ಮಮ್ಮಿಯಾದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮಮ್ಮಿಯಾಗಿದ್ದಾರೆ. ಕಳೆದ ವರ್ಷ ನಟ ಚಿರಂಜೀವಿ ಸರ್ಜಾ ಜೊತೆ ಹಸೆಮಣೆ ಏರಿದ್ದ ಮೇಘನಾ ಈಗ ತಾಯಿಯಾಗಿದ್ದಾರೆ. ಅಯ್ಯೋ ಮೇಘನಾ ತಾಯಿಯಾಗಿದ್ದು ರಿಯಲ್ ಆಗಿ ಅಲ್ಲ. ರೀಲ್ ಮೇಲೆ.

ಹೌದು, ಮೇಘನಾ ಅಭಿನಯದ ಹೊಸ ಸಿನಿಮಾದಲ್ಲಿ ಮಮ್ಮಿಯಾಗಿದ್ದಾರೆ. ಮೊದಲ ಬಾರಿಗೆ ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅಭಿನಯಿಸುತ್ತಿರುವ ಸಿನಿಮಾಗೆ "ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ" ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದಲ್ಲಿ ಸೆಲ್ಫಿ ಮಮ್ಮಿಯಾಗಿ ಮೇಘನಾ ಗೂಗಲ್ ಡ್ಯಾಡಿಯಾಗಿ ಸೃಜನ್ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿರಲಿಲ್ಲ.

Recommended Video

Onti Kannada Movie : ತಮ್ಮ ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ನಿಡಿದ ಮೇಘನಾ ರಾಜ್..! | FILMIBEAT KANNADA

ಸುಮಾರು ನಾಲ್ಕು ತಿಂಗಳ ಚರ್ಚೆಯ ಬಳಿಕ ಈ ಟೈಟಲ್ ಅನ್ನು ಫಿಕ್ಸ್ ಮಾಡಿದ್ದಾರಂತೆ. ಚಿತ್ರದ ಹೊಸ ಟೈಟಲ್ ಮತ್ತು ವಿನ್ಯಾಸದ ಬಗ್ಗೆ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. "ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ" ಟೈಟಲ್ ಜೊತೆಗೆ "ಮಕ್ಕಳ ಕಥೆ ಕೇಳಲೇ ಬೇಡಿ" ಎನ್ನುವ ಸಬ್ ಟೈಟಲ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

Actress Meghana Raj And Srujan Lokesh New Movie Titled Selfie Mummy Google Daddy

ಅಂದ್ಹಾಗೆ ಈ ಚಿತ್ರ ಮಧುಚಂದ್ರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದ ಟೈಟಲ್ ಹೇಳುವ ಹಾಗೆ ಇದು ಮೊಬೈಲ್ ವ್ಯಸನಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ. ಸದ್ಯ ಟೈಟಲ್ ಮಾತ್ರ ರಿವೀಲ್ ಮಾಡಿರುವ ಮೇಘನಾ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದ್ದಾರಂತೆ.

ಮೇಘನಾ ಮತ್ತು ಸೃಜನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ ಇವರ ಜೊತೆಗೆ ಸುಧಾ ಬರಗೂರು ಮತ್ತು ಅಚ್ಯುತ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಧ್ಯದಲ್ಲೇ ತೆರೆಗೆ ಬರಲಿದೆ.

More from Filmibeat

English summary
Kannada actress Meghana Raj and Srujan Lokesh new movie titled Selfie mummy Google Daddy. This movie is directed by Madhuchandra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X