ಮದುವೆ ವಿಡಿಯೊ ನಿಮಗಾಗಿ ಎಂದು ದಿಢೀರ್ ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ ನಟಿ ನೀತು!
ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ತನ್ನ ವಿಭಿನ್ನ ಪಾತ್ರಗಳ ಮೂಲಕ ಶಾಶ್ವತವಾಗಿ ನೆಲೆಸಿರುವ ನಟಿ ನೀತು ಕೆಲ ಸಮಯ ಚಿತ್ರರಂಗದಿಂದ ದೂರ ಉಳಿದು ಇದೀಗ ಹಲವು ಸಿನಿಮಾಗಳನ್ನು ಘೋಷಿಸುವುದರ ಮೂಲಕ ಮತ್ತೆ ಸಕ್ರಿಯರಾಗಿದ್ದಾರೆ. ನೀತು ಕನ್ನಡ, ಮಲಯಾಳಂ, ಕೊಂಕಣಿ ಹಾಗೂ ತುಳು ಭಾಷೆಯ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು, ಮೋಹನ್ ಲಾಲ್ ರೀತಿಯ ದೊಡ್ಡ್ ಸ್ಟಾರ್ ನಟನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಹೌದು, 2006ರಲ್ಲಿ ಬಿಡುಗಡೆಗೊಂಡಿದ್ದ ಫೋಟೊಗ್ರಫರ್ ಎಂಬ ಮಲಯಾಳಂ ಚಿತ್ರದಲ್ಲಿ ನಟಿ ನೀತು ಮೋಹನ್ ಲಾಲ್ ಎದುರು ನಾಯಕಿಯಾಗಿ ನಟಿಸಿದ್ದರು. ಹೀಗೆ ದೊಡ್ಡ ಸ್ಟಾರ್ ನಟರ ಚಿತ್ರ ಹಾಗೂ ಕನ್ನಡದ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ನಟಿ ನೀತುಗೆ ಫೇಮ್ ತಂದುಕೊಟ್ಟದ್ದು ಯೋಗರಾಜ್ ಭಟ್ ನಿರ್ದೇಶನದ ಎವರ್‌ಗ್ರೀನ್ ಚಿತ್ರ ಗಾಳಿಪಟ. ಹೌದು, ಈ ಚಿತ್ರದ ಮೂಲಕವೇ ನಟಿ ನೀತು ಕರ್ನಾಟಕದಲ್ಲಿ ಖ್ಯಾತಿಯನ್ನು ಪಡೆದರು.

