ಕೊನೆಗೂ 'ರಾಬರ್ಟ್'ಗೆ ಜೊತೆಯಾಗ್ತಿದ್ದಾಳೆ ಆ ಸೌತ್ ಸುಂದರಿ!

Recommended Video

ಕೊನೆಗೂ 'ರಾಬರ್ಟ್'ಗೆ ಜೊತೆಯಾಗ್ತಿದ್ದಾಳೆ ಆ ಸೌತ್ ಸುಂದರಿ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಚಿತ್ರದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಭರ್ಜರಿ ಕಲೆಕ್ಷನ್ ಮಾಡುತ್ತ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸುತ್ತಿರುವ ಕುರುಕ್ಷೇತ್ರ, ದರ್ಶನ್ ಅವರ 50ನೇ ಸಿನಿಮಾ. ಸದ್ಯ ಚಾಲೆಂಜಿಂಗ್ ಸ್ಟಾರ್ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರತಂಡ ಈಗ ಎರಡನೆ ಹಂತದ ಚಿತ್ರೀಕರಣಕ್ಕೆ ಸಿದ್ದವಾಗುತ್ತಿದೆ. ಸೆಪ್ಟಂಬರ್ ಎರಡನೆ ವಾರದಿಂದ ಚಿತ್ರದ ಎರಡನೆ ಹಂತದ ಚಿತ್ರೀಕರಣ ನಡೆಯಲಿದೆ. ಈಗಾಗಲೆ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ನಿದ್ದೆಗೆಡಿರುವ ರಾಬರ್ಟ್ ಈಗ ಟೀಸರ್ ಗಾಗಿ ಎದುರುನೋಡುವಂತೆ ಮಾಡಿದೆ.

ರಾಬರ್ಟ್ ಗೆ ಮೆಹರಿನ್ ಪಿರ್ಜಾದಾ ಎಂಟ್ರಿ

ರಾಬರ್ಟ್ ಗೆ ಮೆಹರಿನ್ ಪಿರ್ಜಾದಾ ಎಂಟ್ರಿ

ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ, ಡಿ ಬಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾಯಕಿಯರ ವಿಚಾರದಲ್ಲಿ ರಾಬರ್ಟ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೀಗ ಮೆಹರಿನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಮುಂದಿನ ತಿಂಗಳು ಚಿತ್ರೀಕರಣದಲ್ಲಿ ಭಾಗಿ

ಮುಂದಿನ ತಿಂಗಳು ಚಿತ್ರೀಕರಣದಲ್ಲಿ ಭಾಗಿ

ರಾಬರ್ಟ್ ಚಿತ್ರದ ಎರಡನೆ ಹಂತದ ಚಿತ್ರೀಕರಣ ಮುಂದಿನ ತಿಂಗಳು ಎರಡನೆ ವಾರದಿಂದ ಪ್ರಾರಂಭವಾಗಲಿದೆ. ಈಗಾಗಲೆ ನಾಯಕಿ ಇಲ್ಲದೆ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮಾಡಿ ಮುಗಿಸಿದೆ ಚಿತ್ರತಂಡ. ಇನ್ನು ಎರಡನೆ ಹಂತದ ಚಿತ್ರೀಕರಣದಲ್ಲಿ ನಾಯಕಿ ಭಾಗಿಯಾಗಲಿದ್ದಾರೆ. ಮುಂದಿನ ತಿಂಗಳು ಎರಡನೆ ವಾರ ನಟಿ ಮೆಹರಿನ್ ರಾಬರ್ಟ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಮೆಹರಿನ್ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಚಿತ್ರೀಕರಣ

ಹೈದರಾಬಾದ್ ನಲ್ಲಿ ಚಿತ್ರೀಕರಣ

ರಾಬರ್ಟ್ ಎರಡನೆ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎರಡನೆ ಹಂತದ ಚಿತ್ರೀಕರಣ ಮಾಡಲಾಗುತ್ತೆ. ಈಗಾಗಲೆ ಸೆಟ್ ಕೂಡ ನಿರ್ಮಾಣವಾಗುತ್ತಿದೆಯಂತೆ. ಎರಡನೆ ಹಂತದ ಚಿತ್ರೀಕರಣ ಒಟ್ಟು 15 ದಿನಗಳಲ್ಲಿ ಮಾಡಿ ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಈಗಾಗಲೆ ಭಾಗಿಯಾಗಿದ್ದಾರೆ ಜಗಪತಿ ಬಾಬು

ಈಗಾಗಲೆ ಭಾಗಿಯಾಗಿದ್ದಾರೆ ಜಗಪತಿ ಬಾಬು

ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಖ್ಯಾತ ಖಳ ನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಜಗಪತಿ ಬಾಬು ಚಿತ್ರತಂಡ ಸೇರಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲೆ ಬಾಗಿಯಾಗಿದ್ದಾರೆ ಜಗಪತಿ ಬಾಬು. ವಿಶೇಷ ಅಂದ್ರೆ ಮೊದಲ ಭಾರಿಗೆ ಜಗಪತಿ ಬಾಬು ಮತ್ತು ದರ್ಶನ್ ಮುಕಾಮುಕಿಯಾಗುತ್ತಿದ್ದಾರೆ. ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ರಾಬರ್ಟ್ ಸಾಕಷ್ಟು ವಿಶೇಷತೆಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

More from Filmibeat

English summary
Darshan starrer Robot Film second schedule of Shooting will start September second week. Actress Mehreen Pirzada joining the set in second schedule Shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X