ಮದುವೆ ನಂತರ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ ಶ್ರೀರಾಮಚಂದ್ರ ಬೆಡಗಿ ; ಮೋಹಿನಿ ಬದುಕಿನಲ್ಲಿ ಆವರಿಸಿದ್ದೇಕೆ ನಿಶ್ಯಬ್ದ?

ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ.

ಇನ್ನು ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಮೋಹಿನಿ.

actress-mohini-of-sriramachandra-fame-speaks-on-depression-surviving-7-suicide-attempts-post-marria

ಹೌದು, ಮೋಹಿನಿ.. ಅಂದಕಾಲತ್ತಿಲ್‌ನ ಚೆಲುವೆ. 1991ರಲ್ಲಿ ತೆರೆಗೆ ಬಂದ ''ಈರಮನ ರೋಜಾವೆ'' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಮೋಹಿನಿ ಆ ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.

ಕೇವಲ ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲ ಕನ್ನಡದಲ್ಲಿ ಕೂಡ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ''ಶ್ರೀರಾಮ ಚಂದ್ರ'' .. ''ಗಡಿಬಿಡಿ ಅಳಿಯ''.. ''ಗಡಿಬಿಡಿ ಕೃಷ್ಣ''.. ''ಲಾಲಿ''.. ''ನಿಶ್ಯಬ್ದ''.. ''ಕುಬೇರ''.. '' ಖಳನಾಯಕ'' ಚಿತ್ರಗಳಲ್ಲಿ ಕನ್ನಡದ ಸ್ಟಾರ್ ಹೀರೋಗಳ ಜೊತೆ ತೆರೆಹಂಚಿಕೊಂಡರು. ನಾಯಕಿಯಾಗಿ ಹೆಜ್ಜೆ ಹಾಕಿದರು.

ಆ ನಂತರ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ 1999ರಲ್ಲಿ ''ಭರತ್'' ಎಂಬುವರನ್ನು ಮದುವೆಯಾದ ಮೋಹಿನಿ ಅಮೆರಿಕಾಗೆ ವಲಸೆ ಹೋದರು. ಎರಡು ಮಕ್ಕಳ ತಾಯಿಯಾದರು. ಮನೆ-ಗಂಡ-ಸಂಸಾರ ಎಂದು ಮುಳುಗಿ ಹೋದರು. ಚಿತ್ರರಂಗದಿಂದ ಸಂಪೂರ್ಣ ದೂರವಾದರು.

ಇಂಥಾ ಮೋಹಿನಿ ಸದ್ಯ ತಮ್ಮ ಬದುಕಿನ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದಲ್ಲ.. ಎರಡಲ್ಲ.. ಬದಲಿಗೆ ಏಳು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದೇ ಎಂದು ಹೇಳಿದ್ದಾರೆ.

actress-mohini-of-sriramachandra-fame-speaks-on-depression-surviving-7-suicide-attempts-post-marria

''ಅವಳ ವಿಕಟನ್‌''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮೋಹಿನಿ ಮದುವೆಯ ನಂತರ ಬದುಕು ಚೆನ್ನಾಗಿಯೇ ಇತ್ತು. ನಾನು ನನ್ನ ಗಂಡ ಮತ್ತು ಮಕ್ಕಳ ಜೊತೆ ಖುಷಿ ಖುಷಿಯಾಗಿಯೇ ಇದ್ದೇ. ಆದರೆ ಅದೇನಾಯ್ತೋ ಗೊತ್ತಿಲ್ಲ. ಒಂದು ಹಂತರದಲ್ಲಿ ನಾನು ಮಾನಸಿಕ ಖಿನ್ನತೆಗೆ ಒಳಗಾದೆ ಎಂದು ಹೇಳಿದ್ದಾರೆ.

ಮಾನಸಿಕ ಖಿನ್ನತೆ ನನ್ನನ್ಯಾಕೆ ಆವರಿಸಿಕೊಂಡಿತು ಎನ್ನುವ ಪ್ರಶ್ನೆಗೆ ನನ್ನ ಬಳಿ ಇವತ್ತು ಕೂಡ ಉತ್ತರ ಇಲ್ಲ ಎಂದು ಹೇಳಿರುವ ಮೋಹಿನಿ, ನನಗೆ ಯಾರಿಂದ ಯಾವ ಸಮಸ್ಯೆ ಕೂಡ ಆಗಿರಲಿಲ್ಲ ಆದರೂ ಕೂಡ ನಾನು ಖಿನ್ನತೆಯಿಂದ ಬಳಲುತ್ತಿದ್ದೆ. ಬದುಕುವುದೇ ಬೇಡ ಎಂದು ಅನಿಸುತ್ತಿತ್ತು. ಒಂದು ಹಂತದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಪ್ರಯತ್ನ ಮಾಡಿದೆ. ಅದು ಒಂದೆರಡು ಬಾರಿ ಅಲ್ಲ ಏಳು ಬಾರಿ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ನನಗೆ ಜ್ಯೋತಿಷಿ ಒಬ್ಬರ ಪರಿಚಯವಾಯಿತು, ಅವರ ಎದುರು ನನ್ನ ಕಷ್ಟ ಹಂಚಿಕೊಂಡಾಗ ಅವರು ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳಿದರು ಎಂದು ಹೇಳಿರುವ ಮೋಹಿನಿ, ಜ್ಯೋತಿಷಿ ಅವತ್ತು ಹೇಳಿದ ಈ ಮಾತಿಗೆ ನಾನು ಗೊಳ್ಳೆಂದು ನಕ್ಕೆ, ಆದರೆ ಆ ನಂತರ ಅವರ ಮಾತು ನಿಜಾ ಎಂಬ ಭಾವನೆ ಬರಲು ಶುರುವಾಯ್ತು. ನಾನ್ಯಾಕೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ ಎನ್ನುವ ಪ್ರಶ್ನೆ ನನ್ನಲ್ಲಿಯೇ ಕಾಡಲು ಶುರುವಾಯ್ತು ಆಗ ನನಗೆ ಶಕ್ತಿ ತುಂಬಿದ್ದೇ ನನ್ನ ಕರುಣಾನಿಧಿ ಯೇಸು ಪ್ರಭು ಎಂದು ಹೇಳಿದ್ದಾರೆ.

More from Filmibeat

English summary
In a raw and emotional confession, actress Mohini discusses her darkest moments, revealing she attempted suicide seven times. This is her journey from a beloved star to fighting for her life against depression after marriage.
Read more about: depression suicide actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X