»   » ತಮಿಳುನಾಡು ಮೆಟ್ಟೂರಿನಲ್ಲಿ ನಟಿ ನಯನಾ ಕೃಷ್ಣ?

ತಮಿಳುನಾಡು ಮೆಟ್ಟೂರಿನಲ್ಲಿ ನಟಿ ನಯನಾ ಕೃಷ್ಣ?

Posted By:
Subscribe to Filmibeat Kannada

ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲೆ ಮಾಡಿ ಹಣ ಲಪಟಾಯಿಸಲು ಸಂಚು ರೂಪಿಸಿರುವ ಆರೋಪದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿರುವ ನಟಿ ನಯನಾ ಕೃಷ್ಣ ಅವರ ತಮಿಳುನಾಡಿನ ಮೆಟ್ಟೂರು ಬಳಿ ಇರುವುದಾಗಿ ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.

ಶನಿವಾರ ಬೆಳಗ್ಗೆ ಅವರು ಬಸ್ ನಲ್ಲಿ ಪ್ರಯಾಣಿಸಿ ಮೆಟ್ಟೂರು ತಲುಪಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಿಂದ ಮೆಟ್ಟೂರಿಗೆ ಪ್ರಯಾಣ ಬೆಳಸುತ್ತಿರುವ ಅವರು ಮಾಧ್ಯಮಗಳಿಗೆ ದೂರವಾಣಿ ಮುಖಾಂತರ ಲಭ್ಯವಾಗಿದ್ದು ಅಲ್ಲಿಂದಲೇ ಪ್ರತಿಕ್ರಿಯಿಸಿದ್ದಾರೆ. [ಬ್ಲ್ಯಾಕ್ ಮೇಲ್ ಕೇಸ್ ನಲ್ಲಿ ನಟಿ ನಯನಾ ಕೃಷ್ಣ]

Actress Nayana Krishna

ತಮ್ಮ ಮೇಲಿನ ಎಲ್ಲಾ ಆರೋಪಗಳು ನಿರಾಧಾರ ಎಂದಿರುವ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ. ಚಿತ್ರವೊಂದರ ಶೂಟಿಂಗ್ ಗಾಗಿ ತಮಿಳುನಾಡಿಗೆ ಬಂದಿದ್ದೇನೆಯೇ ಹೊರತು ತಲೆಮರೆಸಿಕೊಂಡಿಲ್ಲ. ವೈದ್ಯರ ಪರಿಚಯ ನನಗಿಲ್ಲ ಎಂದಿದ್ದಾರೆ.

ಚಿತ್ರೀಕರಣ ಮುಗಿಸಿಕೊಂಡು ಭಾನುವಾರ (ಜೂ.22) ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ. ಅಲ್ಲಿಗೆ ಬಂದ ಬಳಿಕ ಎಲ್ಲವನ್ನೂ ವಿಷದವಾಗಿ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಆದರೆ ಯಾವ ಚಿತ್ರದ ಶೂಟಿಂಗ್, ಎಲ್ಲಿ ಚಿತ್ರೀಕರಣ ಎಂಬುವನ್ನು ಮಾತ್ರ ಅವರು ಸ್ಪಷ್ಟಪಡಿಸದೆ ಇರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)

English summary
Kannada actress Nayana Krishna rules out blackmail allegation. The actress reacts via phone to media and clarifies, she is not involved in blackmail case. Nayana Krishna and her associate Riya, said to be part of the gang, are absconding. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada