»   » ರಿಷಿಗೆ ಹೊಡೆದಿದ್ದ ನಟಿ ನಯನಾ ಕೃಷ್ಣ ಬಂಧನ, ಬಿಡುಗಡೆ

ರಿಷಿಗೆ ಹೊಡೆದಿದ್ದ ನಟಿ ನಯನಾ ಕೃಷ್ಣ ಬಂಧನ, ಬಿಡುಗಡೆ

Posted By:
Subscribe to Filmibeat Kannada
ಕನ್ನಡ ಚಿತ್ರ 'ಕೊಟ್ಲಲ್ಲಪ್ಪೋ ಕೈ' ನಾಯಕಿ ನಟಿ ನಯನಾ ಕೃಷ್ಣ ಅವರನ್ನು ನಿನ್ನೆ (03 ನವೆಂಬರ್ 2012) ಬೆಂಗಳೂರಿನಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಆ ಚಿತ್ರದ ನಿರ್ದೇಶಕ ರಿಷಿ ನೀಡಿದ ದೂರಿನನ್ವಯ ಈ ಬಂಧನ ಹಾಗೂ ಬಿಡುಗಡೆ ಪ್ರಕ್ರಿಯೆ ನಡೆದಿದ್ದು ಮುಂದಿನ ಬೆಳವಣಿಗೆ ತಿಳಿಯಬೇಕಿದೆ. ನಿನ್ನೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮಿಂದ ತೆಗೆದುಕೊಂಡ ಹಣವನ್ನು ವಾಪಸ್ ನೀಡಿಲ್ಲ ಎಂಬ ಕಾರಣಕ್ಕೆ ನಟಿ ನಯನಾ ಕೃಷ್ಣ ನಿರ್ದೇಶಕ ರಿಷಿಗೆ ಚಪ್ಪಲಿಯಿಂದ ಹೊಡೆದಿದ್ದರು,

ಅಷ್ಟೇ ಅಲ್ಲ, ಅಲ್ಲಿಗೆ ಬಂದಿದ್ದ ಮಹಿಳಾ ಸಂಘಟನೆಯ ಕೆಲವರು ಕೂಡ ನಿರ್ದೇಶಕ ರಿಷಿಗೆ ಥಳಿಸಿದ್ದರು. ನಂತರ ಅಲ್ಲಿಂದ ಪಾರಾಗಿದ್ದ ನಿರ್ದೇಶಕ ರಿಷಿ, ನೇರವಾಗಿ ಸನಿಹದಲ್ಲಿದ್ದ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ತಮಗೆ ಥಳಿಸಿದ ನಟಿ ನಯನಾ ಕೃಷ್ಣ ಹಾಗೂ ಮಹಿಳಾ ಸಂಘಟನೆಯ ಕೆಲವರ ಮೇಲೆ ದೂರು ದಾಖಲಿಸಿದ್ದರು. ಈ ಸಂಬಂಧ ನಡೆದ ನಂತರದ ಬೆಳವಣಿಗೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಂಧನ ಹಾಗೂ ಬಿಡುಗಡೆ ನಡೆದಿದೆ.

ಪ್ರಾರಂಭವಾದಾಗಿನಿಂದಲೂ ಆಗಾಗ ವಿವಾದದ ಸುಳಿಯಲ್ಲಿಯೇ ಸಿಲುಕಿದ್ದ 'ಕೊಟ್ಲಲ್ಲಪ್ಪೋ ಕೈ' ಚಿತ್ರಕ್ಕೆ ಬರೋಬ್ಬರಿ 10 ರಿಂದ 12 ಜನ ನಿರ್ಮಾಪಕರು ಎಂಬುದೇ ಸಾಕಷ್ಟು ಅಚ್ಚರಿಯ ಸಂಗತಿಯಾಗಿದೆ. ಚಿತ್ರದ ನಾಯಕಿ ನಯನಾ ಕೃಷ್ಣ ಅವರು ಚಿತ್ರದ ನಿರ್ದೇಶಕ ರಿಷಿ ಅವರಿಗೆ ಚಿತ್ರಕ್ಕಾಗಿ ರು. 8 ಲಕ್ಷ ನೀಡಿದ್ದರಂತೆ. ಆಗ, ಹಣ ವಾಪಸ್ ನೀಡಬೇಕು ಅಥವಾ ಅದಕ್ಕೆ ಪ್ರತಿಯಾಗಿ ಕೆಲವು ಏರಿಯಾದ ವಿತರಣೆ ಹಕ್ಕನ್ನು ನೀಡಬೇಕೆಂದು ಷರತ್ತು ವಿಧಿಸಿದ್ದರು ಎನ್ನಲಾಗಿದೆ.

ಆದರೆ ಚಿತ್ರೀಕರಣ ಮುಗಿದು ಸೆನ್ಸಾರ್ ಆಗಿ, ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದರೂ ತಮಗೆ ಬರಬೇಕಿದ್ದ ಹಣ ವಾಪಸ್ ಬಂದಿಲ್ಲ, ಏರಿಯಾ ಹಕ್ಕನ್ನೂ ನೀಡುತ್ತಿಲ್ಲ. ಕೇಳಿದರೆ ಹೆಣ್ಣು ಮಗಳು ಎಂಬ ಅನುಕಂಪವೂ ಇಲ್ಲದೇ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡುತ್ತಾರೆ ನಿರ್ದೇಶಕ ರಷಿ ಎಂಬುದು ನಿನ್ನೆ ಸುದ್ದಿಗೋಷ್ಠಿಯಲ್ಲಿ ನಟಿ ನಯನಾ ಕೃಷ್ಣ ಮಾಡಿದ ಆರೋಪ. ಅಲ್ಲಿಯೇ ನಡೆದ ಸಾಕಷ್ಟು ವಾದವಿವಾದಗಳ ನಂತರ ನಿನ್ನೆ ಈ 'ಚಪ್ಪಲಿ ಸೇವೆ' ರಾದ್ಧಾಂತ ನಡೆದಿತ್ತು. (ಒನ್ ಇಂಡಿಯಾ ಕನ್ನಡ)

English summary
Actress Nayanakrishna arrested and released on yesterday night (03 November 2012) at Bangalore Upparapete Police Station. She has beaten up with a Women Organization to 'Kotlallappo Kai' director Rushi with her footwear in Press Meet yesterday. she told that she gave Rs. 8 lakhs to the director for the movie and he didn't returned that. 
 
Please Wait while comments are loading...