»   » ನಟಿ ನಮಿತಾ ಲ್ಯಾಪ್ ಟಾಪ್ ಚೆಲುವು ಅನಾವರಣ

ನಟಿ ನಮಿತಾ ಲ್ಯಾಪ್ ಟಾಪ್ ಚೆಲುವು ಅನಾವರಣ

By: ಉದಯರವಿ
Subscribe to Filmibeat Kannada

ಮಾದಕ ತಾರೆ ನಮಿತಾ ಆಗಾಗ ಈ ರೀತಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಮ್ಮಸ್ಸಿಗೆ ಕಾರಣವಾಗುತ್ತಲೇ ಇರುತ್ತಾರೆ. ಅಭಿಮಾನಿಗಳ ನಿರೀಕ್ಷೆ, ಕಾತುರಕ್ಕೆ ಅವರು ಯಾವತ್ತೂ ಭಂಗ ತಂದಿಲ್ಲ. ತಮ್ಮ ದೇಹದ ತೂಕ ಅಳತೆ ಮೀರಿದ್ದರೂ ಮಾದಕ ಚೆಲುವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಅದ್ಯಾವುದೋ ತಮಿಳು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಅವರು ಕುಳಿತ ಭಂಗಿ, ಭಾವಗಳು ವಿಶ್ವಾಮಿತ್ರನಂತಹ ಮಹಾನ್ ತಪಸ್ವಿಗಳನ್ನೂ ಕೆಣಕುತ್ತಿತ್ತು. ಆದರೆ ತಪಸ್ಸನ್ನು ಭಂಗ ಮಾಡಲು ಬಂದ ಮೇನಕೆಯಂತೆಯೇ ಅವರು ಕಂಗೊಳಿಸುತ್ತಿದ್ದರು.

ಒಟ್ಟಾರೆಯಾಗಿ ಇದು ಯಾರ ತಪಸ್ಸಿನ ಫಲವೋ ಏನೋ ಗೊತ್ತಿಲ್ಲ. ನಮಿತಾ ಮಾತ್ರ ಧರೆಗಿಳಿದ ರಂಭೆಯಂತೆ ಕಾಣಿಸುತ್ತಿದ್ದರು. ಇಷ್ಟೆಲ್ಲಾ ಮಾದಕ ಚೆಲುವಿದ್ದರೂ ಅದ್ಯಾಕೋ ಏನೋ ಅವಕಾಶಗಳು ಮಾತ್ರ ನಮಿತಾಗೆ ಗಗನಕುಸುಮವಾಗುತ್ತಲೇ ಇವೆ. ಇಲ್ಲಿವೆ ನೋಡಿ ನಮಿತಾ ಪ್ರಾಯ ಪದನಿಸ ಹಾಡಿದ ಸಮಯ...

ನಮಿತಾ ಬಾಳು ಹೊಂಬಾಳೆ

ಸಿಕ್ಕ ಅವಕಾಶಗಳನ್ನು ಮಾತ್ರ ಮಿಸ್ ಮಾಡಿಕೊಳ್ಳದಂತೆ ಬಾಳು ಹೊಂಬಾಳೆ ಮಾಡಿಕೊಂಡಿದ್ದಾರೆ. ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರದಲ್ಲಿ ಮತ್ತೊಮ್ಮೆ ನಮಿತಾ ಅಭಿನಯಿಸಬೇಕು ಎಂಬುದು ಕಲಾರಸಿಕರ ಬಯಕೆ.

ರವಿಚಂದ್ರನ್, ನಮಿತಾ ಸೂಪರ್ ಜೋಡಿ

ಹೂ ಚಿತ್ರದಲ್ಲಿ ರವಿ ಹಾಗೂ ನಮಿತಾ ಮಾಡಿದ ಮೋಡಿಗೆ ಬೆರಗಾಗದವರಿಲ್ಲ. ನೀಲಕಂಠ ಚಿತ್ರದಲ್ಲಂತೂ ಇಬ್ಬರೂ ಹಾವಿನಂತೆ ಸರಿದಾಡಿದ್ದರು. ಹೂ ಚಿತ್ರ ತೋಪಾದರೂ ನಮಿತಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ.

ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಬೆಡಗಿ

ನಮಿತಾ ಸಿನೆಮಾಗಳಿಗಿಂತ ಅವರ ಫೋಟೋಗಳಿಗೇ ಹೆಚ್ಚು ಬೇಡಿಕೆಯಿದೆ. ಅವರ ಸಿನೆಮಾಗಳನ್ನು ಜನರು ನೋಡುವುದಕ್ಕಿಂತ ಹೆಚ್ಚು ಅವರ ಚಿತ್ರಗಳನ್ನು ಅಂರ್ತಜಾಲ ಹಾಗೂ ಸಾಮಾಜಿಕ ತಾಣಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಡೆಸ್ಕ್ ಟಾಪ್, ಲ್ಯಾಪ್ ಟಾಪ್ ನಲ್ಲಿ ಅಲಂಕರಿಸಿಕೊಳ್ಳುವವರಿಗೇನು ಬರವಿಲ್ಲ.

ಲಿವ್ ಇನ್ ರಿಲೇಷನ್ ಷಿಪ್ ನಲ್ಲೇ ನಂಬಿಕೆ

ಮದುವೆ ಮಾಡಿಕೊಂಡು ಮಕ್ಕಳು, ಸಂಸಾರ ಎಂದು ಕನಸು ಕಾಣುವ ಬಯಕೆಯಂತೂ ನಮಿತಾ ಇಲ್ಲ ಬಿಡಿ. ಅವರದೇನಿದ್ದರೂ ಲಿವ್ ಇನ್ ಸಂಬಂಧ. ಈಗಾಗಲೆ ಒಬ್ಬರನ್ನು ಬದಲಿಸಿ ಇನ್ನೊಬ್ಬರ ಜೊತೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದಾರಂತೆ.

ಅದ್ಯಾವಾಗ ಕಾಲ ಕೂಡಿಬರುತ್ತದೋ ಏನೋ

ನಮಿತಾರ ಬಯಕೆ ಏನಪ್ಪಾ ಎಂದರೆ, ಎಷ್ಟೋ ಪಾತ್ರಗಳನ್ನು ಪೋಷಿಸಿದ್ದೇನೆ. ಆದರೆ ಜೀವನದಲ್ಲಿ ಒಮ್ಮೆಯಾದರೂ ಸಿಲ್ಕ್ ಸ್ಮಿತಾ ಪಾತ್ರ ಪೋಷಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಅದ್ಯಾವಾಗ ಕಾಲ ಕೂಡಿಬರುತ್ತದೋ ಏನೋ.

ಸಿಲ್ಕ್ ಸ್ಮಿತಾ ಪಾತ್ರಕ್ಕೆ ಯಾರಾದರೂ ಸಂಪರ್ಕಿಸಿದರೆ..

ಬಹುಶಃ ಅವರ ಈಗಿನ ಮೈಮಾಟ ನೋಡಿದರೆ ಸಿಲ್ಕ್ ಸ್ಮಿತಾ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ ಅನ್ನಿಸುತ್ತದೆ. ಯಾರಾದರೂ ನಿರ್ಮಾಪಕರು ಒಮ್ಮೆ ಸಂಪರ್ಕಿಸಿದರೆ ಖಂಡಿತ ವರ್ಕ್ ಔಟ್ ಆವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Actress Namitha Hot Photos at Anjal Thurai Movie Audio Release Function. Even though there is not much happening on her career front, South Indian hot actress Namitha continues to be in the news for one or the other reason. Irrespective of whether she is acting in films or not, Namitha remains one of the few top searched South actresses on Google.
Please Wait while comments are loading...