»   » ಪೂರಿ ಜಗನ್ನಾಥ್ ಮಗನ ಜೊತೆ 'ಮುಂಗಾರು ಮಳೆ' ಹುಡುಗಿ.!

ಪೂರಿ ಜಗನ್ನಾಥ್ ಮಗನ ಜೊತೆ 'ಮುಂಗಾರು ಮಳೆ' ಹುಡುಗಿ.!

Posted By:
Subscribe to Filmibeat Kannada

'ಮುಂಗಾರು ಮಳೆ-2' ಚಿತ್ರದ ನಾಯಕಿ ನೇಹಾ ಶೆಟ್ಟಿ ಎಲ್ಲೋದ್ರು ಎಂಬ ಕುತೂಹಲ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಕಾಡುತ್ತಿರಬಹುದು. ಸದ್ದು ಸುದ್ದಿಯಲ್ಲದೇ ಕಾಣೆಯಾಗಿದ್ದ ನಟಿ ಈಗ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗನ ಜೊತೆ ಕಾಣಿಸಿಕೊಂಡಿದ್ದಾರೆ.

ಹೌದು, ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಪೂರಿ ಆಕಾಶ್ ಅಭಿನಯದ ಚೊಚ್ಚಲ ಚಿತ್ರದಲ್ಲಿ ಕನ್ನಡ ನಟಿ ನೇಹಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದ್ದು, ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

'ಮೆಹಬೂಬ್' ಎಂದು ಚಿತ್ರಕ್ಕೆ ಟೈಟಲ್ ಇಟ್ಟಿದ್ದು, ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ನಡೆಯುವ ರೋಚಕ ಪ್ರೇಮಕಥೆಯನ್ನ ಒಳಗೊಂಡಿದೆ. ನಾಯಕ ಪೂರಿ ಆಕಾಶ್ ಭಾರತದ ಸೈನಿಕನಾಗಿ ಕಾಣಿಸಿಕೊಂಡಿದ್ರೆ, ನೇಹಾ ಶೆಟ್ಟಿ ಪಾಕಿಸ್ತಾನದ ಹುಡುಗಿಯಾಗಿ ಪಾತ್ರವನ್ನ ನಿಭಾಯಿಸಿದ್ದಾರೆ.

Actress Neha Shetty telugu movie trailer

ನೇಹಾ ಶೆಟ್ಟಿಗೆ ಇದು ಮೊದಲ ತೆಲುಗು ಸಿನಿಮಾ ಆಗಿದ್ದು, ಚೊಚ್ಚಲ ಚಿತ್ರದಲ್ಲಿ ಗಮನ ಸೆಳೆಯುವಂತಹ ಪಾತ್ರ ಮಾಡಿದ್ದಾರೆ. ಸದ್ಯ, ಟ್ರೈಲರ್ ನಲ್ಲಿ ಆಕರ್ಷಿಸಿರುವ ನಟಿ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ ಎಂಬ ಭರವಸೆ ಹುಟ್ಟಿಸಿದ್ದಾರೆ.

ಪೂರಿ ಜಗನ್ನಾಥ್ ಮಗನ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಿನಿಲೋಕಕ್ಕೆ ಪರಿಚಯಿಸುತ್ತಿದ್ದಾರೆ. ಸದ್ಯ, ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ಮೆಹಬೂಬ್' ಮೇ 11 ರಂದು ತೆರೆಕಾಣುತ್ತಿದೆ.

English summary
Puri Jagannadh's son starrer 'Mehbooba' movie trailer released. features Akash Puri & Neha Shetty, Music composed by Sandeep Chowta and produced under Puri Jagannadh Touring Talkies banner. Mehbooba is scheduled to release worldwide on 11th May 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X