ಹೆಸರಿನ ಬಳಿಕ ಫೇಸ್ ಬುಕ್ ಪ್ರೊಫೈಲ್ ಬದಲಾಯಿಸಿದ ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಪತಿ ಚಿರಂಜೀವಿ ನೆನಪಿನಲ್ಲಿಯೆ ದಿನಕಳೆಯುತ್ತಿದ್ದಾರೆ. ಚಿರು ಇಲ್ಲದ ನೋವಿನಲ್ಲಿಯೆ ಇತ್ತೀಚಿಗೆ ಇತ್ತೀಚಿಗೆ ತುಂಬಾ ಭಾವುಕವಾದ ಬಹರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದಾದ ಬಳಿಕ ಮೇಘನಾ ಚಿರು ನೆನಪಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
Recommended Video
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ ಮೇಘನಾ ರಾಜ್ ಅಂತ ಮಾತ್ರ ಇತ್ತು. ಆದರೆ ಇತ್ತೀಚಿಗೆ ಹೆಸರನ್ನು ಎಡಿಟ್ ಮಾಡಿ ಸರ್ಜಾ ಕುಟುಂಬದ ಸರ್ ನೇಮ್ ಅನ್ನು ಸೇರಿಸಿಕೊಂಡಿದ್ದಾರೆ. ಈಗ ಮೇಘನಾ ಹೆಸರು ಮೇಘನಾ ರಾಜ್ ಸರ್ಜಾ ಎಂದಾಗಿದೆ. ಚಿರಂಜೀವಿ ಹೆಸರನ್ನು ಸಹ ಶಾಶ್ವತವಾಗಿ ಜೊತೆಯೆ ಇಟ್ಟುಕೊಂಡಿದ್ದಾರೆ. ಈಗ ಮೇಘನಾ ಫೇಸ್ ಬುಕ್ ಪ್ರೊಫೈಲ್ ಅನ್ನು ಬದಲಾಯಿಸಿಕೊಂಡಿದ್ದಾರೆ. ಮುಂದೆ ಓದಿ..

ಫೇಸ್ ಬುಕ್ ಪ್ರೊಫೈಲ್ ಬದಲಾಯಿಸಿದ ಮೇಘನಾ
ಹೆಸರು ಬದಲಾಯಿಸಿದ ಬಳಿಕ ಮೇಘನಾ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಅನ್ನು ಬದಲಾಯಿಸಿದ್ದಾರೆ. ಫೇಸ್ ಬುಕ್ ನಲ್ಲಿಇಷ್ಟುದಿನ ಕೇವಲ ಮೇಘನಾ ರಾಜ್ ಫೋಟೋ ಮಾತ್ರ ಇತ್ತು. ಆದರೀಗ ಪತಿ ಚಿರು ಜೊತೆ ಇರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.

ಸೆಲ್ಫಿ ಫೋಟೋ ಅಪ್ ಲೋಡ್ ಮಾಡಿದ ಮೇಘನಾ
ಮೇಘನಾ ಮತ್ತು ಚಿರು ಇಬ್ಬರು ಕಾರಿನಲ್ಲಿ ಕುಳಿತಿರುವ ಫೋಟೋ ಇದಾಗಿದೆ. ಗ್ಲಾಸ್ ಹಾಕಿಕೊಂಡು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಇಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದೆ. ಮೇಘನಾ ಫೋಟೋ ಬದಲಾಯಿಸುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಮಾಡಿ ಸಾಂತ್ವನ ಹೇಳುತ್ತಿದ್ದಾರೆ.

ಚಿರು ಬಗ್ಗೆ ಭಾವುಕ ಬರಹ
ಚಿರು ಬಗ್ಗೆ ಭಾವುಕವಾಗಿ ಪತ್ರ ಬರೆದಿದ್ದರು. ಚಿರು ನಾನು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ನಿನಗೆ ಏನನ್ನು ಹೇಳಲು ಬಯಸಿದ್ದೆನೋ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನೀನು ಏನಾಗಿದ್ದೆ ಎಂಬುದನ್ನು ಜಗತ್ತಿ ಎಲ್ಲಾ ಪದಗಳೂ ವರ್ಣಿಸಲು ಸಾಧ್ಯವಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಸಂಗಾತಿ, ನನ್ನ ಮಗು, ನನ್ನ ಪತಿ ಎಲ್ಲದಕ್ಕಿಂತಲೂ ಹೆಚ್ಚು. ನೀನು ನನ್ನ ಆತ್ಮದ ತುಣುಕು" ಎಂದು ಚಿರು ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದರು.

ಅತ್ತಾಗ ಹೆಗಲು ಕೊಟ್ಟವರಿಗೆ ಕೈ ಮುಗಿದ ಮೇಘನಾ
'ನಾನು ಅತ್ತಾಗ ನೀವು ಕಣ್ಣೀರು ಸುರಿಸಿದ್ದೀರಿ, ನನ್ನ ನೋವನ್ನೂ ನೀವೂ ಹಂಚಿಕೊಂಡಿದ್ದೀರಿ, ನನ್ನಷ್ಟೆ ಚಿರುವನ್ನು ನೀವು ಪ್ರೀತಿಸಿದ್ದೀರಿ, ಆ ಪ್ರೀತಿಗೆ ನಾನು ಚಿರರುಣಿ. ಇಂಥಹಾ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ್ದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರೂ ಇಲ್ಲ' ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications