Nidhi Subbaiah : ಯಪ್ಪಾ ಯಪ್ಪಾ ಯಪ್ಪಾ ಇದು ನಿಧಿ ಸುಬ್ಬಯ್ಯ ಕಣಪ್ಪಾ

By ಫಿಲ್ಮಿಬೀಟ್ ಡೆಸ್ಕ್

ನಿಧಾನವಾಗಿ ಬಿಸಿಲ ಝಳ ಹೆಚ್ಚಾಗುತ್ತಿದೆ. ಸೆಕೆ ಕೂಡ ಅಧಿಕವಾಗುತ್ತಿದೆ. ಅದಕ್ಕೆ ಏನೋ ಗೊತ್ತಿಲ್ಲ ನಟಿ ನಿಧಿ ಸುಬ್ಬಯ್ಯ ಹೀಗೆ ಮೇಲೊಂದು ಬಟ್ಟೆ ಸುತ್ತಿಕೊಂಡು ಬೋಲ್ಡ್ ಫೋಟೊಶೂಟ್ ಮಾಡಿಸಿದ್ದಾರೆ. ಇತ್ತೀಚೆಗೆ 13 ಕೆಜಿ ತೂಕ ಕೂಡ ಇಳಿಸಿಕೊಂಡಿರುವ 'ಪಂಚರಂಗಿ' ಚೆಲುವೆ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.

ಖ್ಯಾತ ಫೋಟೊಗ್ರಾಫರ್ ನಿಮಿಷ್ ಜೈನ್ ಈ ಸ್ಪೆಷಲ್ ಫೋಟೊಶೂಟ್ ಮಾಡಿದ್ದಾರೆ. ಮೇಕಪ್ ಆರ್ಟಿಸ್ಟ್ ಮಂಜುನಾಥ್ ಮೇಕ್‌ಓವರ್ ಇದೆ. ಸದ್ಯ ಈ ಫೋಟೊ ಸಖತ್ ವೈರಲ್ ಆಗಿದೆ. ಆದರೆ ನೆಟ್ಟಿಗರು ಮಾತ್ರ ಇದು ಸ್ವಲ್ಪ ಜಾಸ್ತಿ ಆಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೈತುಂಬಾ ಬಟ್ಟೆ ಹಾಕಿಕೊಳ್ಳೋದು ಬಿಟ್ಟು ಏನಿದು ಹುಚ್ಚಾಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಸೆಕೆ ಜಾಸ್ತಿ ಆಗಿರಬೇಕು ಅದಕ್ಕೆ ಹೀಗೆ ಅಂತ ಬರೆದಿದ್ದಾರೆ.

Actress Nidhi Subbaiah Makeover: Pancharangi Actress Trolled For Hot Photoshoot

ಫೋಟೊಶೂಟ್ ಮಾಡಿಸಿ ಒಂದೇ ಒಂದೇ ಫೋಟೊ ಶೇರ್ ಮಾಡಿರುವ ನಿಧಿ ಸುಬ್ಬಯ್ಯ "ಕೆಲವಕ್ಕೆ ನಾಂದಿ, ಕೆಲವಕ್ಕೆ ಉಪಸಂಹಾರ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ನಿಧಿ ಸುಬ್ಬಯ್ಯ ಅಭಿಮಾನಿಗಳು ಮಾತ್ರ ಲೈಕ್ಸ್, ಕಾಮೆಂಟ್ಸ್‌ ಮೂಲಕ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇಂತದ್ದೇ ಬಿಂದಾಸ್ ಫೋಟೊಶೂಟ್‌ಗಳನ್ನು ನಿಧಿ ಸುಬ್ಬಯ್ಯ ಮಾಡಿಸುತ್ತಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಿದ್ದು ಅದಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಸಿಗುತ್ತಿದೆ.

ಬಾಲಿಗೆ ಪ್ರವಾಸದ ವೇಳೆ ನಟಿ ನಿಧಿ ಸುಬ್ಬಯ್ಯ ಮೊನೊಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಆ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಅದು ಕೂಡ ಸಖತ್ ವೈರಲ್ ಆಗ್ತಿದೆ. ಸದ್ಯ ಚಿತ್ರರಂಗದಲ್ಲಿ ಕೊಡಗಿನ ಚೆಲುವೆ ಕ್ರೇಜ್ ಕಮ್ಮಿ ಆಗಿದೆ. ಟಾಲಿವುಡ್, ಬಾಲಿವುಡ್‌ಗೆ ಹೋಗಿ ಬಂದರೂ ಪ್ರಯೋಜನವಾಗಲಿಲ್ಲ. ಒಂದೆರಡು ಸಿನಿಮಾಗಳು ಮಾತ್ರ ಕೊಡಗಿನ ಚೆಲುವೆ ಕೈಯಲ್ಲಿದೆ.

ಡಯೆಟ್, ವರ್ಕೌಟ್ ಮೂಲಕ ನಿಧಿ ಸುಬ್ಬಯ್ಯ 13 ಕೆಜಿ ತೂಕ ಇಳಿಸಿದ್ದಾರೆ. ಜಂಕ್‌ ಫುಡ್‌ಗೆ ಗುಡ್‌ಬೈ ಹೇಳಿ ಜಿಮ್‌ನಲ್ಲಿ ವರ್ಕೌಟ್ ಮಾಡಿ ಸಣ್ಣಗಾಗಿದ್ದಾರೆ. ವರ್ಕೌಟ್‌ ಭಾಗವಾಗಿ ಸೈಕ್ಲಿಂಗ್‌ ಕೂಡ ಸಹಾಯ ಮಾಡಿದೆ. ಅಭಿಷೇಕ್ ಗೌಡ ತರಬೇತಿಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಧಿ ಕನ್ನಡ ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದರು.

Actress Nidhi Subbaiah Makeover: Pancharangi Actress Trolled For Hot Photoshoot

ಕೊಡಗಿನಲ್ಲಿ ಹುಟ್ಟಿದ ನಿಧಿ ಸುಬ್ಬಯ್ಯ ಓದಿ ಬೆಳೆದಿದ್ದು ಮೈಸೂರಿನಲ್ಲಿ. ಸೇಲಿಂಗ್‌ ಕ್ರೀಡೆಯಲ್ಲಿ ಬಹಳ ಆಸಕ್ತಿಯಿದ್ದ ನಿಧಿ ಸಾಕಷ್ಟು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದರು. ಅದೇ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ಚೆಲುವೆ ಕಾರಣಾಂತರಗಳಿಂದ ಅದನ್ನು ಬಿಟ್ಟು ಮಾಡೆಲಿಂಗ್ ಆರಂಭಿಸಿದರು. 2009ರಲ್ಲಿ 'ಅಭಿಮಾನಿ' ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮರುವರ್ಷ ಬಂದ 'ಪಂಚರಂಗಿ' ಸಿನಿಮಾ ಬ್ರೇಕ್ ಕೊಟ್ಟಿತ್ತು.

'ವೀರಬಾಹು', 'ಕೃಷ್ಣನ್‌ ಮ್ಯಾರೇಜ್ ಸ್ಟೋರಿ', 'ಅಣ್ಣಾಬಾಂಡ್','ಆಯುಷ್ಮಾನ್‌ಭವ' ನಿಧಿ ಸುಬ್ಬಯ್ಯ ನಟನೆಯ ಕೆಲ ಪ್ರಮುಖ ಸಿನಿಮಾಗಳು. ಸದ್ಯ ದಿಗಂತ್ ನಟನೆಯ 'ಎಡಗೈ ಅಪಘಾತಕ್ಕೆ ಕಾರಣ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೆಸರಿಡದ ಮತ್ತೊಂದು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಫೆಬ್ರವರಿ 11, 2017ರಲ್ಲಿ ವಿರಾಜಪೇಟೆ ಖಾಸಗಿ ರೆಸಾರ್ಟ್‌ವೊಂದರಲ್ಲಿ ಉದ್ಯಮಿ ಲವೇಶ್‌ ಜೊತೆ ನಿಧಿ ಸುಬ್ಬಯ್ಯ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

More from Filmibeat

English summary
Actress Nidhi Subbaiah Makeover: Pancharangi Actress Trolled For Hot Photoshoot. She also Posted A Throwback Monokini Swimsuit Photo. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X