»   » ಬೆಂಗಳೂರಿನಲ್ಲಿ ನಟಿ ನಯನಾ ಕೃಷ್ಣ ಬಂಧನ

ಬೆಂಗಳೂರಿನಲ್ಲಿ ನಟಿ ನಯನಾ ಕೃಷ್ಣ ಬಂಧನ

By: ಉದಯರವಿ
Subscribe to Filmibeat Kannada

ಹಣಕ್ಕಾಗಿ ವೈದ್ಯರಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣದ ಮುಖ್ಯ ಆರೋಪಿ 'ಕೊಟ್ಲಲ್ಲಪ್ಪೋ ಕೈ' ಖ್ಯಾತಿಯ ನಟಿ ನಯನಾ ಕೃಷ್ಣ ಅವರನ್ನು ಕಡೆಗೂ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಮಂಗಳವಾರ (ಅ.7) ಬಂಧಿಸಿದ್ದಾರೆ.

ಸತತ ಮೂರು ತಿಂಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದರು ನಯನಾ ಕೃಷ್ಣ. ಸಿಸಿಬಿ ಡಿಸಿಪಿ ಗೋಯಲ್ ನೇತೃತ್ವದ ತಂಡ ಕಡೆಗೂ ನಯನಾ ಕೃಷ್ಣ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. [ಏನಿದು ಪ್ರಕರಣ?]

Nayana Krishna

ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಲಪಟಾಯಿಸಲು ಸಂಚು ರೂಪಿಸಿದ ಆರೋಪದಲ್ಲಿ ನಟಿ ನಯನಾ ಕೃಷ್ಣ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖಾಸಗಿ ನ್ಯೂಸ್ ಚಾನಲ್ ಸಿಬ್ಬಂದಿ ಹಾಗೂ ಪೊಲೀಸ್ ಪೇದೆಯೊಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. [ಹನಿಟ್ರಾಪ್ ಎಂದರೇನು?]

ಈ ಪ್ರಕರಣದ ಇನ್ನು ಮೂವರು ಆರೋಪಿಗಳಾದ ಜಿಮ್ ರಘು, 'ಕೊಟ್ಲಲ್ಲಪ್ಪೋ ಕೈ' ಚಿತ್ರದ ನಾಯಕಿ ನಯನಾ ಕೃಷ್ಣ, ಕಿರುತೆರೆ ನಟಿ ರಿಹಾನಾ ಎಂಬುವವರು ತಲೆಮರೆಸಿಕೊಂಡಿದ್ದರು. ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಕಡೆಗೆ ಇಂದು ನಯನ ಕೃಷ್ಣಾ ಅವರನ್ನು ಬಂಧಿಸುವ ಮೂಲಕ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ. (ಏಜೆನ್ಸೀಸ್)

English summary
Actress Nayana Krishna, who is accused in the 'honeytrap blackmail' case of a city doctor, has arrested by CCB police on 7th October in Bangalore. Police had arrested four persons in connection with the case while Nayana Krishna and Riya were on the run.
Please Wait while comments are loading...