ಮೇಘನಾ ರಾಜ್ ಪ್ರೀತಿಯ 'ಬ್ರೂನೋ' ಇನ್ನಿಲ್ಲ, ಭಾವುಕರಾದ ನಟಿ
ಕನ್ನಡ ನಟಿ ಮೇಘನಾ ರಾಜ್ ಬಹಳ ಇಷ್ಟ ಪಡುತ್ತಿದ್ದ ಬ್ರೂನೋ ಬಾರದ ಲೋಕಕ್ಕೆ ತೆರಳಿದೆ. ಮೇಘನಾ ಕುಟುಂಬದಲ್ಲಿ ಒಬ್ಬರು ಎನ್ನುವಂತಿದ್ದ ಪ್ರೀತಿಯ ಬ್ರೂನೋ (ಶ್ವಾನ) ಗುರುವಾರ ನಿಧನವಾಗಿದೆ. ಬೆಸ್ಟ್ ಫ್ರೆಂಡ್ ಆಗಿದ್ದ ಬ್ರೂನೋ ಕಳೆದುಕೊಂಡ ನಟಿ ಮೇಘನಾ ರಾಜ್ ಭಾವುಕರಾಗಿದ್ದಾರೆ.
Recommended Video
ಬ್ರೂನೋ ಜೊತೆಗಿನ ಒಡನಾಟ, ಕುಟುಂಬಕ್ಕೆ ಅದರೊಂದಿಗಿದ್ದ ಆತ್ಮೀಯತೆಯ ಬಗ್ಗೆ ಮೇಘನಾ ರಾಜ್ ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ. ಬ್ರೂನೋ ಜೊತೆ ಆಟವಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿರುವ ಮೇಘನಾ 'ಜೂನಿಯರ್ ಚಿರು ಜೊತೆ ಆಡಬೇಕಿತ್ತು. ಬಿಟ್ಟೆ ಹೋದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಬ್ರೂನೋ ಕಳೆದುಕೊಂಡೆ
''ತುಂಬಾ ಕಳೆದುಕೊಂಡೆ. ಅವನ ಬಗ್ಗೆ ಪರಿಚಯ ಅಗತ್ಯವಿಲ್ಲ. ಬ್ರೂನೋ! ನನ್ನ ಅತ್ಯುತ್ತಮ ಆತ್ಮೀಯ ಸ್ನೇಹಿತ, ಇಂದು ಕೊನೆಯುಸಿರೆಳೆದ'' ಎಂದು ಮೇಘನಾ ರಾಜ್ ನೋವಿನಿಂದ ಪೋಸ್ಟ್ ಹಾಕಿದ್ದಾರೆ. ಚಿರು ಪತ್ನಿ ತಮ್ಮ ಪ್ರೀತಿಯ ಬ್ರೂನೋ ಕಳೆದುಕೊಂಡರು ಎಂಬ ವಿಚಾರ ತಿಳಿದ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಜೂನಿಯರ್ ಚಿರು ಜೊತೆ ಆಡಬೇಕಿತ್ತು
'ಜೂನಿಯರ್ ಚಿರು ಜೊತೆ ಆಟ ಆಡಬೇಕಿತ್ತು. ಅವನ ಬೆನ್ನೆ ಮೇಲೆ ಹೊತ್ತು ಸವಾರಿ ಮಾಡಬೇಕಿತ್ತು. ಸಾಮಾನ್ಯವಾಗಿ ಬ್ರೂನೋಗೆ ಮಕ್ಕಳು ಅಂದ್ರೆ ಆಗಲ್ಲ. ಅದ್ಯಾಗೋ ಜೂನಿಯರ್ ಚಿರು ಜೊತೆ ಹೊಂದಿಕೊಂಡಿದ್ದ. ಬಹುಶಃ ತನ್ನ ಯಜಮಾನನ ಬಗ್ಗೆ ಆತ ತಿಳಿದಿದ್ದ'' ಎಂದು ಬ್ರೂನೋ ಸ್ವಭಾವದ ಬಗ್ಗೆ ತಿಳಿಸಿದರು.

ಚಿರು ಜೊತೆ ಇರ್ತಿಯಾ ಎಂಬ ನಂಬಿಕೆ
''ಅವನಿಲ್ಲದೇ ಈ ಮನೆ ಎಂದಿನಂತೆ ಇರಲ್ಲ. ಮನೆಗೆ ಯಾರೇ ಬಂದರೂ ಬ್ರೂನೋ ಎಲ್ಲಿ ಅಂತ ಕೇಳ್ತಿದ್ದರು. ಬಹುಶಃ ನೀನು ಚಿರು ಜೊತೆ ಇರ್ತಿಯಾ ಹಾಗೆ ಯಾವಾಗಲೂ ಅವರಿಗೆ ತೊಂದರೆ ಕೊಡ್ತಿಯಾ ಎಂದು ನಾನು ಭಾವಿಸುತ್ತೇನೆ'' ಎಂದು ಮೇಘನಾ ರಾಜ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಚಿರು ಇಲ್ಲದ ನೋವು ಕಾಡ್ತಿದೆ
ಕಳೆದ ವರ್ಷ ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ ನಿಧನರಾದರು. ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅಕ್ಟೋಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಮೇಘನಾಗೆ ಮಗು ಖುಷಿ ತಂದಿತು. ಈಗ ಬಹಳ ಇಷ್ಟಪಟ್ಟಿದ್ದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬ್ರೂನೋ ಸಾವನ್ನಪ್ಪಿರುವುದು ಸಹಜವಾಗಿ ಮೇಘನಾಗೆ ನೋವನ್ನುಂಟು ಮಾಡಿದೆ.


Click it and Unblock the Notifications











