ಭಾನುವಾರ(ಇಂದು) ಆ ಪ್ರಶ್ನೆಗೆ ಉತ್ತರ ಕೊಡ್ತೀನಿ: ಕುತೂಹಲ ಕೆರಳಿಸಿದ ಮೇಘನಾ ರಾಜ್ ಪೋಸ್ಟ್

ಚಿರು ಅಗಲಿಕೆಯ ನೋವಿನಿಂದ ಹೊರ ಬಂದಿರುವ ನಟಿ ಮೇಘನಾ ರಾಜ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗನ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಮೇಘನಾ ರಾಜ್ ಮಾಡಿರುವ ಪೋಸ್ಟ್‌ವೊಂದು ಭಾರೀ ಕುತೂಹಲ ಕೆರಳಿಸಿದೆ.

'2020, ಒಂದು ಭಾನುವಾರ. ನನ್ನ ಬದುಕು ಸಂಪೂರ್ಣವಾಗಿ ಬದಲಾದ ದಿನ. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ(ಇಂದು) ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10.35ಕ್ಕೆ' ಎಂದು ಮೇಘನಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನು? ಮೇಘನಾ ಕೊಡುವ ಉತ್ತರ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇನ್ನು ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಸಾಕಷ್ಟು ಊಹೆ ಮಾಡುತ್ತಿದ್ದಾರೆ. ಏನಪ್ಪಾ ಆ ಪ್ರಶ್ನೆ, ಏನಿರಬಹುದು ಉತ್ತರ? ಎಂದು ಗೆಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

Actress Meghana Rajs Cryptic Post Leaves Everyone In Curiosity

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ 'ಆಟಗಾರ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ, ಪೋಷಕರು ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಆಗಿದ್ದರು. ಆದರೆ 2020, ಜೂನ್ 7ರಂದು ಚಿರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅದಾಗಿ ಕೆಲವೇ ತಿಂಗಳಲ್ಲಿ ಮೇಘನಾ ಪುತ್ರ ರಾಯನ್ ಸರ್ಜಾಗೆ ಜನ್ಮ ನೀಡಿದ್ದರು. ಮಗನನ್ನು ನೋಡುತ್ತಾ ನೋವನ್ನು ಮರೆತ್ತಿದ್ದರು. ಇದೀಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಮೇಘನಾ ಸರ್ಜಾ ಮಾಡಿರುವ ಪೋಸ್ಟರ್ ಕುತೂಹಲ ಕೆರಳಿಸಿದ್ದು, ಆ ಪ್ರಶ್ನೆ ಹಾಗೂ ಆಕೆಯ ಉತ್ತರ ಏನು? ಎನ್ನುವುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

More from Filmibeat

English summary
Actress Meghana Raj's Cryptic Post Leaves Everyone In Curiosity. Meghana Raj to make a comeback with a thriller movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X