»   » ಕಾಲಿವುಡ್ ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ ಕನ್ನಡದ ಜಿಂಕೆಮರಿ ಬೆಡಗಿ

ಕಾಲಿವುಡ್ ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ ಕನ್ನಡದ ಜಿಂಕೆಮರಿ ಬೆಡಗಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ಅಂತ ಲೂಸ್ ಮಾದ ಯೋಗೇಶ್ ಅವರ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದ ನಟಿ ಜಿಂಕೆಮರಿ ನಂದಿತಾ ಶ್ವೇತಾ ಅವರು ಇದೀಗ ತಮಿಳಿನಲ್ಲಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಕನ್ನಡ ಚಿತ್ರರಂಗದಿಂದ ಬಹುತೇಕ ದೂರ ಸರಿದಿದ್ದ ಈ ಸಿಂಪಲ್ ಬೆಡಗಿ ನಂದಿತಾ ಶ್ವೇತಾ ಅವರು ಇತ್ತೀಚೆಗೆ ಇಳೆಯದಳಪತಿ ವಿಜಯ್ ಅವರ 'ಪುಲಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Actress Nandita Swetha start the new innings to Tamil film Industry

ಇದೀಗ ನಿರ್ದೇಶಕ ರಾಧಾ ಮೋಹನ್ ಆಕ್ಷನ್-ಕಟ್ ಹೇಳಿರುವ 'ಉಪ್ಪು ಕರುವಾಡು' ಎಂಬ ತಮಿಳು ಸೂಪರ್ ಕಾಮಿಡಿ ಚಿತ್ರದಲ್ಲಿ ನಮ್ಮ ಕನ್ನಡತಿ ನಂದಿತಾ ಶ್ವೇತಾ ಅವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ನಟ ಕರುಣಾಕರನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರಮುಖ ಚಿತ್ರ ವಿತರಣಾ ಸಂಸ್ಥೆ 'ಔರಾ ಸಿನಿಮಾಸ್' ಅರ್ಪಿಸುವ 'ಉಪ್ಪು ಕರುವಾಡು' ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಇದೇ ವಾರ (ನವೆಂಬರ್ 27) ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ.

Actress Nandita Swetha start the new innings to Tamil film Industry

'ನಾನು ನಿರ್ದೇಶಕ ರಾಧಾ ಮೋಹನ್ ಅವರ ದೊಡ್ಡ ಅಭಿಮಾನಿ, ಜೊತೆಗೆ ಇದೀಗ ನನ್ನ ಕಂಪೆನಿಯ ಪ್ರಾಯೋಜಕತ್ವದಲ್ಲಿ 'ಉಪ್ಪು ಕರುವಾಡು' ಪ್ರಾಜೆಕ್ಟ್ ಮೂಡಿಬರುತ್ತಿರುವುದಕ್ಕೆ, ನನಗೆ ತುಂಬಾ ಸಂತೋಷವಾಗುತ್ತಿದೆ. 'ಉಪ್ಪು ಕರುವಾಡು' ಫುಲ್ ಫ್ಯಾಮಿಲಿ ಪ್ಯಾಕೇಜ್ ನ ಜೊತೆಗೆ ಪಕ್ಕಾ ಕಾಮಿಡಿ ಸಿನಿಮಾ' ಎಂದು ಔರಾ ಸಿನಿಮಾ ಕಂಪೆನಿಯ ಸಿಇಓ ಮಹೇಶ್ ಗೋವಿಂದರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಇಷ್ಟು ದಿನ ಪತ್ತೆ ಇಲ್ಲದ ಕನ್ನಡತಿ ನಂದಿತಾ ಶ್ವೇತಾ ಅವರು ದಿಢೀರ್ ಅಂತ ಮತ್ತೆ ತಮಿಳಿನಲ್ಲಿ ಪ್ರತ್ಯಕ್ಷ ಆಗಿದ್ದು, ಇದೇ ಖುಷಿಗೆ ತಮಿಳು ಭಾಷೆಯಲ್ಲೇ, 'ನನ್ನ ಚಿತ್ರವನ್ನು ನೋಡಿ ನನಗೆ ಸಪೋರ್ಟ್ ಮಾಡಿ' ಅಂತ ತಮ್ಮ ಫೇಸ್ ಬುಕ್ಕಿನಲ್ಲಿ, ಅಭಿಮಾನಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

Posted by Nandita Swetha on Tuesday, November 24, 2015
English summary
Auraa Cinemas, one of the leading south Indian distribution companies, has acquired the theatrical rights of filmmaker Radha Mohan’s upcoming Tamil comedy “Uppu Karuvadu”. Actress Nandita Swetha and Actor Karunakaran in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada