಗಳು ಶುಭಾಶಯ ಹೇಳಿ ಕಾಮೆಂಟ್ ಮಾಡುತ್ತಿದ್ದಾರೆ.
ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ಮೇಘಾ ಶೆಟ್ಟಿ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಟ್ರಿಬಲ್ ರೈಡಿಂಗ್‌ನೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದದ ದಿಲ್ಪಸಂದ್‌ನಲ್ಲಿಯೂ ಕಾಣಿಸಿಕೊಂಡಿದ್ದರು.
ಸದ್ಯ ಮೇಘಾ ಶೇಟ್ಟಿ ಜಯತೀರ್ಥ ನಿರ್ದೇಶನದ ಕೈವಾ ಮತ್ತು ಆಪರೇಷನ್ ಲಂಡನ್ ಕೆಫೆ ಸಿನಿಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಗ್ರಾಮಾಯಣ ಚಿತ್ರತಂಡ ಸೇರಿಕೊಂಡಿದ್ದಾರೆ.

ಲಂಗ- ದಾವಣಿ ಫೋಟೋಶೂಟ್ ಕಾರಣ ಬಹಿರಂಗ!
ಇತ್ತೀಚಿನ ದಿನಗಳಲ್ಲಿ ನಟಿ ಮೇಘಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಲಂಗ ದಾವಣಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವಿಶೇಷ ಫೋಟೋಶೂಟ್‌ಗೆ ಕಾರಣ ಮಾತ್ರ ತಿಳಿಸಿರಲಿಲ್ಲ. ಕೆಲವರು ಅವರು ಮಲಯಾಳಂ ಸಿನಿಮಾಗಾಗಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಎಂದಿದ್ದರು. ಆದರೆ, ಈಗ ಇದು ಗ್ರಾಮಾಯಣಕ್ಕಾಗಿ ತೆಗೆದಿರುವ ಫೋಟೋಗಳು ಎಂಬುದು ತಿಳಿದು ಬಂದಿದೆ.
ಗ್ರಾಮಾಯಣ ಸಿನಿಮಾವು, ಗ್ರಾಮೀಣ ಪ್ರದೇಶದ ಕಥೆಯನ್ನು ಹೊಂದಿದ್ದು, ವಿನಯ್ ರಾಜ್‌ಕುಮಾರ್ ಗ್ರಾಮೀಣ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಿರಿಯ ನಟಿ ಅಪರ್ಣಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗಿದೆ.
ಇನ್ನು, ಗ್ರಾಮಾಯಣ ಚಿತ್ರತಂಡ ಅಂತಿಮ ಹಂತದ ಕಾಸ್ಟಿಂಗ್‌ನಲ್ಲಿದ್ದು, ಶೀಘ್ರದಲ್ಲೇ ಸಂಪೂರ್ಣ ತಾರಾಗಣದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.
ವಿನಯ್ ರಾಜ್‌ಕುಮಾರ್
ವಿನಯ್ ರಾಜ್‌ಕುಮಾರ್ ಸದ್ಯ ಅಂದೋಂದಿತ್ತು ಕಾಲ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇದರ ಜೊತೆಗೆ ತಮ್ಮ ಬಹು ನಿರೀಕ್ಷಿತ ಚಿತ್ರ 'ಪೆಪೆ' ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲೇಶ್ ನಾಯರ್ ನಿರ್ದೇಶನದ ಪೆಪೆ ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











