Megha Shetty: ಮೇಘಾ ಶೆಟ್ಟಿ ಅವರ ಮೇಕ್‌ಆಪ್ ಇಲ್ಲದ ಸೆಲ್ಫಿಗಳು ಎಷ್ಟು ಕ್ಯೂಟ್ ನೋಡಿ

ಕನ್ನಡದ ಕಿರುತೆರೆ, ಹಿರಿತೆರೆಗಳಲ್ಲಿ ಹೆಸರು ಮಾಡಿರುವ ನಟಿ ಮೇಘಾ ಶೆಟ್ಟಿ ಯಾರಿಗೆ ಗೊತ್ತಿಲ್ಲಾ ಹೇಳಿ. ಮಾಡೆಲ್, ನಟಿ, ನಿರ್ಮಾಪಕಿ ಆಗಿಯೂ ಹೆಸರು ಮಾಡಿರುವ ಇವರ ಪರಿಚಯದ ಅಗತ್ಯವಿಲ್ಲ. ಜೊತೆ ಜೊತೆಯಲಿ ಎಂಬ ಜನಪ್ರಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಂತರ ಅನು ಸಿರಿಮನೆಯಾಗಿ ಮನೆ ಮನೆಗೂ ಕಾಲಿಟ್ಟ ಇವರು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಜನತೆಯ ಮನಸ್ಸಿಗೂ ಹತ್ತಿರವಾಗಿದ್ದಾರೆ.

ತಮ್ಮ ನಟನೆಯಿಂದ ಪಕ್ಕದ ಮನೆ ಹುಡುಗಿ ಅನ್ನಿಸಿಕೊಂಡಿದ್ದ ಇವರು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುತ್ತಾರೆ. ಆಗ್ಗಾಗೆ ತಮ್ಮ ಸಿನಿಮಾಗಳ ಬಗ್ಗೆ ಕೆಲವೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿಸುತ್ತಾರೆ. ಹೊಸ ಹೊಸ ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ.

Actress Megha Shettys Morning Selfies: see pics

ಇತ್ತೀಚೆಗಷ್ಟೇ ಮೇಘಾ ಶೆಟ್ಟಿ ತಮ್ಮ ಬೆಳಗಿನ ಮೂಡ್‌ಗಳ ಬಗ್ಗೆ ಸರಣಿ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ. ಚಿತ್ರಗಳಲ್ಲಿ, ಮೇಘಾ ಶೆಟ್ಟಿ ಬಿಳಿ ಬಣ್ಣದ ಸ್ಲೀವ್‌ಲೆಸ್ ಟಾಪ್ ಅನ್ನು ಧರಿಸಿದ್ದಾರೆ. ಜೊತೆಗೆ ನೀಲಿ ಶಾರ್ಟ್ ಧರಿಸಿದ್ದು, ಅದರ ಮೇಲೆ ಪುಟ್ಟ ಪುಟ್ಟ ಹೂವಿನ ಪ್ರಿಂಟ್‌ಗಳಿವೆ. ಈ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ದಿಲ್‌ಪಸಂದ್ ನಟಿ.

ತೆರೆದ ಕೂದಲಿನೊಂದಿಗೆ ಮೇಕ್ಅಪ್ ಇಲ್ಲದೆ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಕಿಟಕಿ ಪಕ್ಕದಲ್ಲಿ ಕುಳಿತಿರುವ ಅವರು, ಬೆಳಗಿನ ಬೆಳಕಿನಲ್ಲಿ ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ 'ಮಾರ್ನಿಂಗ್ ಮೂಡ್ ಸ್ವಿಂಗ್ಸ್' ಎಂದು ಶೀರ್ಷಿಕೆ ಬರೆದಿದ್ದಾರೆ.

ಮೇಘಾ ಶೆಟ್ಟಿ ಅವರ ಪೋಸ್ಟ್‌ಗೆ ಅವರ ಅಭಿಮಾನಿಗಳು ಸಾಕಷ್ಟು ಕಾಮೆಂಟ್ಸ್ ಮಾಡುತ್ತಿದ್ದಾರೆ. 'ಗಾರ್ಜಿಯಸ್', 'ತುಂಬಾ ಮುದ್ದಾಗಿದೆ', ಸೋ ಕ್ಯೂಟ್, ಗೊಂಬೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ನೂರಾರು ಮಂದಿ ಕೆಂಪು ಹೃದಯದ ಎಮೋಜಿಗಳನ್ನು ಸುರಿಸಿದ್ದಾರೆ. ಫೋಟೋಗಳಿಗೆ ಸುದ್ದಿ ಬರೆಯುವ ಹೊತ್ತಿಗೆ ಸುಮಾರು 38 ಸಾವಿರ ಮಂದಿ ಲೈಕ್ ಮಾಡಿದ್ದರು ಮತ್ತು 250ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.

Actress Megha Shettys Morning Selfies: see pics

ಮೇಘಾ ಶೆಟ್ಟಿ ಮೊದಲ ಬಾರಿಗೆ ಜೀ ಕನ್ನಡದಲ್ಲಿ ಪ್ರಸಾರವಾದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಜಟ್ಕರ್ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರು ಎಂದೂ ಹಿಂತಿರುಗಿ ನೋಡಿಲ್ಲ. ಕಿರುತೆರೆಯ ಬಳಿಕ ಹಿರಿತೆರೆಯಲ್ಲಿಯೂ ತಮ್ಮ ಪ್ರಯಾಣ ಪ್ರಾರಂಭಿಸಿದ್ದರು.

2022 ರಲ್ಲಿ ಶಿವತೇಜಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ಗೌಡ ಅವರ ಜೊತೆಗೆ ದಿಲ್‌ಪಸಂದ್ ಚಿತ್ರದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಬಳಿಕ ಮೇಘಾ ಶೆಟ್ಟಿ, ಮಹೇಶ್ ಗೌಡ ನಿರ್ದೇಶನದ ಟ್ರಿಬಲ್ ರೈಡಿಂಗ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅದಿತಿ ಪ್ರಭುದೇವ, ರಚನಾ ಇಂದರ್ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗ ಅವರು ತಮ್ಮ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ'ಯಲ್ಲಿ ನಟಿಸಿದ್ದಾರೆ. ಚಿತ್ರ ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸಿದೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟಿಸಿರುವ ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದಾದ ನಂತರ ಬನಾರಸ್ ನಿರ್ದೇಶಕ ಜಯತೀರ್ಥ ಜಯಣ್ಣ ನಿರ್ದೇಶನದ ಕೈವಾ ಚಿತ್ರದಲ್ಲಿ ನಟ ಧನ್ವೀರ್ ಜೊತೆ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actress Megha Shetty's Morning Selfies: see pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X