ಧೃವ ಮದುವೆಯಲ್ಲಿ ಮೇಘನಾ ರಾಜ್ ನಡೆದುಕೊಂಡ ರೀತಿಗೆ ಅಭಿಮಾನಿಗಳಿಂದ ಮೆಚ್ಚುಗೆ

ಸ್ಯಾಂಡಲ್ ವುಡ್ ನಟಿ ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ ರಾಜ್, ಧೃವ ಮದುವೆಯಲ್ಲಿ ನಡೆದುಕೊಂಡ ರೀತಿಗೆ ಭಾರಿ ಮೆಚ್ಚುಗೆ ವಾಗುತ್ತಿದೆ. ನಟ ಧೃವ ಸರ್ಜಾ ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದರು. ಸಾವಿರಾರು ಅಭಿಮಾನಿಗಳು ಧೃವ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.

ಈ ಸಮಯದಲ್ಲಿ ಧೃವ ಸರ್ಜಾಗೆ ಶುಭಹಾರೈಸಲು ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು. ಮದುವೆಗೆ ಬಂದಿದ್ದ ವಿಶೇಷ ಅಭಿಮಾನಿಯನ್ನು ಮೇಘನಾ ಉಪಚರಿಸಿ ಅವರ ಜೊತೆ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಮೇಘನಾ ಪ್ರೀತಿಕಂಡು ಅಭಿಮಾನಿ ಕೂಡ ಒಮ್ಮೆ ಬೆರಗಾಗಿದ್ದಾರೆ. ಮೇಘನಾ ಜೊತೆ ಫೋಟೋ ಕೇಳಿದಕ್ಷಣ ನಟಿ ಪ್ರೀತಿಯಿಂದ ಒಪ್ಪಿಕೊಂಡು ಸೆಲ್ಫಿ ನೀಡಿದ್ದಾರೆ.

ವೈರಲ್ ಆಗಿದೆ ಮೇಘನಾ ಪೋಟೋ

ವೈರಲ್ ಆಗಿದೆ ಮೇಘನಾ ಪೋಟೋ

ಯಾವುದೇ ಹಮ್ಮು ಬಿಮ್ಮು ತೋರದೆ ಮೇಘನಾ ಅಭಿಮಾನಿ ಜೊತೆ ಸರಳವಾಗಿ ನಡೆದುಕೊಂಡು ರೀತಿಗೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಮೇಘನಾ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಭಿಮಾನಿ ಜೊತೆ ಮೇಘನಾ ತೆಗೆಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸರ್ಜಾ ಕುಟುಂಬದ ತಕ್ಕ ಸೊಸೆ

ಸರ್ಜಾ ಕುಟುಂಬದ ತಕ್ಕ ಸೊಸೆ

ಅಭಿಮಾನಿಗಳ ಜೊತೆ ಸರ್ಜಾ ಕುಟುಂಬ ಪ್ರೀತಿಯಿಂದ ಮತ್ತು ಸರಳವಾಗಿಯೆ ಇರುತ್ತಾರೆ. ಅಭಿಮಾನಿಗಳನ್ನು ವಿವಿಐಪಿ ಎಂದಿರುವ ಧೃವ ಅಭಿಮಾನಿಗಳಿಗಾಗಿಯೆ ವಿಶೇಷ ಆರತಕ್ಷತೆ ಏರ್ಪಡಿಸಿದ್ದರು. ಅಭಿಮಾನಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಸರ್ಜಾ ಕುಟುಂಬಕ್ಕೆ ಮೇಘನಾ ತಕ್ಕ ಸೊಸೆಯಾಗಿದ್ದಾರೆ. ಆಡಂಬರ, ಅಬ್ಬರವಿಲ್ಲದ ಸ್ಯಾಂಡಲ್ ವುಡ್ ನ ಸರಳ ನಟಿ ಮೇಘನಾ.

ಅಭಿಮಾನಿಗಳಿಂದ ಮೆಚ್ಚುಗೆ

ಅಭಿಮಾನಿಗಳಿಂದ ಮೆಚ್ಚುಗೆ

ಹಣ, ಅಂತಸ್ತು, ನೇಮು ಫೇಮ್ ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆ ಮುಖ್ಯ. ಮುನುಷ್ಯನ ನಿಜರೂಪ ಗೊತ್ತಾಗುವುದೇ ಅವರು ನಡೆದುಕೊಳ್ಳುವ ರೀತಿಯಲ್ಲಿ. ಈ ವಿಚಾರದಲ್ಲಿ ಮೇಘನಾ ಈಗ ಎಲ್ಲರ ಮನಗೆದ್ದಿದ್ದಾರೆ. ಅಲ್ಲದೆ ಧೃವ ಮದುವೆಯ ಸಡಗರದ ನಡುವೆಯು ಮೇಘನಾ ಅಭಿಮಾನಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಮತ್ತು ನಡೆದುಕೊಂಡ ರೀತಿ ಸದ್ದು ಮಾಡುತ್ತಿರುವುದು ವಿಶೇಷ.

24ಕ್ಕೆ ಮದುವೆ 25ಕ್ಕೆ ಆರತಕ್ಷತೆ

24ಕ್ಕೆ ಮದುವೆ 25ಕ್ಕೆ ಆರತಕ್ಷತೆ

ನಟ ಧೃವ ಸರ್ಜಾ ಮತ್ತು ಪ್ರೇರಣ ಶಂಕರ್ ಮದುವೆ ಇದೆ ತಿಂಗಳು 24ರಂದು ಅದ್ದೂರಿಯಾಗಿ ನೆರವೇರಿತು. ಬೆಂಗಳೂರಿನ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ಇಬ್ಬರ ಮದುವೆ ನೆರವೇರಿತು. 24 ಸಂಜೆ ಚಿತ್ರರಂಗದ ಗಣ್ಯರಿಗೆ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇನ್ನು 25ರಂದು ಅಭಿಮಾನಿಗಳಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು.

More from Filmibeat

English summary
Kannada actress Meghana Raj has appreciated for her simplicity in the Dhruv Sarja wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X