ಇನ್ನು ನಟಿ ನೀತು ಸದ್ಯ ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು ತಮ್ಮ ಬಗೆಗಿನ ಏನೇ ಅಪ್‌ಡೇಟ್ ಇದ್ದರೂ ಅಥವಾ ತಾವು ಯಾವುದಾದರೂ ಸಾಹಿತ್ಯ ಬರೆದರೆ ಹಾಗೂ ಬರಹಗಳನ್ನು ಬರೆದರೆ ಅವುಗಳ ಬಗ್ಗೆ ಈ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ನೀಡುವ ನೀತು ಇಂದು (ಏಪ್ರಿಲ್ 1 ) ಬೆಳಗ್ಗೆಯೇ ಮದುವೆ ಬಗ್ಗೆ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ತಮ್ಮ ಅನುಯಾಯಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಹೌದು, "ನನ್ನ ಮದುವೆ ವಿಡಿಯೊ ನಿಮ್ಮೆಲ್ಲರಿಗಾಗಿ.. ಹರಸಿ" ಎಂದು ಬರೆದುಕೊಂಡಿರುವ ನೀತು ಶೆಟ್ಟಿ ಯುಟ್ಯೂಬ್ ಒಂದರ ವಿಡಿಯೊ ಲಿಂಕ್ ಅನ್ನೂ ಸಹ ಹಂಚಿಕೊಂಡಿದ್ದಾರೆ. ಆದರೆ ಈ ರೀತಿ ನೀತು ಪೋಸ್ಟ್ ಹಂಚಿಕೊಂಡಿರುವುದು ಏಪ್ರಿಲ್ ಫೂಲ್ ಮಾಡುವುದಕ್ಕಾಗಿ. ಹೌದು, ಇಂದು ವಿಶ್ವ ಮೂರ್ಖರ ದಿನ ಇರುವ ಕಾರಣ ನೀತು ಈ ರೀತಿ ಬರೆದುಕೊಂಡಿದ್ದು, ಅವರು ಹಂಚಿಕೊಂಡಿರುವ ವಿಡಿಯೊ ಸಹ ಏಪ್ರಿಲ್ ಫೂಲ್‌ನದ್ದಾಗಿದೆ.
ಇನ್ನು ಕೆಲವರು ಅರೇ ನೀತು ಏನು ದಿಢೀರನೆ ಮದುವೆ ಸುದ್ದಿ ತಿಳಿಸಿ ಶಾಕ್ ಕೊಟ್ಟುಬಿಟ್ಟರಲ್ಲ ಎಂದು ಲಿಂಕ್ ಓಪನ್ ಮಾಡಿ ಫೂಲ್ ಆಗಿದ್ದರೆ, ಇನ್ನೂ ಕೆಲವರು ಪೋಸ್ಟ್ ನೋಡಿದ ಕೂಡಲೇ ಇದು ಏಪ್ರಿಲ್ ಫೂಲ್ ಸಲುವಾಗಿ ಮಾಡಿರುವ ಪೋಸ್ಟ್ ಎಂದು ಪೋಸ್ಟ್ ಕಂಡ ತಕ್ಷಣವೇ ಕಾಮೆಂಟ್ ಮಾಡಿದ್ದಾರೆ.

ಇನ್ನು ನೀತು ಶೆಟ್ಟಿ ಅಭಿನಯದ ಇಂದಿರಾ ಎಂಬ ಚಿತ್ರ ಕಳೆದ ವರ್ಷ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ನೀತು ಜತೆಗೆ ಸತೀಶ್ ನೀನಾಸಂ ಹಾಗೂ ಅನಿತಾ ಭಟ್ ಸಹ ಅಭಿನಯಿಸಿದ್ದರು. ಅಲ್ಲದೇ 1888 ಎಂಬ ಚಿತ್ರದಲ್ಲಿ ನೀತು ಸಂಧ್ಯಾ ಶೆಟ್ಟಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ಚಿತ್ರೀಕರಣದ ಹಂತದಲ್ಲಿದೆ. ಇದರ ಜತೆಗೆ ಅಪರಾಧಿ ನಾನಲ್ಲ, ಪರಿಶುದ್ಧಂ ಹಾಗೂ ಇರಲಾರದೇ ಇರುವೆ ಬಿಟ್ಟುಕೊಂಡ ಎಂಬ ಕನ್ನಡ ಚಿತ್ರಗಳಲ್ಲಿ ಸಹ ನೀತು ಶೆಟ್ಟಿ ನಟಿಸಲಿದ್ದಾರೆ.
ಇನ್ನು ತಾವು ನಟಿಸುತ್ತಿರುವ 1888 ಚಿತ್ರದ ಒಂದು ಹಾಡಿಗೆ ನಟಿ ನೀತು ಶೆಟ್ಟಿ ಅವರೇ ಸಾಹಿತ್ಯವನ್ನು ಬರೆದಿದ್ದಾರೆ. 'ಒಡನೋದಿಗಳು' ಎಂಬ ಹಾಡಿಗೆ ನೀತು ಸಾಹಿತ್ಯ ಬರೆದಿದ್ದು ಈ ಹಾಡು ಮಾರ್ಚ್ 16ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದೆ.


Click it and Unblock the Notifications