»   » ಪರಾರಿಯಲ್ಲಿ ಮೇಘನಾ ನಾಯ್ಡು ಐಟಂ ಡಾನ್ಸ್

ಪರಾರಿಯಲ್ಲಿ ಮೇಘನಾ ನಾಯ್ಡು ಐಟಂ ಡಾನ್ಸ್

Posted By:
Subscribe to Filmibeat Kannada

ಆಂಧ್ರಪ್ರದೇಶ ವಿಜಯವಾಡ ಹಾಟ್ ಬೆಡಗಿ ಮೇಘನಾ ನಾಯ್ಡು. ಈಗ ಈಗಾಗಲೆ ಕನ್ನಡದ 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈಗ ಮತ್ತೊಂದು ಚಿತ್ರದ ಐಟಂ ಹಾಡಿಗಾಗಿ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. 'ಆ ದಿನಗಳು' ಖ್ಯಾತಿಯ ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರದಲ್ಲಿ ತಮ್ಮ ಸೊಂಟ ಕುಣಿಸಿದ್ದಾರೆ ಮೇಘನಾ.

ಮೇಘನಾ ಜೊತೆ 'ಪರಾರಿ' ಚಿತ್ರದ ಮತ್ತಿಬ್ಬರು ತಾರೆಗಳಾದ ಶುಭಾ ಪೂಂಜಾ ಹಾಗೂ ಜಾಹ್ನವಿ ಸಹ ಸಾಥ್ ನೀಡಿದ್ದಾರೆ. "ಬೀಜ ಮೊದಲಾ ಮರ ಮೊದಲಾ..." ಎಂಬ ಹಾಡಿಗೆ ಹರ್ಷ ನೃತ್ಯ ಸಂಯೋಜನೆಯಲ್ಲಿ ಮೇಘನಾ ಐಟಂ ಡಾನ್ಸ್ ಮಾಡಿದ್ದಾರೆ.


ಸಾಹಿತ್ಯ ನಾಗೇಂದ್ರ ಪ್ರಸಾದ್ ಅವರದು. ಮೇಘನಾ ಜೊತೆ ಡೊಳ್ಳು ಹೊಟ್ಟೆಯ ಹಾಸ್ಯನಟ ಬುಲೆಟ್ ಪ್ರಕಾಶ್ ಹಾಗೂ ಸಾಧುಕೋಕಿಲ ಸಹ ಹೆಜ್ಜೆ ಹಾಕಿದ್ದಾರೆ. ಉಮಾಶ್ರೀ, ಉಮೇಶ್, ಶರತ್ ಲೋಹಿತಾಶ್ವ, ರಂಗಾಯಣ ರಘು, ಅರುಣ್‌ಸಾಗರ್, ಬಿರಾದಾರ್‌ರಂಥ ಅನುಭವಿ ನಟರೂ ಚಿತ್ರದಲ್ಲಿದ್ದಾರೆ.

ಅಲ್ಲದೆ, ಓಬಯ್ಯ ಎಂಬ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಮಿಂಚಲಿದ್ದಾರೆ ಎಂಬುದು'ಪರಾರಿ' ಸ್ಪೆಷಲ್. ಎರಡು ವರ್ಷಗಳಿಂದ ಎಲ್ಲೋ ಪರಾರಿಯಾದಂತಿದ್ದ ನಿರ್ದೇಶಕ ಚೈತನ್ಯರ ಹೊಸ ಚಿತ್ರಕ್ಕೆ ಮೋಹನ್ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಎಚ್.ಸಿ.ವೇಣು ಛಾಯಾಗ್ರಹಣವಿದೆ. (ಏಜೆನ್ಸೀಸ್)

English summary
Actress Meghana Naidu has now performed an item number in Kannada film Parari directed by K M Chaithanya. Actress Shubha Poonja, Jahnavi, Bullet Prakash and Sadhu Kokila are also featured in this song.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada