ನೀತು ಮದುವೆಯಾಗೋ ಹುಡುಗ ಹೇಗಿರಬೇಕು.?
'ಗಾಳಿಪಟ' ಮೂಲಕ ಹುಡುಗರ ಎದೆಯಲ್ಲಿ ಬಾಣ ಬಿಟ್ಟ ಸುಂದರಿ ನೀತು ಮದುವೆ ಯಾವಾಗ ಎಂಬುದು ಸದ್ಯಕ್ಕೆ ಉತ್ತರ ಇಲ್ಲ. ಆದ್ರೆ, ಅವರು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವುದನ್ನ ಮಾತ್ರ ಬಹಿರಂಗಪಡಿಸಿದ್ದಾರೆ.
ಫಿಲ್ಮಿಬೀಟ್ ಕನ್ನಡದಲ್ಲಿ ಮೂಡಿ ಬರುವ 'ಸಖತ್ ಶುಕ್ರವಾರ' ಟಾಕ್ ಶೋನಲ್ಲಿ ಭಾಗವಹಿಸಿದ್ದ ನೀತು, 'ಕಾಲರ್ ಆಫ್ ದಿ ವೀಕ್'ನಲ್ಲಿ ಅಭಿಮಾನಿಯೊಬ್ಬರ ಜೊತೆ ಮಾತನಾಡಿದ್ರು.
ಆ ಅಭಿಮಾನಿ ನೀತು ಅವರಿಗೆ ಒಂದು ಪ್ರಶ್ನೆ ಕೇಳಿದರು. ಅದನಪ್ಪಾ ಅದ್ರೆ, ನೀತು ನಿಮ್ಮನ್ನ ಮದುವೆಯಾಗುವ ಹುಡುಗ ಹೇಗಿರಬೇಕು.? ಎಂದರು. ಇದಕ್ಕೆ ನಗುನಗುತ್ತಲೇ ಪ್ರತಿಕ್ರಿಯಿಸಿದ ನೀತು, ತಮ್ಮ ಕನಸಿನ ರಾಜನ ಬಗ್ಗೆ ಹೇಳಿಕೊಂಡರು.

ಎಲ್ಲ ಹುಡುಗಿಯರಂತೆ ದೊಡ್ಡ ಕನಸ್ಸನ್ನ ಹೇಳದ ನೀತು, ಸಾಮಾನ್ಯವೆಂಬಂತೆ ''ಮೊದಲು ಅವರಿಗೆ ಜಿಮ್ ಬಗ್ಗೆ ಇಂಟ್ರೆಸ್ಟ್ ಇರಬೇಕು, ಅದು ನನಗೆ ಮುಖ್ಯ, ಜೊತೆಗೆ ನನಗೆ ಗೌರವಿಸಬೇಕು ಅದೇ ರೀತಿ ಎಲ್ಲರನ್ನ ಗೌರವಿಸಬೇಕು ಎಂಬುದೇ ನನ್ನ ಆಸೆ'' ಎಂದರು.
ಇನ್ನು ನೀತು ಅವರು ಸಿಂಗಲ್ ಅಥವಾ ಜಂಟಿನಾ ಎಂಬುದನ್ನ ತಿಳಿದುಕೊಳ್ಳಲು ಈ ವಿಡಿಯೋ ಸಂದರ್ಶನವನ್ನ ನೋಡಿ.


Click it and Unblock the Notifications











