ನವರಸ ನಾಯಕ ಜಗ್ಗೇಶ್ ಮೇಲೆ ಕನ್ನಡದ ಈ ನಟಿಗೆ ಕ್ರಶ್ ಆಗಿತ್ತು

Recommended Video

ಸಿನಿಮಾ ಫೀಲ್ಡ್ ಬಂದ ಮೇಲೆ ಕನ್ನಡದ ಮೇಲೆ ಅಭಿಮಾನ | FILMIBEAT KANNADA

ನವರಸ ನಾಯಕ ಜಗ್ಗೇಶ್ ಮೇಲೆ ನನಗೆ ಕ್ರಶ್ ಆಗಿತ್ತು ಎಂದು ಕನ್ನಡದ ನಟಿ ಹೇಳಿದ್ದಾರೆ. ಆಕೆ ಬೇರೆ ಯಾರು ಅಲ್ಲ ಮೇಘನಾ ಗಾಂವ್ಕರ್.

'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ನಟ ಜಗ್ಗೇಶ್ ಜೊತೆಗೆ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಘನಾ, ಜಗ್ಗೇಶ್ ಮೇಲೆ ಕ್ರಶ್ ಆಗಿದ್ದ ವಿಷಯ ಹಂಚಿಕೊಂಡಿದ್ದಾರೆ.

ಮೇಘನಾ ಮೊದಲ ಬಾರಿಗೆ ನೋಡಿದ ಜಗ್ಗೇಶ್ ಸಿನಿಮಾ 'ಸರ್ವರ್ ಸೋಮಣ್ಣ'. ಈ ಸಿನಿಮಾದಲ್ಲಿ ಜಗ್ಗೇಶ್ ಮಾಡಿದ ಕಾಮಿಡಿ, ಅವರ ಮ್ಯಾನರಿಸಂ ಮೇಘನಾಗೆ ಬಹಳ ಇಷ್ಟ ಆಗಿತಂತೆ. ಆ ಸಿನಿಮಾ ನೋಡಿ ಜಗ್ಗೇಶ್ ಮೇಲೆ ಕ್ರಶ್ ಆಗಿತಂತೆ. ಹೀಗಿರುವಾಗ, ಅಂತೂ ತಮ್ಮ ಮೆಚ್ಚಿನ ನಟನ ಜೊತೆಗೆ ಮೇಘನಾ ತೆರೆ ಹಂಚಿಕೊಂಡಿದ್ದಾರೆ.

actress meghana gaonkar had a crush on jaggesh

ಈ ಹಿಂದೆ ಮೂರು ಸಿನಿಮಾಗಳಲ್ಲಿ ಜಗ್ಗೇಶ್ ಜೊತೆಗೆ ಮೇಘನಾ ಗಾಂವ್ಕರ್ ನಟಿಸಬೇಕಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆ ಸಿನಿಮಾಗಳಿಂದ ಮೇಘನಾ ಆಚೆ ಬಂದರು. ಆದರೆ, 'ಕಾಳಿದಾಸ ಕನ್ನಡ ಮೇಷ್ಟ್ರು' ಮೂಲಕ ಮೇಘನಾ ಆಸೆ ಈಡೇರಿದೆ.

actress meghana gaonkar had a crush on jaggesh

'ಕಾಳಿದಾಸ ಕನ್ನಡ ಮೇಷ್ಟ್ರು' ಕವಿರಾಜ್ ನಿರ್ದೇಶನದ ಸಿನಿಮಾವಾಗಿದೆ. ಕನ್ನಡ ಶಿಕ್ಷಕನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್ ಪತ್ನಿಯಾಗಿ, ಇಂಗ್ಲೀಷ್ ಪ್ರೇಮಿಯಾಗಿ ಮೇಘನಾ ನಟಿಸಿದ್ದಾರೆ.

More from Filmibeat

English summary
Kannada actress Meghana Gaonkar had a crush on actor Jaggesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X