ಮುಳಬಾಗಿಲಿನಲ್ಲಿ ಮೈಮರೆಸಿದ ನಮಿತಾ ಡಾನ್ಸ್

ಕೋಲಾರದ ಮುಳಬಾಗಿಲಿನಲ್ಲಿ ಜಿಎಂಎಸ್ ಗ್ರೂಪ್ ಹೊಸವರ್ಷಾಚರಣೆಯ ಪ್ರಯುಕ್ತ ರಸಸಂಜೆ ಕಾರ್ಯಕ್ರಮ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಹೆಸರಾಂತ ನಟಿ ಸೆಕ್ಸಿ ನಮಿತಾ ಬಂದು ಹೆಜ್ಜೆ ಹಾಕಿದ್ದು ವಿಶೇಷ.
ದುಂಡು ದುಂಡಾಗಿ ಉಬ್ಬಿ ಹೋಗಿರುವ ನಮಿತ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಪೋಷಾಕಿನಲ್ಲಿ ಗಿಟಾರ್ ಹಿಡಿದುಕೊಂಡು ವೇದಿಕೆಗೆ ಹೆಜ್ಜೆ ಹಾಕಲು ಬರುತ್ತಿದ್ದಂತೆ ನೆರೆದಿದ್ದ ಜನಸ್ತೋಮಕ್ಕೆ ಮಿಂಚಿನ ಸಂಚಾರ. ಪಟಾಕಿ ಹೊಡೆದು, ಶಿಳ್ಳೆ, ಚಪ್ಪಾಳೆ ಮೂಲಕ ನಮಿತಾಳನ್ನು ಸ್ವಾಗತಿಸಿದರು.
ಮೊದಲಿಗೆ ತೆಲುಗು ಹಾಡಿಗೆ ಹೆಜ್ಜೆ ಹಾಕಿದ ನಮಿತ ನಂತರ 'ಊರಿಗೊಬ್ಳೆ ಪದ್ಮಾವತಿ' ಹಾಡಿಗೆ ಸಂಗಡಿಗರೊಂದಿಗೆ ಡ್ಯಾನ್ಸ್ ಮಾಡಿದರು. ನಂತರ ಮತ್ತೊಂದು ತೆಲುಗು ಹಾಡಿಗೆ ಡ್ಯಾನ್ಸ್ ಮಾಡಿ ರಸಸಂಜೆ ಕಾರ್ಯಕ್ರಮಕ್ಕೆ ಬಂದವರ ಮನ ತಣಿಸಿದರು.
ವೇದಿಕೆ ಮುಂದೆ ಬಂದು ಎಲ್ಲಾ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಫೋಟೋ ತೆಗೆದು, ವಿಡಿಯೋ ರೆಕಾರ್ಡ್ ಮಾಡಿದ ಪಡ್ಡೆಗಳು ಧನ್ಯತಾ ಭಾವದಿಂದ 2012ಕ್ಕೆ ಮಂಗಳ ಹಾಡಿದರು. ಕಾರ್ಯಕ್ರಮದ ನಿರೂಪಣೆ ಕನ್ನಡದಲ್ಲಿ ಇತ್ತಾದರೂ ಹಾಡುಗಳು ಮಾತ್ರ ತೆಲುಗು ಮಯವಾಗಿದ್ದವು. ನೀವು ನಮಿತಾ ಜೊತೆ ಹೆಜ್ಜೆ ಹಾಕಿ. (ಕೃಪೆ: ಪಬ್ಲಿಕ್ ಟಿವಿ)


Click it and Unblock the Notifications











