»   » ಚಿತ್ರಗಳಲ್ಲಿ ನಟಿ ನಯನತಾರಾ ಮೈಸಿರಿ ಅನಾವರಣ

ಚಿತ್ರಗಳಲ್ಲಿ ನಟಿ ನಯನತಾರಾ ಮೈಸಿರಿ ಅನಾವರಣ

By: ಉದಯರವಿ
Subscribe to Filmibeat Kannada

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ನಯನತಾರಾ ಅವರು ಮೊನ್ನೆಯಷ್ಟೇ 28ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮಲಯಾಳಿ ಸಿರಿಯನ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ನಯನತಾರಾ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬ ಸುದ್ದಿಯೂ ಇದೆ.

ಪ್ರಭುದೇವ ಅವರನ್ನು ಮದುವೆಯಾಗುವ ಸಲುವಾಗಿ ನಯನತಾರಾ ಕ್ರಿಶ್ಚಿಯನ್ ಧರ್ಮದಿಂದ ಹಿಂದೂಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಅದೇನಾಯಿತೋ ಏನೋ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾದರು.

ಕಡೆಗೂ ಬಿಕಿನಿಗೆ ಗ್ರೀನ್ ಸಿಗ್ನಲ್ ಕೊಟ್ಟ ತಾರೆ

ಬಿಕಿನಿ ತೊಡಲ್ಲ ಎಂದು ಬಿಂಕ ತೊರಿದ್ದ ನಯನತಾರಾ ಕಡೆಗೂ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಪಡ್ಡೆಗಳ ಪಾಲಿಗೆ ಪಂಚಾಮೃತ ಸವಿದಷ್ಟೇ ಸಂತಸವಾಗಿದೆ. ಮೊದಲೇ ಮನ್ಮಥ ನಟ. ಜೊತೆಗೆ ಬಿಕಿನಿ ಸನ್ನಿವೇಶಗಳಿದ್ದರಂತೂ ಪಡ್ಡೆಗಳಿಗೆ ಮೈಯಲ್ಲಾ ಪುಳಕ ತಪ್ಪಿದ್ದಲ್ಲ.

ನಯನತಾರಾ ಜೀವನ ಪಾಠ ಏನು ಗೊತ್ತೆ?

ಜೀವನದಲ್ಲಿ ಖುಷಿ ಪಡೋದಕ್ಕೆ ದೇವರು ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದಾನೆ. ಪ್ರೀತಿ ಪ್ರೇಮದ ವಿಚಾರದಲ್ಲೂ ಅವನು ನನಗೆ ಸಹಾಯ ಮಾಡುತ್ತಾನೆ. ಶೀಘ್ರದಲ್ಲೇ ನನಗಾಗಿ ಒಂದು ಹೃದಯವನ್ನೂ ಹುಡುಕಿಕೊಡಲಿದ್ದಾನೆ... ಇದೇ ನಯನತಾರಾ ಫಿಲಾಸಫಿ.

ಸಿಲ್ಕ್ ಸ್ಮಿತಾ ಮಾಡಲಾರೆ ಎಂದಿದ್ದ ನಯನಿ

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ 'ಸೂಪರ್' ಚಿತ್ರದಲ್ಲಿ ನಟಿಸಿದ್ದ ದಕ್ಷಿಣ ಭಾರತ ಖ್ಯಾತಿಯ ನಟಿ ನಯನತಾರಾ, "ಸೀತೆಯ ಪಾತ್ರ ಮಾಡಿರುವ ನಾನು ಸಿಲ್ಕ್ ಸ್ಮಿತಾ ಪಾತ್ರ ಮಾಡುವುದು ಚೆನ್ನಾಗಿರುವುದಿಲ್ಲ" ಎಂದಿದ್ದಾರೆ. ತಮಿಳಿನಲ್ಲಿ ಮಾಡಲಿರುವ 'ಡರ್ಟಿ ಪಿಕ್ಚರ್' ಚಿತ್ರದಲ್ಲಿ ತಮಗೆ ಬಂದಿದ್ದ ಆಫರ್ ಕುರಿತು ನಯನತಾರಾ ಈ ಮಾತು ಹೇಳಿದ್ದಾರೆ.

ಸುದೀಪ್ ಚಿತ್ರಕ್ಕೆ ಕೈ ಎತ್ತಿದ ನಯನತಾರಾ

ಇತ್ತೀಚೆಗೆ ನಯನತಾರಾ ಸಂಭಾವನೆ ವಿಚಾರವಾಗಿ ಕನ್ನಡ ಚಿತ್ರಕ್ಕೂ ಕೈ ಎತ್ತಿದ್ದರು. ಕಿಚ್ಚ ಸುದೀಪ್‌ ಮುಖ್ಯಭೂಮಿಕೆಯಲ್ಲಿದ್ದ ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರಕ್ಕೆ ನಯನತಾರಾ ಇನ್ನೇನು ಬಂದೇ ಬಿಟ್ಟರು ಎನ್ನಲಾಗಿತ್ತು. ಅಷ್ಟರಲ್ಲಿ ಏನಾಯಿತೋ ಏನೋ ನಯನತಾರಾ ಹೇಳದೆ ಕೇಳದೆ ಗಾಯಬ್ ಆದರು.

ನಯನತಾರಾ ಸಂಭಾವನೆ ರು.1.50 ಕೋಟಿ

ನಯನತಾರಾ ಸಂಭಾವನೆ ಹತ್ತಿರ ಹತ್ತಿರ ರು.1 ಕೋಟಿಯಷ್ಟಿತ್ತು. ತೆಲುಗಿನಲ್ಲಿ ಆಕೆ ಅಭಿನಯದ 'ಶ್ರೀರಾಮರಾಜ್ಯಂ' ಚಿತ್ರ ಬಾಕ್ಸಾಫೀಸಲ್ಲಿ ಜೋರಾಗಿ ಸದ್ದು ಮಾಡಿದ್ದೇ ತಡ, ಈಗ ಒಂದೂವರೆ ಕೋಟಿಗೆ ತೂಗುವ ನಟಿಯಾಗಿ ಹೊರಹೊಮ್ಮಿದ್ದಾರೆ.

ಹಳೆಯ ಹಚ್ಚೆಗೂ ಸರ್ಜರಿ ಮಾಡಿಸಿದ ನಯನಿ

ನಯನತಾರಾ ಎಡ ಮುಂಗೈ ಮೇಲೆ ಹಾಕಿಸಿಕೊಂಡಿದ್ದ ಒಂದು ಸಣ್ಣ ಹಚ್ಚೆಯನ್ನೂ ಬ್ಯಾಂಕಾಕ್ ಗೆ ಹೋಗಿ ಹಳಿಸಿಕೊಂಡಿದ್ದರು. ತಮ್ಮ ಕೈಮೇಲೆ 'ಪ್ರಭು' ಎಂದು ನಯನತಾರಾ ಹಚ್ಚೆ ಹಾಕಿಸಿಕೊಂಡಿದ್ದರು. ಈ ಹಚ್ಚೆಯಿಂದ ಇಬ್ಬರ ಪ್ರಭುದೇವ ಜೊತೆಗಿನ ಲವ್ ಸ್ಟೋರಿ ಬಯಲಾಗಿತ್ತು.

ನಯನತಾರಾ ದೇಹತೂಕ ಐವತ್ತು ಕೆಜಿ ಅಷ್ಟೇ!

ಅಳಪ್ಪುಳ ಜಿಲ್ಲೆಯ ಚೆಟ್ಟಿಕುಲಂಗರ ಶ್ರೀಭಗವತಿ ದೇಗುಲದಲ್ಲಿ ನಯನತಾರಾ ಒಮ್ಮೆ ತುಲಾಭಾರ ಮಾಡಿಸಿದ್ದರು. ಇದಕ್ಕಾಗಿ ಬೆಲ್ಲವನ್ನು ದೇವರಿಗೆ ಅರ್ಪಿಸಲಾಗಿತ್ತು. ಐವತ್ತು ಕೆ.ಜಿ ತೂಗಿದ್ದರು ನಯನತಾರಾ.


ಇರಲಿ, ಈಗ ವಿಷಯ ಅದಲ್ಲ. ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಪದವಿ ಪಡೆದಿರುವ ನಯನತಾರಾ ಅವರು ಪ್ರಭುದೇವ ಅವರನ್ನು ಕೈಹಿಡಿಯಲು ಸಾಧ್ಯವಾಗಲಿಲ್ಲ. ಈಗ ನಯನತಾರಾ ಹಳೆಯದೆಲ್ಲವನ್ನೂ ಮರೆತಿದ್ದಾರೆ.

ಎಲ್ಲೋ ಒಂದು ಕಡೆ ನನ್ನನ್ನು ಅರ್ಥ ಮಾಡಿಕೊಳ್ಳುವ ಹೃದಯ ಇದ್ದೇ ಇರುತ್ತದೆ. ಈ ವಿಚಾರದಲ್ಲಿ ಭಗವಂತ ನನ್ನ ಕೈಬಿಡಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಆ ಡ್ರೀಮ್ ಬಾಯ್ ಯಾರು ಎಂಬುದು ಸದ್ಯಕ್ಕೆ ಯಾರಿಗೂ ಗೊತ್ತಿಲ್ಲ. ಆದರೆ ಹಲವಾರು ಯುವಕರಿಗೆ ನಯನತಾರಾನೇ ಈಗ ಡ್ರೀಮ್ ಗರ್ಲ್. ಅವರ ಮೈಸಿರಿ ಅನಾವರಣಗೊಳಿಸುವ ಕೆಲವು ಚಿತ್ರಗಳು ಇಲ್ಲಿವೆ ನೋಡಿ.

English summary
Actress Nayantara recently celebrates her 28th birthday. The actress beauty unveils in photos. Nayantara starred in five superhit films in the four Southern Languages including the Bodyguard in Malayalam, Adhurs and Simha in Telugu, Boss Engira Bhaskaran in Tamil and Super in Kannada.
Please Wait while comments are loading...