For Quick Alerts
  ALLOW NOTIFICATIONS  
  For Daily Alerts

  ಪುತ್ರನಿಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್

  |

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತನ್ನ ಪುತ್ರನಿಗೆ ಆರು ತಿಂಗಳು ತುಂಬಿದ ಸಂತಸದಲ್ಲಿದ್ದಾರೆ. ಜೂ.ಚಿರು ಜನಿಸಿ 6 ತಿಂಗಳಾಗಿದೆ. ಮುದ್ದಾದ ಮಗನ ಆರು ತಿಂಗಳ ಸಂಭ್ರಮವನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮಗನ ಕ್ಯೂಟ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮ ಪಟ್ಟಿದ್ದಾರೆ. ಸುಂದರವಾದ ಕೇಕ್ ಕತ್ತರಿಸುವ ಮೂಲಕ ಮಗನ ಆರು ತಿಂಗಳ ಸಂಭ್ರಮವನ್ನು ಆಚರಿಸಿದ್ದಾರೆ. ನೀಲಿ ಬಣ್ಣದ ಉಡುಪು ಧರಿಸಿರುವ ಜೂ.ಚಿರು ಸಖತ್ ಮುದ್ದಾಗಿ ಕಾಣಿಸುತ್ತಿದ್ದಾನೆ. ಫೋಟೋ ಜೊತೆಗೆ ಮೇಘನಾ, '6 ತಿಂಗಳು ಕಳೆದಿದೆ. ಅಪ್ಪ ಮತ್ತು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

  ಸಣ್ಣ ತಪ್ಪಿನಿಂದಾಗಿ ಮತ್ತೆ ಕೊರೊನಾ ಭಯಕ್ಕೆ ಸಿಲುಕಿದ ಮೇಘನಾ ರಾಜ್ಸಣ್ಣ ತಪ್ಪಿನಿಂದಾಗಿ ಮತ್ತೆ ಕೊರೊನಾ ಭಯಕ್ಕೆ ಸಿಲುಕಿದ ಮೇಘನಾ ರಾಜ್

  ನಟಿ ಮೇಘನಾ ಕಳೆದ ವರ್ಷ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡು ದುಃಖದಲ್ಲಿದ್ದ ಇಡೀ ಕುಟುಂಬಕ್ಕೆ ಜೂ.ಚಿರು ಸಂತೋಷವನ್ನು ಹೊತ್ತು ತಂದಿದ್ದಾನೆ. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುತ್ತಿದ್ದಾರೆ ಮೇಘನಾ.

  ಕೋವಿಡ್ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಮೇಘನಾ ಕೊರೊನಾ ಆತಂಕದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  'ನಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಮತ್ತೊಮ್ಮೆ ಕೊರೊನಾ ಭಯ ಅನುಭವಿಸುವಂತಾಯಿತು. ಇತ್ತೀಚೆಗೆ ನನ್ನ ಗೆಳೆಯರೊಬ್ಬರೊಂದಿಗೆ ಸಂಪರ್ಕದಲ್ಲಿದ್ದೆ. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆಯಿತು. ಕೂಡಲೇ ನಾನು ಸೆಲ್ಫ್ ಐಸೋಲೇಷನ್ ಗೆ ಒಳಗಾದೆ. ಆದರೆ ಆ ಸಮಯದಲ್ಲಿ ನನ್ನ ಸಣ್ಣ ಮಗು, ನನ್ನ ತಂದೆ-ತಾಯಿಯ ಆರೋಗ್ಯದ ಬಗ್ಗೆ ಯೋಚಿಸಿ ತೀವ್ರವಾಗಿ ಆತಂಕಗೊಂಡಿದ್ದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದೆ' ಎಂದು ಹೇಳಿದ್ದಾರೆ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

  'ಕೊರೊನಾ ಒಬ್ಬರ ದೇಹದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ. ಕೆಲವರಿಗೆ ಏನೂ ಹಾನಿ ಮಾಡುವುದಿಲ್ಲ. ಕೆಲವರನ್ನು ಬಹಳ ಕಾಡಿಸುತ್ತದೆ. ಕೆಲವರ ಜೀವಕ್ಕೇ ಕುತ್ತು ತರುತ್ತದೆ. ರೋಗ ಬಂದವರನ್ನು, ಅವರ ಸುತ್ತ-ಮುತ್ತ ಇರುವವರನ್ನು, ಪ್ರೀತಿಪಾತ್ರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತಗೊಳಿಸುತ್ತದೆ. ನಾವು ನಮ್ಮ ಜಾಗೃತೆಯಲ್ಲಿರದೆ ಬೇರೆ ದಾರಿಯೇ ಇಲ್ಲ' ಎಂದು ಮೇಘನಾ ಹೇಳಿದ್ದಾರೆ.

  English summary
  Actress Meghana Raj son complete 6 months. She celebrate her son 6th month birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X